ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಅತಿ ಸೂಕ್ಷ್ಮ ಕ್ಷೇತ್ರವಾಗಿ ಪರಿಗಣನೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಈ ಬಗ್ಗೆ ದಾಖಲಾತಿ ಬಿಡುಗಡೆ ಮಾಡಿರುವ ಚುನಾವಣಾ ಆಯೋಗ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನ ಅತೀ ಸೂಕ್ಷ್ಮ ಕ್ಷೇತ್ರ ಅಂತ ಪರಿಗಣಿಸುವಂತೆ ಪತ್ರ ಬಂದಿತ್ತು. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ. ಎನ್. ಮಂಜುನಾಥ್ ಪತ್ರ ಬರೆದಿದ್ದರು.
ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಡಾ. ಮಂಜುನಾಥ್ ಅವರು ಅದರಲ್ಲಿ ಕ್ಷೇತ್ರಕ್ಕೆ
ಅರಸೇನಾ ಪಡೆ ನಿಯೋಜನೆಗೆ ಮನವಿ ಮಾಡಿದ್ದರು. ಪ್ರಭಾವಿಯೊಬ್ಬರು ಇಲ್ಲಿ ಸ್ಪರ್ಧಿಸಿದ್ದು, ಆಡಳಿತ ದುರುಪಯೋಗ ಸಾಧ್ಯತೆ ಆರೋಪವು ಪತ್ರದಲ್ಲಿತ್ತು.
ಇದನ್ನ ಪರಿಶೀಲಿಸಲು ಕೇಂದ್ರ ಮುಖ್ಯ ಚುನಾವಣಾ ಆಯೋಗಕ್ಕೆ ಪತ್ರವನ್ನು ರಾಜ್ಯ ಮುಖ್ಯ ಚುನಾವಣಾ ಆಯೋಗ ಕೂಡ ಬರೆದಿತ್ತು.
ಇದೀಗ ಅತಿಸೂಕ್ಷ್ಮ ಲೋಕಸಭಾ ಕ್ಷೇತ್ರ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಎಂದು ಪರಿಗಣಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಡಿಸಿಗೆ ಮುಖ್ಯ ಚುನಾವಣಾ ಆಯೋಗ ಪತ್ರವನ್ನು ಬರೆದಿದೆ.
ಅರಸೇನಾಪಡೆ ನೇಮಿಸಲು ಆಯೋಗ ಪತ್ರದಲ್ಲಿ ಸೂಚಿಸಿದೆ.