ಮಗಳನ್ನು ಪ್ರೀತಿಸಿದ್ದ ಯುವಕನಿಗೆ ಪೆಟ್ರೋಲ್(Petrol) ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಯುವತಿ ಪೋಷಕರ(Parents) ವಿರುದ್ಧ ಆರೋಪ ಕೇಳಿಬಂದಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದಲ್ಲಿ ಭಾನುವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸುಟ್ಟ ಗಾಯಗಳಿಂದ ಯುವಕ ರಾಹುಲ್(Rahul) ಬಿರಾದಾರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಯುವತಿ ಐಶ್ವರ್ಯ(Aishwarya) ಮದರಿ ತಂದೆ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಮನೆಗೆಲಸ ಮಾಡುತ್ತಿದ್ದವನಿಂದ ಕೃತ್ಯ ಎಂದು ಆರೋಪ ಮಾಡಲಾಗಿದೆ. ರಾಹುಲ್ಗೆ ಬೆಂಕಿ ಹಚ್ಚೋ ವೇಳೆ ಯುವತಿ ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಮನೆಗೆಲಸ ಮಾಡುತ್ತಿದ್ದವನಿಗೂ ಬೆಂಕಿ ತಾಗಿದ್ದು, ಮೂವರೂ ಸಹ ನಗರದ ಖಾಸಗಿ ಆಸ್ಪತ್ರೆಗೆ(Hospital) ದಾಖಲಾಗಿದ್ದಾರೆ.
ಯುವಕ ಹಾಗು ಯುವತಿ ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ರಾಹುಲ್ ಹಾಗೂ ಯುವತಿ ಐಶ್ವರ್ಯ ಎರಡೂ ಮನೆಯವರಿಗೂ ಈ ವಿಚಾರ ಗೊತ್ತಾಗಿ, ಕಳೆದ ಒಂದು ವರ್ಷದ ಹಿಂದೆ ಹಿರಿಯರು ಸೇರಿ ರಾಜೀ ಪಂಚಾಯ್ತಿ(Panchayat) ಮಾಡಿದ್ದರು. ಯುವತಿ ಐಶ್ವರ್ಯ ಪ್ರಿಯಕರ ರಾಹುಲ್ ಜೊತೆಗೆ ಮದುವೆ(Marriage) ಅಗಲ್ಲ, ಪೋಷಕರು ಹೇಳಿದ ಯುವಕನನ್ನು(young man) ಮದುವೆ ಆಗುತ್ತೇನೆ ಎನ್ನುವ ಮೂಲಕ ಬ್ರೇಕ್ ಅಪ್ ಮಾಡಿಕೊಂಡಿದ್ದಳು.
ಐಶ್ವರ್ಯ ಮನೆಯವರೊಂದಿಗೆ ಮಾತನಾಡುತ್ತಿದ್ದ ವೇಳೆ ಯುವತಿ ತಂದೆ ಅಪ್ಪು ಮದರಿ ರಾಹುಲ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರೆಂದು ಆರೋಪ ಮಾಡಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ(Police Station) ದೂರು ಪ್ರತಿದೂರು ಪ್ರಕರಣಗಳು ದಾಖಲು(Registered) ಆಗಿದೆ. ಯುವಕನೇ ಪೆಟ್ರೋಲ್ ತಂದು ನಮ್ಮ ಮಗಳಿಗೆ ಬೆಂಕಿ ಹಚ್ಚಿ ಕೊಲೆ(Murder) ಮಾಡಲು ಪ್ರಯತ್ನ ಪಟ್ಟ ಎಂದು ಯುವತಿಯ ತಂದೆ ದೂರು ನೀಡಿದ್ದಾರೆ.
ಅತ್ತ ಯುವಕ ರಾಹುಲ್ ತಂದೆಯೂ ದೂರು(Complaint) ನೀಡಿದ್ದು, ನಮ್ಮ ಮಗನನ್ನು ಮನೆಗೆ ಕರೆಯಿಸಿಕೊಂಡು ಪೆಟ್ರೋಲ್ ಸುರಿದು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಆದರೆ ಪ್ರೇಮ ಪ್ರಕರಣದಲ್ಲಿ ಕೊಲೆ ಮಾಡುವ ಹಂತಕ್ಕೆ ತಲುಪಿದಿದ್ದು ವಿಷಾದಕರ ಸಂಗತಿ.