• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಿಎಂ ಬದಲಾವಣೆ ಆಡಿಯೋ ವೈರಲ್‌; ನನ್ನ ಧ್ವನಿ ಅನುಕರಿಸಲಾಗಿದೆ ಎಂದ ನಳಿನ್‌ ಕುಮಾರ್‌ ಕಟೀಲ್‌

ಪ್ರತಿಧ್ವನಿ by ಪ್ರತಿಧ್ವನಿ
July 19, 2021
in ಕರ್ನಾಟಕ
0
ಸಿಎಂ ಬದಲಾವಣೆ ಆಡಿಯೋ ವೈರಲ್‌; ನನ್ನ ಧ್ವನಿ ಅನುಕರಿಸಲಾಗಿದೆ ಎಂದ ನಳಿನ್‌ ಕುಮಾರ್‌ ಕಟೀಲ್‌
Share on WhatsAppShare on FacebookShare on Telegram

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಕಾವೇರಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರದ್ದೆನ್ನಲಾದ ತುಳು ಭಾಷೆಯಲ್ಲಿರುವ “ಕರ್ನಾಟಕ ಸಿಎಂ ಬದಲಾವಣೆಯಾಗಲಿದ್ದಾರೆ” ಎಂಬ  ಆಡಿಯೋ ಒಂದು ಭಾರೀ ವೈರಲ್ ಆಗಿದ್ದು, ರಾಜಕೀಯ ರಂಗದಲ್ಲಿ ಪ್ರಸ್ತುತ ಇರುವ ಚರ್ಚೆಗಳಿಗೆ ಇನ್ನಷ್ಟು ಪುಷ್ಟಿ ಒದಗಿಸಿದೆ.

ADVERTISEMENT

ವೈರಲ್‌ ಆಗುತ್ತಿರುವ ಕಟೀಲ್‌ ರವರ ತುಳು ಭಾಷೆಯ ಆಡಿಯೋದಲ್ಲಿ “ಯಾರಿಗೂ ಹೇಳೋಕೆ ಹೋಗಬೇಡಿ, ಈಶ್ವರಪ್ಪ ಜಗದೀಶ್ ಶೆಟ್ಟರ್ ತಂಡವನ್ನೇ ತೆಗೆಯುತ್ತೇವೆ. ಎಲ್ಲ ಹೊಸ ತಂಡ ಮಾಡುತ್ತಿದ್ದೇವೆ. ಯಾರಲ್ಲೂ ಹೇಳಲು ಹೋಗಬೇಡಿ, ಏನು ತೊಂದರೆ ಇಲ್ಲ, ಹೆದರಬೇಡಿ ನಾವಿದ್ದೇವೆ, ಇನ್ನು ಯಾರಾದರೂ.. ನಮ್ಮ ಕೈಯಲ್ಲೇ ಎಲ್ಲಾ. ಸದ್ಯ ಮೂರು ಹೆಸರು ಇದೆ, ಅದರಲ್ಲಿ ಯಾವುದಾದರೂ ಆಗುವ ಸಾಧ್ಯತೆ ಇದೆ. ಇಲ್ಲಿಯವರನ್ನು ಯಾರನ್ನು ಮಾಡೋದಿಲ್ಲ. ದೆಹಲಿಯಿಂದಲೇ ಆಯ್ಕೆ ಮಾಡುತ್ತಾರೆ” ಎಂದು ಹೇಳಲಾಗಿದೆ.


ಕರ್ನಾಟಕದ ಹೊಸ ಸಿಎಂ ದೆಹಲಿಯಿಂದ ಬರುತ್ತಾರೆ ಎಂದು ಆಡಿಯೋದಲ್ಲಿ ಹೇಳಿರುವುದರಿಂದ ಅವರು ಯಾರು ಎಂಬ ಪ್ರಶ್ನೆ ಸುಳಿದಾಡುತ್ತಿದೆ. ಅದಾಗ್ಯೂ, ‘ಆಡಿಯೋ ನಕಲಿಯಾಗಿದ್ದು,. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕಟೀಲ್‌ ಅವರು ಆಡಿಯೋದ ಸತ್ಯಾ ಸತ್ಯತೆಯನ್ನು ನಿರಾಕರಿಸಿದ್ದಾರೆ.

ಆಡಿಯೋ ಹರಿದಾಡಿದ 2 ಗಂಟೆ ಬಳಿಕ ರಾತ್ರಿ 11.20 ಕ್ಕೆ ತಡರಾತ್ರಿ ಸ್ಪಷ್ಟೀಕರಣ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ʼಆಡಿಯೋ ಖಂಡಿತವಾಗಿಯೂ ನನ್ನದಲ್ಲ. ಅದು ನಕಲಿ ಆಡಿಯೋ. ಇದರ ಮೂಲಕ ಕಳಂಕ ತರುವ ಕೆಲಸ ನಡೆದಿದೆ ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮಾತನಾಡುತ್ತೇನೆ, ಎಂದು ಹೇಳಿದ್ದಾರೆ.

