ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ ಐಟಿ ಅಧಿಕಾರಿಗಳ ತಂಡ ಭರ್ಜರಿ ಬೇಟೆಯಾಡಿದೆ. ಮುಂಬೈನ (Mumbai) ಪ್ರಖ್ಯಾತ ಜ್ಯುವೆಲ್ಲರಿ ಶಾಪ್ ಒಂದರ ಮೇಲೆ ಧಿಡೀರ್ ದಾಳಿ ನಡೆಸಲಾಗಿದ್ದು, ಕೋಟಿ ಕೋಟಿ ಹಣ ಮತ್ತು ಚಿನ್ನಾಭರಣವನ್ನ ವಶಪಡಿಸಿಕೊಳ್ಳಲಾಗಿದೆ.

ಸುಮಾರು ಚೀಲಗಳಲ್ಲಿ ಕೋಟ್ಯಂತರ ರೂಪಾಯಿ ಹಣ ತುಂಬಿಟ್ಟಿದ್ದನ್ನ ಕಂಡಿ ಅರೆಕ್ಷಣ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಈ ದಾಳಿಯಲ್ಲಿ ಬರೋಬ್ಬರಿ 26 ಕೋಟಿ ರೂ. (26 crore) ನಗದು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಮುಂಬೈ ಮೂಲದ ಸುರಾನ (Surana) ಎಂಬ ಚಿನ್ನಾಭರಣಗಳ ಮಳಿಗೆಯ ಮೇಲೆ ಈ ದಾಳಿ ನಡೆಸಲಾಗಿದ್ದು, ಅಕ್ರಮ ಹಣ ವರ್ಗಾವಣೆ ನಡೆಉತ್ತಿದೆ ಎಂಬ ಮಾಹಿತಿಯನ್ನ ಆಧರಿಸಿ ಐಟಿ ಟೀಂ (IT) ಈ ಕಾರ್ಯಾಚರಣೆ ನಡೆಸಿದೆ.











