ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಅತಿಥೇಯರನ್ನು ಭಾರತದ ಬೌಲರ್‌ಗಳು 227ಕ್ಕೆ ಆಲೌಟ್ ಮಾಡಿದ್ದಾರೆ.
ಶೇರ್-ಎ-ಬಾಂಗಾ ರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಬಾಂಗ್ಲಾದೇಶ ಮಾಮಿನಲ್-ಉಲ್-ಹಕ್ (84 ರನ್, 157 ಎಸೆತ, 12 ಬೌಂಡರಿ, 1 ಸಿಕ್ಸರ್) ಫಲವಾಗಿ 73.5 ಓವರ್‌ಗಳಲ್ಲಿ 227 ರನ್‌ಗಳಿಗೆ ಶರಣಾಯಿತ್ತು.

ಭಾರತದ ಪರ ಮೊಹಮ್ಮದ್ ಸಿರಾಜ್(9-1-39-0), ಉಮೇಶ್ ಯಾದವ್(15-4-25-4), ಜೈದೇವ್ ಉನಾದ್ಕತ್(16-2-20-2), ಆರ್.ಅಶ್ವಿನ್(21.5-3-71-4), ಅಕ್ಷರ್ ಪಟೇಲ್(12-3-32-0) ವಿಕೆಟ್ ಪಡೆದಿದ್ದಾರೆ.
ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ದಿನದಾಟದ ಅಂತ್ಯಕ್ಕೆ 08 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 19 ರನಗಳಿಸಿದೆ.