• Home
  • About Us
  • ಕರ್ನಾಟಕ
Wednesday, July 16, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಆಯುರ್ವೇದ ನಮ್ಮ ಮೂಲ, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
March 24, 2025
in Top Story, ಇದೀಗ, ಕರ್ನಾಟಕ, ಜೀವನದ ಶೈಲಿ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

“ಆಯುರ್ವೇದ ಚಿಕಿತ್ಸಾ ಪದ್ಧತಿ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದ್ದು, ಇದು ನಮ್ಮ ಮೂಲ. ಆಯುರ್ವೇದ ನಮ್ಮ ಆಸ್ತಿಯಾಗಿದ್ದು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.

ADVERTISEMENT

ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿಶ್ವವಿದ್ಯಾಲಯದ ಪುರುಷ ವಿದ್ಯಾರ್ಥಿನಿಲಯದ ನೂತನ ಕಟ್ಟಡವನ್ನು ಶಿವಕುಮಾರ್ ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.

“ಬೀಜ ಬಿತ್ತಿದಾಗ ಬೆಳೆ ಬರುತ್ತದೆ. ಜ್ಞಾನ ಬಿತ್ತಿದರೆ ಉತ್ತಮವಾದ ಪ್ರಜೆಗಳಾಗುತ್ತಾರೆ. ಆರೋಗ್ಯ ಉಳಿಸಿಕೊಳ್ಳಲು ಸುಮಾರು 5 ಸಾವಿರ ವರ್ಷಗಳ ಹಿಂದೆ ಪಾಲಿಸಿಕೊಂಡು ಬಂದ ಪದ್ಧತಿ ಆಯುರ್ವೇದ. ಇದು ಭಾರತದ ಆಸ್ತಿ. ಇದನ್ನು ನಾವು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ದೇಶದ ಆಯುರ್ವೇದ, ಯೋಗ ಹಾಗೂ ಆಧ್ಯಾತ್ಮಿಕತೆಯನ್ನು ಇಡೀ ವಿಶ್ವ ಗಮನಿಸಿ ಪಾಲಿಸುತ್ತಿದೆ. ವಿಶ್ವದುದ್ದಗಲಕ್ಕೆ ಇವುಗಳಿಗೆ ಗೌರವ ಸಿಗುತ್ತಿದೆ. ಆಧುನಿಕ ಕಾಲದಲ್ಲೂ ಆಯುರ್ವೇದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಮಿಸಲು ಬಯಸುತ್ತೇನೆ” ಎಂದರು.

“ಈ ಪದ್ಧತಿ ಮೇಲೆ ಜನರಿಗೆ ದೊಡ್ಡ ವಿಶ್ವಾಸವಿದೆ. ಮನುಷ್ಯನಲ್ಲಿ ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ. ಸಂಸ್ಕೃತ ವಿವಿ ಉಪಕುಲಪತಿಗಳಾದ ಅಹಲ್ಯಾ ಅವರು ಬಂದಾಗ ನೀವು ಜೋರಾದ ಚಪ್ಪಾಳೆ ಹೊಡೆದಿರಿ. ಅವರ ಮೇಲಿನ ನಂಬಿಕೆಯಿಂದ ನೀವು ಚಪ್ಪಾಳೆ ತಟ್ಟಿದ್ದೀರಿ. ಅದೇ ರೀತಿ ಆಯುರ್ವೇದ ಪದ್ಧತಿಯ ವೈದ್ಯರಿಗೂ ಬೇರೆ ವೈದ್ಯರಿಗೂ ಸಮಾನ ಗೌರವ ನೀಡುವಂತಾದರೆ ಜನರಿಗೆ ನಂಬಿಕೆ ಹುಟ್ಟುತ್ತದೆ. ನೀವು ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನೀವು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಪ್ರಕೃತಿಯನ್ನು ಅನುಸರಿಸುತ್ತೀರಿ. ನೀವು ನಿಮ್ಮ ಸೇವೆಗಳ ಮೂಲಕ ಹೆಚ್ಚು ಗೌರವ ಸಂಪಾದಿಸಬೇಕು. ನಿಮ್ಮ ಆಯುರ್ವೇದ ಪದ್ಧತಿ ಬಿಡಬೇಡಿ” ಎಂದು ಸಲಹೆ ನೀಡಿದರು.

