ರಾಜ್ಯದಲ್ಲಿ ಕರೋನಾ ಮತ್ಯು ಓಮಿಕ್ರಾನ್ ರೂಪಾಂತರಿ ತಳಿ ಹವಾಳಿ ಹೆಚ್ಚುತ್ತಿದ್ದು, ಕಳೆದ ಬಾರಿ ಆಗಿದಂತ ಅನಾಹುತವಾಗದೇ ಇರಲು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಕಠಿಣ ನಿಯಮಗಳನ್ನ ಜಾರಿ ಮಾಡಿದೆ. ಅದರಂತೆ, ವಾರಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ರದ್ದುಕೊಳಿಸಲಾಗಿದೆ
ಹೆಚ್ಚು ಓದಿದ ಸ್ಟೋರಿಗಳು
ಈ ಕುರಿತು ದೇವಸ್ಥಾನದ ಪ್ರಧಾನ ಅರ್ಚಕರು ಮಾತನಾಡಿದ್ದು, ‘ಬಾದಾಮಿ ಬನಶಂಕರಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವನ್ನ ಪ್ರತಿ ವರ್ಷ ಅದ್ದೂರಿಯಾಗಿ ಮಾಡಲಾಗುತ್ತದೆ.ಆದರೆ, ಈ ಬಾರಿ ಕರೋನ ಸೋಂಕು ಮತ್ತೆ ಹೆಚ್ಚಿರುವ ಹಿನ್ನಲೆ ಈ ಜಾತ್ರೆ ರದ್ದು ಮಾಡುವುದು ಅನಿವಾರ್ಯವಾಗಲಿದೆ’ ಎಂದಿದ್ದಾರೆ.

ಬನಶಂಕರಿ ಜಾತ್ರೆ ಮಹೋತ್ಸವವನ್ನ ಜನವರಿ 09 ರಿಂದ 19ರ ವರೆಗೆ ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಲಾಗಿತ್ತು.