ನಗರದಲ್ಲಿ ಮೋದಿ (modi) ಆಗಮನದ ಕಾರಣ ಭಾರೀ ಭದ್ರತೆ ಮಾಡಿಕೊಳ್ಳಲಾಗ್ತಿದೆ, ಜೊತೆಗೆ ಬೆಂಗಳೂರಿನಲ್ಲಿ ಮೋದಿ ರೋಡ್ ಶೋ (modi road show) ಜನಸಂಚಾರದ ಮೇಲೂ ಪರಿಣಾಮ ಬೀರಲಿದೆ. ವೀಕೆಂಡ್ (weekend) ಇರೋದ್ರಿಂದ ಕೆಲ ಮಾರ್ಗ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 7 ಗಂಟೆ ತನಕ ಮಾರ್ಗ ಬದಲಾವಣೆ ಮಾಡಲಾಗಿದ್ದು, ಕೆಲ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ನಿಷೇಧ ಹೇರಲಾಗಿದೆ.

ಪ್ಯಾಲೇಸ್ ರಸ್ತೆ (palace road), ಜಯಮಹಲ್ ರಸ್ತೆ (jayamahal road), ರಮಣ ಮಹರ್ಷಿ ರಸ್ತೆ (ramana maharshi road), ಮೌಂಟ್ ಕಾರ್ಮೆಲ್ ರಸ್ತೆ, ಎಂ.ವಿ.ಜಯರಾಮ್ ರಸ್ತೆ, ಸಿ.ವಿ. ರಾಮನ್ ರಸ್ತೆ, ನಂದಿದುರ್ಗ ರಸ್ತೆ, ಮೇಕ್ರಿ ಸರ್ಕಲ್‌ನಿಂದ ಯಶವಂತಪುರ ರಸ್ತೆ, ವಸಂತ ನಗರ ರಸ್ತೆ, ಬಳ್ಳಾರಿ ರಸ್ತೆ, ತರಬಾಳು ರಸ್ತೆ ಮತ್ತು ಮೌಂಟ್ ಕಾರ್ಮೆಲ್ ಕಾಲೇಜ್ ರಸ್ತೆಯಲ್ಲಿ ಸಾರ್ವಜನಿಕರಿಗೆ ವಾಹನಗಳ ನಿಲುಗಡೆಗೆ ನಿಷೇಧ ಹೇರಲಾಗಿದೆ.

ಇದಲ್ಲದೆ ಮೇಬ್ರಿ ಸರ್ಕಲ್‌ನಿಂದ ಯಶವಂತಪುರ ರಸ್ತೆವರೆಗೆ ಭಾರೀ ಸರಕು ಸಾಗಾಣಿಕಾ ವಾಹನಗಳ ಸಂಚಾರವನ್ನು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ನಗರದೊಳಗೆ ಪ್ರವೇಶಿಸುವುದನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
CMTI ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಹೆಬ್ಬಾಳ ಜಂಕ್ಷನ್, ನ್ಯೂ ಬಿಇಎಲ್ ಜಂಕ್ಷನ್, ಬಿಹೆಚ್‌ಇಎಲ್ ಜಂಕ್ಷನ್, ಬಸವೇಶ್ವರ ಸರ್ಕಲ್, ಓಲ್ಡ್ ಉದಯ ಟಿವಿ, ಹಜ್ ಕ್ಯಾಂಪ್ ನಂದಿದುರ್ಗ, ಯಶಪುಂತಪುರ ಗೋವರ್ಧನ್ ಬಳಿಯಿರುವ ರಸ್ತೆಯನ್ನು ಭಾರೀ ಸರಕು ಸಾಗಾಣಿಕೆ ವಾಹನಗಳು ಮಾರ್ಗ ಬದಲಾವಣೆಗೆ ಬಳಸಿಕೊಳ್ಳಬಹುದಾಗಿದೆ.

ಇದಿಷ್ಟು ಸಂಚಾರಿ ಮಾರ್ಗಗಳ ಬದಲಾವಣೆಯಾದ್ರೆ. ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಒಟ್ನಲ್ಲಿ ವೀಕೆಂಡ್‌ನಲ್ಲಿ ಮೋದಿ ಬರ್ತಿರೋದು ಕಮಲಬಳಗಕ್ಕೆ ಹೊಸ ಹುರುಪು ತುಂಬೋ ವಿಶ್ವಾಸ ಮೂಡಿಸಿದೆ.