ಬೆಂಗಳೂರಿನ ರಸ್ತೆಯಲ್ಲಿ ಬೈಕ್ ಟಚ್ ಆಗಿದ್ದಕ್ಕೆ ಕಿರಿಕ್ ನಡೆದಿದ್ದು, ಆ ಬಳಿಕ ಕಾರಿನಿಂದ ಡಿಕ್ಕಿ ಹೊಡೆದು ಓರ್ವನ ಕೊಲೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ಯುವಕನನ್ನು ಮಹೇಶ್ ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಹತ್ತು ಘಂಟೆ ಸುಮಾರಿನಲ್ಲಿ ಬೈಕ್ನಲ್ಲಿ ಮೂವರು ಯುವಕರಾದ ಮಹೇಶ್, ಬಾಲಾಜಿ ಮತ್ತು ನಿಖಿಲ್ ಬೈಕ್ನಲ್ಲಿ ತೆರಳುವಾಗ ಕಾರಿಗೆ ಬೈಕ್ ಟಚ್ ಆಗಿತ್ತು. ಈ ವೇಳೆ ಕಾರು ಚಾಲಕ ಹಾಗು ಯುವಕರ ಜೊತೆಗೆ ಜಗಳ ಆಗಿದೆ.
ಜಗಳದ ನಡುವೆ ಯುವಕರು ಹೊರಡಲು ಮುಂದಾಗಿದ್ದಾರೆ. ಹುಡುಗರು ಎಸ್ಕೇಪ್ ಆಗ್ತಿದ್ದಾರೆ ಎಂದು ಕಾರಿನಲ್ಲಿ ಚೇಸ್ ಮಾಡಿದ ಚಾಲಕ, ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಮಹೇಶ್ ಎಂಬಾತ ಸಾವನ್ನಪ್ಪಿದ್ದು, ಬಾಲಾಜಿ ಎಂಬಾತ ದೂರು ನೀಡಿದ್ದಾನೆ. ಯುವಕನ ದೂರಿನ ಅನ್ವಯ ಕೇಸ್ ದಾಖಲು ಮಾಡಿಕೊಂಡಿದ್ದಾರೆ ವಿದ್ಯಾರಣ್ಯಪುರ ಪೊಲೀಸರು.