ನವದೆಹಲಿ: ಐಐಟಿ ಮದ್ರಾಸ್ ಭಾರತದ ದೇಶದಲ್ಲಿ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನವನ್ನು, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು (IISc) ಪಡೆದಿದ್ದು, ಅತ್ಯುತ್ತಮ ವಿಶ್ವವಿದ್ಯಾನಿಲಯ ವಿಭಾಗದಲ್ಲಿ, IISc ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಇನ್ನು ಉಳಿದಂತೆ ದೆಹಲಿಯ ಜೆಎನ್ಯು (JNU) ಮೂರನೇ ಸ್ಥಾನವನ್ನು ಪಡೆಡಿದೆ.
ಹೌದು ಕೇಂದ್ರ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಫ್ರೇಮ್ವರ್ಕ್ (NIRF) 2023ರ ದೇಶದ ಉತ್ತಮ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದ್ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್ ಅಗ್ರಸ್ಥಾನ ಪಡೆದಿದೆ. ಐಐಟಿ ಮದ್ರಾಸ್ ದೇಶದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಟಾಪ್ 1 ಆಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು (IISc) ಎರಡನೇ ಸ್ಥಾನದಲ್ಲಿದೆ. ಅತ್ಯುತ್ತಮ ವಿಶ್ವವಿದ್ಯಾನಿಲಯ ವಿಭಾಗದಲ್ಲಿ, IISc ಬೆಂಗಳೂರು ಅಗ್ರ ಸ್ಥಾನದಲ್ಲಿದ್ದು, ದೆಹಲಿಯ ಜೆಎನ್ಯು (JNU) ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಂತರದ ಸ್ಥಾನದಲ್ಲಿದೆ.
ಉಳಿದಂತೆ ದೇಶದ ಅತ್ಯುತ್ತಮ ಕಾಲೇಜುಗಳ ಪೈಕಿ ದೆಹಲಿ ವಿಶ್ವವಿದ್ಯಾಲಯ ವ್ಯಾಪ್ತಿಯ ಮಿರಾಂಡ ಹೌಸ್ ಮೊದಲ ಸ್ಥಾನ ಪಡೆದರೆ, ಹಿಂದೂ ಕಾಲೇಜು ಹಾಗೂ ಚೆನೈನ ಪ್ರೆಸಿಡೆನ್ಸಿ ಕಾಲೇಜ್ ನಂತರದ ಸ್ಥಾನದಲ್ಲಿದೆ. ಮ್ಯಾನೇಜ್ಮೆಂಟ್ ಕಾಲೇಜುಗಳ ಪೈಕಿ ಅಹಮದಾಬಾದಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(IIM), ಮೊದಲ ಸ್ಥಾನ ಪಡೆದರೆ, IIM ಬೆಂಗಳೂರು ಹಾಗೂ ಕೋಜಿಕೋಡ್ ನಂತರದ ಸ್ಥಾನದಲ್ಲಿವೆ.
ಫಾರ್ಮಸಿಯಲ್ಲಿ, ಹೈದರಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಮೊದಲ ಸ್ಥಾನದಲ್ಲಿದೆ. ಜಾಮಿಯಾ ಹಮ್ದರ್ದ್ ಮತ್ತು ಬಿಟ್ಸ್ ಪಿಲಾನಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಕಾನೂನು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಮೊದಲ ಸ್ಥಾನದಲ್ಲಿದ್ದರೆ. ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿ, ಹೈದರಾಬಾದಿನ NALSAR ವಿಶ್ವವಿದ್ಯಾಲಯ ನಂತರದ ಸ್ಥಾನದಲ್ಲಿದೆ.