ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಿರುವ DCM ಡಿ.ಕೆ. ಶಿವಕುಮಾರ್, ʻBJP ಅವರಿಗೆ ಮಾನ, ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದ್ದರು. ಆದರೆ ಬಿಜೆಪಿಗರ ಮರ್ಯಾದೆ ಪ್ರಶ್ನಿಸಿರುವ ಡಿಕೆಶಿ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ BY Vijayendra ಟಾಂಗ್ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ವಿಜಯೇಂದ್ರ, Dk Shivakumar ಅವರೇ, ಮೊನ್ನೆ ನಿಮ್ಮ ಮುಖ್ಯಮಂತ್ರಿಗಳು ರಾಷ್ಟ್ರಪತಿಗಳಿಗೆ ಏಕವಚನ ಬಳಸುವ ಮೂಲಕ ರಾಜ್ಯದ ಮಾನ ಕಳೆದಿದ್ದಾರೆ, ಅದರ ಹಿಂದೆಯೇ ನಿಮ್ಮ ಸಹೋದರ ಡಿ.ಕೆ ಸುರೇಶ್ ಅವರು ತಾವೊಬ್ಬ ಸಂಸದ ಎನ್ನುವುದನ್ನೂ ಮರೆತು ದೇಶ ವಿಭಜನೆಯ ಮಾತನಾಡಿ ಕರ್ನಾಟಕಕ್ಕೆ ಕಪ್ಪು ಮಸಿ ಬಳಿದಿದ್ದಾರೆ, ಸಾಲದು ಎಂಬಂತೆ ಹಾಸನದಲ್ಲಿ ಮಾಧ್ಯಮ ಗೋಷ್ಠಿ ಕರೆದು ನಿಮ್ಮ ಪಕ್ಷದ ಮಾಜಿ ಸಚಿವ ಬಿ.ಶಿವರಾಮ್ ಅವರು ಅಭಿವೃದ್ಧಿಯ ಬಾಗಿಲು ಮುಚ್ಚಿ ಪರ್ಸಂಟೇಜ್ ದಂಧೆಗಿಳಿದಿರುವ ನಿಮ್ಮ ಸರ್ಕಾರದ ಯೋಗ್ಯತೆಯನ್ನು ಜಗಜ್ಜಾಹೀರು ಮಾಡಿದ್ದಾರೆ. ಈಗ ಹೇಳಿ ಮರ್ಯಾದೆ ಯಾರಿಗಿದೆ ಎಂದು ? ಮಾನ್ಯ ಪ್ರಧಾನಿ Narendra Modi ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳ ಶೇ.10 % ಭಾಗವನ್ನೂ 60 ವರ್ಷಗಳ ಕಾಲ ಆಡಳಿತ ನಡೆಸಿದ ನಿಮ್ಮ ಕಾಂಗ್ರೆಸ್ ನೀಡಲಾಗಿಲ್ಲ ಎಂಬುದಕ್ಕೆ ನೂರಾರು ನಿದರ್ಶನಗಳಿವೆ. ನಿಮ್ಮ ವೈಫಲ್ಯ, ಆಡಳಿತದ ಅರಾಜಕತೆಯ ಸ್ಥಿತಿಯನ್ನು ಮರೆಮಾಚಲು ಹೋಗಿ ಕೇಂದ್ರದ ಮೇಲೆ ಗೂಬೆ ಕೂರಿಸಲು ಹೋಗಬೇಡಿ, ಅದು ನಿಮಗೇ ತಿರುಗುಬಾಣವಾಗಲಿದೆ.
#BYVijayendra #DKShivakumar #DCM #BJPKarnataka #KPCC