ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ನಾಗವಾರದ ಸೆಂಟ್ ಫಿಲೊಮಿನ ಆಸ್ಪತ್ರೆಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದು, ಗೋವಿಂದಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಇಲಾಖೆಯ ಸಿಟಿ ಎಸ್.ಬಿಗೆ ಇ-ಮೇಲ್ ಬಂದಿದೆ. ಸೆಂಟ್ ಫಿಲೊಮಿನಾ ಆಸ್ಪತ್ರೆಗೆ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ಬಂದ ತಕ್ಷಣ ಅಲರ್ಟ್ ಆದ ಪೊಲೀಸ್ರು ಇದೊಂದು ಹುಸಿ ಬೆದರಿಕೆ ಅನ್ನೋದನ್ನು ಖಚಿತ ಮಾಡಿಕೊಂಡಿದ್ದಾರೆ.
ಸೆಂಟ್ ಫಿಲೊಮಿನಾ ಆಸ್ಪತ್ರೆ ಮಾತ್ರವಲ್ಲದೆ ಬೆಂಗಳೂರಿನ ಒಟ್ಟು 6 ಆಸ್ಪತ್ರೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. 6 ಆಸ್ಪತ್ರೆಗಳಿಗೆ ಇ-ಮೇಲ್ ಅಡ್ರೆಸ್ಗಳಿಗೆ ಸಿಸಿ ಮಾಡಿ ಬೆದರಿಕೆ ಹಾಕಿದ್ದಾರೆ ಕಿಡಿಗೇಡಿಗಳು. courtgroup03@beeble.com ಅಡ್ರೆಸ್ನಿಂದ ಇ-ಮೇಲ್ ಬಂದಿದೆ. ನಾರಾಯಣ ಹೆಲ್ತ್ ಸಿಟಿ, ಸಾಗರ್ ಆಸ್ಪತ್ರೆ, ಸೆಂಟ್ ಫಿಲೋಮಿನಾ, ಸಮರ್ಥ, ಜೆ.ಎಂ.ಜೆ ಹಾಗೂ ವಿಮಲ ಆಲಯ್ಯ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ.
ಈ ಹಿಂದೆ 60ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಇ-ಮೇಲ್ ಬಂದಿತ್ತು. ಪೊಲೀಸ್ರು ತನಿಖೆ ಮಾಡಿದ್ರು. ಆದರೆ ಇ-ಮೇಲ್ ಬೆದರಿಕೆ ಬಂದಿದ್ದು ಎಲ್ಲಿಂದ ಅನ್ನೋದನ್ನೇ ಪೊಲೀಸ್ರು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಆ ಬಳಿಕ ಕೆಲವೇ ದಿನಗಳಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಈಗಲೂ ಕೂಡ ಎನ್ಐಎ ಅಧಿಕಾರಿಗಳನ್ನು ಶಾಲೆಗಳಿಗೆ ಬೆದರಿಕೆ ಹಾಕಿದ್ದು ಇವರೇನಾ..? ಅನ್ನೋ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಪೊಲೀಸರು ಮನವಿ ಮಾಡಿಕೊಂಡಿಲ್ಲ. ತಿಳಿದುಕೊಳ್ಳುವ ಆಸಕ್ತಿಯೂ ಇದ್ದಂತಿಲ್ಲ. ಇದೀಗ ಮತ್ತೊಮ್ಮೆ ಬೆದರಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಮತ್ತೊಂದು ಘಟನೆ ನಡೆದರೂ ಅಚ್ಚರಿಯಿಲ್ಲ ಎನ್ನುವಂತಾಗಿದೆ.