ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಅಪಘಾತಕ್ಕೆ ಕಡಿವಾಣ ಹಾಕೋದಕ್ಕೆ ಪೊಲೀಸರು ಮುಂದಾಗಿದ್ದಾರೆ. ಹೆದ್ದಾರಿಯಲ್ಲಿ ಅತೀ ವೇಗ ಸಂಚಾರದಿಂದ ಸಾಕಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಹೀಗಾಗಿ ಈಗ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸರು ವೇಗದ ಸಂಚಾರಕ್ಕೆ ಕಡಿವಾಣ ಹಾಕಿದ್ದಾರೆ.

ಡಿಸಿ-ಎಸ್ಪಿ ನೇತೃತ್ವದಲ್ಲಿ ಹೆದ್ದಾರಿ ಪರಿಶೀಲನೆ ನಡೆಸಲಾಗಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿರುವ ಹಲವು ಲೋಪಗಳನ್ನ ತಡೆಯೋದಕ್ಕೆ ಸರ್ಕಾರ ಕೂಡ ಮುಂದಾಗಿದೆ.. ಇದಕ್ಕಾಗಿ ಈಗಾಗ್ಲೆ ಸರ್ಕಾರ ಹಲವು ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದ್ದು, ಸದ್ಯಕ್ಕೆ ಅಪಘಾತ ತಡೆಯಲು ಸ್ಪೀಡರ್ ಗನ್ ಕಾರ್ಯಾಚರಣೆ ಮಾಡಲು ಪೊಲೀಸ್ ಇಲಾಖೆ ನಿರ್ಧಾರವನ್ನ ಮಾಡಿದೆ.
ಸ್ಪೀಡರ್ ಗನ್ ಬಳಸಿ ಅಪಘಾತ ಕಡಿವಾಣಕ್ಕೆ ಮುಂದಾಗಿದ್ದು, ಮಂಡ್ಯದ ಕೋಡಿಶೆಟ್ಟಿಪುರ ಗ್ರಾಮದ ಬಳಿ ಸ್ಪೀಡರ್ ಗನ್ ಅಳವಡಿಕೆ ಮಾಡಲಾಗಿದೆ. ವೇಗಮಿತಿ ಉಲ್ಲಂಘಿಸಿದವರ ವಿರುದ್ದ ಕಾನೂನು ಕ್ರಮದ ಎಚ್ಚರಿಕೆ ತೆಗೆದುಕೊಳ್ಳುವುದಾಗಿ ಹೇಳಿರುವ ಅಧಿಕಾರಿಗಳು. ದಂಡ ವಿಧಿಸಿ ಪ್ರಕರಣ ದಾಖಲು ಮಾಡುವ ಬಗ್ಗೆ ಸೂಚನೆಯನ್ನ ನೀಡಿದ್ದಾರೆ. ಸ್ಪೀಡರ್ ಗನ್ ಪರಿಶೀಲಿಸಿದ ಎಸ್ಪಿ ಎನ್.ಯತೀಶ್. ವಾಹನ ಚಾಲನೆ ಮಾಡವವರು ಸ್ಪೀಡ್ ಲಿಮಿಟ್ ಅನುಸರಿಸುವಂತೆ ಮನವಿಯನ್ನ ಮಾಡಿಕೊಂಡಿದ್ದಾರೆ.

ಒಟ್ಟಾರೆಯಾಗಿ ಇಷ್ಟು ದಿನಗಳಿಂದ ಕಾಲ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಡೆಯುತ್ತಿದ್ದ ಅಪಘಾತ ಪ್ರಕರಣಗಳಿಗೆ ಈಗ ಮುಕ್ತಿ ಸಿಗುವ ಎಲ್ಲಾ ಸಾಧ್ಯತೆಗಳು ದಡ್ಡವಾಗಿ ಕಂಡು ಬರುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಮೊದಲೇ ಮುನ್ನೆಚ್ಚರಿಕೆಯನ್ನ ತೆಗೆದುಕೊಂಡಿದ್ದರೆ ಈ ಹಿಂದೆ ನಡೆದ ಅಪಘಾತದಲ್ಲಿ ಯಾರೂ ಕೂಡ ಸಾವನ್ನಪ್ಪುತ್ತಿರಲಿಲ್ಲ. ಈಗ ಸದ್ಯಕ್ಕೆ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೆ , ಸರ್ಕಾರ ಈಗ ಸ್ಪೀಡರ್ ಗನ್ ಅಳವಡಿಸೋದಕ್ಕೆ ನಿರ್ಧಾರ ಮಾಡಿದೆ.