“ಈ ಆಯುರ್ವೇದ ಆಸ್ಪತ್ರೆಯಲ್ಲಿ ನಾನೇ ಬಂದು ಚಿಕಿತ್ಸೆ ಪಡೆಯುತ್ತೇನೆ. ನಾವು ಈ ಪದ್ಧತಿಯನ್ನು ಉಳಿಸಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ 5 ಹಾಸಿಗೆಗಳ ಆಸ್ಪತ್ರೆ, ಜಿಲ್ಲಾ ಮಟ್ಟದಲ್ಲಿ ಕನಿಷ್ಠ 10 ಹಾಸಿಗೆಗಳ ಆಸ್ಪತ್ರೆ ಇರಬೇಕು, ಅದಕ್ಕೆ ವೈದ್ಯರನ್ನು ನೇಮಿಸಬೇಕು ಎಂದು ಸಚಿವರಾದ ದಿನೇಶ್ ಗುಂಡೂರಾವ್ ಅವರು ಪ್ರಯತ್ನಿಸುತ್ತಿದ್ದಾರೆ. ನಾವು ಏನು ಬೇಕಾದರೂ ಸಂಪಾದನೆ ಮಾಡಬಹುದು. ಆದರೆ ಆರೋಗ್ಯ ಸಂಪಾದನೆ ಬಹಳ ಕಷ್ಟ. ಈಗ ಜನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಸಾವಯವ ಉತ್ಪನ್ನ, ಸಿರಿಧಾನ್ಯಗಳತ್ತ ಮುಖ ಮಾಡುತ್ತಿದ್ದಾರೆ” ಎಂದರು.

“ದೇಶದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳಿರುವುದು ನಮ್ಮ ರಾಜ್ಯದಲ್ಲಿ. ಆಯುರ್ವೇದಕ್ಕೆ ಮಹಾರಾಷ್ಟ್ರ ನಂತರ ನಮ್ಮ ರಾಜ್ಯದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಆಯುರ್ವೇದ ನಮ್ಮ ಮೂಲ. ನಾವು ನಮ್ಮ ಮೂಲವನ್ನು ಮರೆಯಬಾರದು. ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಇಲಾಖೆಗೆ ಜೀವ ತುಂಬಿದ್ದಾರೆ. ಸರ್ಕಾರದದ ಸೇವೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಸೇವೆಗಳನ್ನು ಪಡೆಯಬಹುದು ಎಂದು ಹಳ್ಳಿಗಳಿಂದ ಬೆಂಗಳೂರಿನವರೆಗೂ ಜನರಲ್ಲಿ ಅರಿವು ಮೂಡಿಸಿದ್ದಾರೆ. ಅವರಿಗೆ ಸರ್ಕಾರ ಹಾಗೂ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

Tags: Ayurvedaayurveda morningbest sources of potassiumconflicts between dk shivakumar & dinesh gundu raodiet plan that ayurveda recommendsDinesh Gundu Raodinesh gundu rao comments on dk shivakumardinesh gundu rao dk shivakumardinesh gundu rao newsdinesh gundu rao on dk shivakumarthe science of gut health and why it mattesrdinesh gundu rao speechdinesh gundu rao talks about dk shivakumar issueDinesh GunduraoDK Shivakumardk shivakumar arrestdk shivakumar casedk shivakumar hits back at dinesh gundu raodk shivakumar latest newsdk shivakumar newsdk shivakumar vs dinesh gundu raohealth and wellnesshow to be always happy and cheerfulhow to be always happy and positiveis it normal to lose hair after oilingkapha ayurveda mind body typepotassium sourcesprotein sourcesvata diet and exercisevitamin d sourceswhat should i eatwhat should i eat indian
Previous Post

ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ ಮಾತ್ರ, ಲಾಭ ಮಾಡುವುದಕ್ಕಲ್ಲ: ಸಿ.ಎಂ.ಸಿದ್ದರಾಮಯ್ಯ ಖಡಕ್ ನುಡಿ

Next Post

ರಾಜ್ಯದ ವಿಭಾಗೀಯ ಮಟ್ಟದಲ್ಲಿ ಹೈಟೆಕ್ ಪಂಚಕರ್ಮ ಚಿಕಿತ್ಸೆ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Related Posts

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಮೊದಲ AICC OBC ಸಲಹಾ ಸಮಿತಿಯ ಸಭೆ,
Top Story

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಮೊದಲ AICC OBC ಸಲಹಾ ಸಮಿತಿಯ ಸಭೆ,

by ಪ್ರತಿಧ್ವನಿ
July 15, 2025
0

ದಿನಾಂಕ: 15 ಜುಲೈ 2025 | ಸಮಯ: ಸಂಜೆ 6:00 | ಸ್ಥಳ: ಭಾರತ್ ಜೋಡೋ ಸಭಾಂಗಣ, ಇಂದಿರಾ ಭವನ, ಬೆಂಗಳೂರು ಗೌರವಾನ್ವಿತ ಉಪಮುಖ್ಯಮಂತ್ರಿ ಶ್ರೀ ಡಿ.ಕೆ....