‘ನನ್ನ ಧ್ವನಿಯನ್ನು ಅನುಕರಿಸಿ ಪಕ್ಷಕ್ಕೆ ಧಕ್ಕೆ ತರುವ ಮಾದರಿಯಲ್ಲಿ ನಕಲಿ ಆಡಿಯೊವನ್ನುಯಾರೋ ಕಿಡಿಗೇಡಿಗಳು ವಾಟ್ಸ್‌ ಆ್ಯಪ್‌ನಲ್ಲಿ ಹರಿ ಬಿಟ್ಟಿದ್ದು, ಇದರ ಸತ್ಯಾಸತ್ಯತೆ ತನಿಖೆ ಆಗಬೇಕು. ಪಕ್ಷ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಆಡಿಯೊ ಹರಿಬಿಡಲಾಗಿದೆ. ಕಿಡಿಗೇಡಿಗಳನ್ನು ಪತ್ತೆ ಮಾಡಬೇಕು’ ಎಂದು ಯಡಿಯೂರಪ್ಪ ಅವರಲ್ಲಿ ಕಟೀಲ್‌ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಈ ಆಡಿಯೋ ಸಂಚಲನ ಸೃಷ್ಟಿಸಿದೆ. ಆಡಿಯೋ ನಕಲಿಯೋ ಅಸಲಿಯೋ ಎಂಬುವುದು ಇನ್ನು ದೃಢಪಟ್ಟಿಲ್ಲ. ಆದರೆ ಅಲ್ಲಿ ಉಲ್ಲೇಖವಾಗಿರುವ ವಿಚಾರವಂತೂ ಕಮಲ ಪಾಳಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ..

Tags: BS YADIYURAPPAJagadish ShettarK S EshwarappaKarnataka BJPKarnataka CongressNalin Kumar Kateel
Previous Post

ಇಸ್ರೇಲ್ ಮಾಲ್ವೇರ್ ಬಳಸಿ ರಾಜಕಾರಣಿಗಳು, ಪತ್ರಕರ್ತರ ಚಲನವಲನದ ಮೇಲೆ ಕಣ್ಣಿಟ್ಟಿತ್ತೆ ಸರ್ಕಾರ?

Next Post

ಜುಲೈ 20ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಕೊಟ್ಟ ಸಚಿವ ಸುರೇಶ್ ಕುಮಾರ್

Related Posts

ಸಿಎಂ ಹುದ್ದೆಗಾಗಿ ಡಿಕೆಶಿ ಕಸರತ್ತು: ಡಿಸಿಎಂ, ಸಿಎಂ ಆಗೋಕೆ ಇನ್ನೆಷ್ಟು ದಿನ..?
Top Story

KPSC ಮುಚ್ಚುವ ಬಗ್ಗೆ ಚಿಂತನೆ : ಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಹೇಳಿಕೆ

by ಪ್ರತಿಧ್ವನಿ
September 22, 2026
0

ಬೆಂಗಳೂರು : ಕೆಪಿಎಸ್ ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಚಿಂತನೆಯಲ್ಲಿದ್ದೇವೆ ಎಂದು  ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು. https://youtu.be/nqHVSFNYLq0?si=YvQSA59nqZ9EPAmg ಸುದ್ದಿಗಾರರೊಂದಿಗೆ...

Read moreDetails
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನ

September 22, 2026
ಸರ್ಕಾರಿ ಪಿಯು ಕಾಲೇಜುಗಳಲ್ಲಿ 814 ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ

ಸರ್ಕಾರಿ ಪಿಯು ಕಾಲೇಜುಗಳಲ್ಲಿ 814 ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ

September 22, 2026
BREAKING : ಕರ್ನಾಟಕ ಸೇರಿದಂತೆ 4 ರಾಜ್ಯಗಳ ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆ

BREAKING : ಕರ್ನಾಟಕ ಸೇರಿದಂತೆ 4 ರಾಜ್ಯಗಳ ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆ

September 22, 2026
ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ: ರೇಷನ್ ಕಾರ್ಡ್ ಇ-ಕೆವೈಸಿ ಅವಧಿ ವಿಸ್ತರಣೆ.!

ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ: ರೇಷನ್ ಕಾರ್ಡ್ ಇ-ಕೆವೈಸಿ ಅವಧಿ ವಿಸ್ತರಣೆ.!

September 22, 2026
Next Post
ದ್ವಿತೀಯ ಪಿಯು ಮರು ಪರೀಕ್ಷೆ ಗೊಂದಲ: ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್

ಜುಲೈ 20ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಕೊಟ್ಟ ಸಚಿವ ಸುರೇಶ್ ಕುಮಾರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada