ಈಗಾಗಲೇ ರಾಜ್ಯದಲ್ಲಿ ಬೇಸಿಗೆಯ ಝಳ ಜೋರಾಗಿದ್ದು, ಜನ ಜಾನುವಾರು ಪರಿತಪಿಸುವಂತಾಗಿದೆ. ಸೂರ್ಯ ನಿಗಿ ನಿಗಿ ಕೆಂಡದಂತೆ ಸುಡುತ್ತಿದ್ದಾನೆ. ಹಲವು ಜಿಲ್ಲೆಗಳಲ್ಲಿ ತಾಪಮಾನ ನೋಡಿದರೆ, ಅಯ್ಯೋ ದೇವರೇ ಎನಿಸುತ್ತದೆ. ಈ ಮಧ್ಯೆ ಬೆಂಗಳೂರಿಗೂ ಬೇಸಿಗೆಯ ಬೇಗೆ ತಪ್ಪಿಲ್ಲ !
ಬೆಂಗಳೂರಿನ ಜನತೆಗೆ ಬಿಗ್ ಶಾಕಿಂಗ್ ನ್ಯೂಸ್ ಒಂದನ್ನು ಹವಾಮಾನ ಇಲಾಖೆ ನೀಡಿದೆ. ನಾಳೆ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವಾಗಿ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಈ ಶತಮಾನದ ಅತ್ಯಂತ ಹೆಚ್ಚಿನ ತಾಪಮಾನ ಎಂದು ಹವಾಮಾನ ಇಲಾಖೆ ಪ್ರಕರಣೆ ಹೊರಡಿಸಿದೆ.
ಮೇ 1 ರಂದು ರಾಜ್ಯದ ರಾಜಧಾನಿ ನಗರ ಬೆಂಗಳೂರು ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಲಿದ್ದು, ಬೆಂಗಳೂರಿನ ಮಂದಿ ಎಚ್ಚರವಹಿಸುವುದು ಸೂಕ್ತ ಎಂದು ಇಲಾಖೆ ಪ್ರಕಟಣೆ ಹೊರಡಿಸಿದೆ.