Read moreDetails
ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೆಸ್ಲಾ ಕಾರ್ – ನೂತನ ಶೋ ರೂಮ್ ಉದ್ಘಾಟಿಸಿದ ದೇವೇಂದ್ರ ಫಡ್ನವೀಸ್ 

ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೆಸ್ಲಾ ಕಾರ್ – ನೂತನ ಶೋ ರೂಮ್ ಉದ್ಘಾಟಿಸಿದ ದೇವೇಂದ್ರ ಫಡ್ನವೀಸ್ 

July 15, 2025
ಭೂಸ್ವಾಧೀನ ರದ್ದಾಗಿದೆ, ಯೋಜನೆ ರದ್ದಾಗಿಲ್ಲ!

ಭೂಸ್ವಾಧೀನ ರದ್ದಾಗಿದೆ, ಯೋಜನೆ ರದ್ದಾಗಿಲ್ಲ!

July 15, 2025
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಶೀಘ್ರವೇ ಐದು ಪಾಲಿಕೆ ರಚನೆ ಡಿಸಿಎಂ ಡಿ.ಕೆ.ಶಿವಕುಮಾರ್

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಶೀಘ್ರವೇ ಐದು ಪಾಲಿಕೆ ರಚನೆ ಡಿಸಿಎಂ ಡಿ.ಕೆ.ಶಿವಕುಮಾರ್

July 15, 2025

ದೇವನಹಳ್ಳಿಯ ಭೂಸ್ವಾಧೀನ ಅಧಿಸೂಚನೆ ರದ್ದು – ಸಿಎಂ ಘೋಷಣೆ

July 15, 2025
Next Post
ರಾಜ್ಯದ ವಿಭಾಗೀಯ ಮಟ್ಟದಲ್ಲಿ ಹೈಟೆಕ್ ಪಂಚಕರ್ಮ ಚಿಕಿತ್ಸೆ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ರಾಜ್ಯದ ವಿಭಾಗೀಯ ಮಟ್ಟದಲ್ಲಿ ಹೈಟೆಕ್ ಪಂಚಕರ್ಮ ಚಿಕಿತ್ಸೆ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Recent News

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಮೊದಲ AICC OBC ಸಲಹಾ ಸಮಿತಿಯ ಸಭೆ,
Top Story

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಮೊದಲ AICC OBC ಸಲಹಾ ಸಮಿತಿಯ ಸಭೆ,

by ಪ್ರತಿಧ್ವನಿ
July 15, 2025
ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೆಸ್ಲಾ ಕಾರ್ – ನೂತನ ಶೋ ರೂಮ್ ಉದ್ಘಾಟಿಸಿದ ದೇವೇಂದ್ರ ಫಡ್ನವೀಸ್ 
Top Story

ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೆಸ್ಲಾ ಕಾರ್ – ನೂತನ ಶೋ ರೂಮ್ ಉದ್ಘಾಟಿಸಿದ ದೇವೇಂದ್ರ ಫಡ್ನವೀಸ್ 

by Chetan
July 15, 2025
ಭೂಸ್ವಾಧೀನ ರದ್ದಾಗಿದೆ, ಯೋಜನೆ ರದ್ದಾಗಿಲ್ಲ!
Top Story

ಭೂಸ್ವಾಧೀನ ರದ್ದಾಗಿದೆ, ಯೋಜನೆ ರದ್ದಾಗಿಲ್ಲ!

by ಪ್ರತಿಧ್ವನಿ
July 15, 2025
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಶೀಘ್ರವೇ ಐದು ಪಾಲಿಕೆ ರಚನೆ ಡಿಸಿಎಂ ಡಿ.ಕೆ.ಶಿವಕುಮಾರ್
Top Story

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಶೀಘ್ರವೇ ಐದು ಪಾಲಿಕೆ ರಚನೆ ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
July 15, 2025
Top Story

ದೇವನಹಳ್ಳಿಯ ಭೂಸ್ವಾಧೀನ ಅಧಿಸೂಚನೆ ರದ್ದು – ಸಿಎಂ ಘೋಷಣೆ

by ಪ್ರತಿಧ್ವನಿ
July 15, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಮೊದಲ AICC OBC ಸಲಹಾ ಸಮಿತಿಯ ಸಭೆ,

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಮೊದಲ AICC OBC ಸಲಹಾ ಸಮಿತಿಯ ಸಭೆ,

July 15, 2025
ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೆಸ್ಲಾ ಕಾರ್ – ನೂತನ ಶೋ ರೂಮ್ ಉದ್ಘಾಟಿಸಿದ ದೇವೇಂದ್ರ ಫಡ್ನವೀಸ್ 

ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೆಸ್ಲಾ ಕಾರ್ – ನೂತನ ಶೋ ರೂಮ್ ಉದ್ಘಾಟಿಸಿದ ದೇವೇಂದ್ರ ಫಡ್ನವೀಸ್ 

July 15, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!