ಲೋಕಸಭೆ(Lokasabha) ಕೊನೆಯ ಹಂತದ ಚುನಾವಣೆ ಇನ್ನಷ್ಟೇ ಬಾಕಿ ಇದೆ. ಭರ್ಜರಿ ಕ್ಯಾಂಪೇನ್ ನಡೀತಿದೆ. ಈ ನಡುವೆ ಕಾಂಗ್ರೆಸ್(Congress) ಪಾಳಯದಲ್ಲಿ ಹೊಸ ಹುಮ್ಮಸ್ಸೊಂದು ಮನೆ ಮಾಡಿದ್ದು, ಬಿಜೆಪಿ ಸರ್ಕಾರ ರಚನೆ ಆಗಲ್ಲ, INDIA ಒಕ್ಕೂಟವೇ ಸರ್ಕಾರ ರಚನೆ ಮಾಡಲಿದೆ ಅನ್ನೋ ಮಾತುಗಳು ಚರ್ಚೆಯಲ್ಲಿವೆ. ಈ ನಡುವೆ ಪ್ರಧಾನಿ ಹೇಳಿದ್ದ ಮಾತನ್ನೇ ಹಿಡಿದು ಪ್ರಧಾನಿ ಮೋದಿಯನ್ನು ತನಿಖೆಗೆ ಗುರಿಪಡಿಸುವ ರೀತಿಯ ಹೇಳಿಕೆ ನೀಡಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
ಮೊದಲು ನನ್ನ ತಾಯಿ ಜೀವಂತ ಇದ್ದಾಗ ನಾನು ಜೈವಿಕವಾಗಿ ಜನಿಸಿದ್ದೇನೆ ಎನ್ನುವುದನ್ನು ನಂಬುತ್ತಿದ್ದೆ. ಆದರೆ ನನ್ನ ತಾಯಿ ನಿಧನರಾದ ಬಳಿಕ ನನ್ನ ಎಲ್ಲಾ ಅನುಭವ ಗಮನಿಸಿದ್ದು, ನನ್ನನ್ನು ಪರಮಾತ್ಮನೇ ಕಳಿಸಿದ್ದಾನೆಂದು ಮನವರಿಕೆ ಆಗಿದೆ. ಈ ಚೈತನ್ಯ ತನ್ನ ಜೈವಿಕ ದೇಹದಿಂದ ಬಂದಿರಲು ಸಾಧ್ಯವಿಲ್ಲ. ಪರಮಾತ್ಮನೇ ನನಗೆ ಶಕ್ತಿ, ಸಾಮರ್ಥ್ಯ ನೀಡಿದ್ದಾನೆ. ದೇವರು ನನಗೆ ಮಾರ್ಗದರ್ಶನ ಮಾಡುತ್ತಿದ್ದಾನೆ. ನನಗೆ ಪ್ರೇರಣೆಯನ್ನೂ ಆ ದೇವರೇ ನೀಡುತ್ತಿದ್ದಾನೆ ಎಂದು ಮಾಧ್ಯಮ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಈ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಟಾಂಗ್ ನೀಡಿದ್ದಾರೆ.
ದೇವರೇ ನನ್ನನ್ನು 2047ರವರೆಗೆ ಭಾರತದ ಸೇವೆಗೆ ಕಳುಹಿಸಿದ್ದಾನೆ. ದೇವರೇ ನನಗೆ ಮಾರ್ಗದರ್ಶನ ಮಾಡುತ್ತಿದ್ದಾನೆ. ಎಂದು ಮೋದಿ(Modi) ಆಡಿದ್ದ ಮಾತುಗಳಿಗೆ ಕಾಂಗ್ರೆಸ್ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದೆ. ಪರಮಾತ್ಮನ ಕಥೆ ಏಕೆ ತಂದ್ರು ನಿಮಗೆ ಗೊತ್ತಿದೆಯಾ..?ಚುನಾವಣೆ(Election) ನಂತರ ಮೋದಿಗೆ ಜಾರಿ ನಿರ್ದೇಶನಾಲಯ ಪ್ರಶ್ನೆ ಕೇಳುತ್ತದೆ. ಅದಾನಿ ಬಗ್ಗೆ ಮೋದಿ ಅವರಿಗೆ ಪ್ರಶ್ನೆ ಕೇಳಿದಾಗ ನನಗೇನೂ ಗೊತ್ತಿಲ್ಲ, ದೇವರೇ ಹೇಳಿದ್ದು ಅನ್ನಬಹುದು. ಅದೇ ಕಾರಣಕ್ಕೆ ದೇವರು ಕಳುಹಿಸಿದ್ದಾನೆ ಎಂದು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ(Rahul Gandhi) ಗುಡುಗಿದ್ದಾರೆ. ಇನ್ನು ಉದ್ದುದ್ದ ಭಾಷಣ ಮಾಡುವುದನ್ನ ಬಿಟ್ಟುಬಿಡಿ ಮೋದಿ ಅವರೇ.. ದೇಶ ಒಡೆಯುವುದನ್ನೂ ಮೊದಲು ಬಿಡಿ ಎಂದು ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ(Priyanka) ವಾದ್ರಾ ಕೂಡ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದು, ದೇವರ ಹೆಸರಲ್ಲಿ ಮೋದಿ ಹಾಗು ಬಿಜೆಪಿಯವರು ವೋಟ್ ಕೇಳುತ್ತಿದ್ದಾರೆ. ಆದರೆ ದೇವರ ಕೆಲಸವನ್ನ ಒಂದೂ ಮಾಡುತ್ತಿಲ್ಲ. ಈ ಸರ್ಕಾರದಲ್ಲಿ ಕೇವಲ ಲೂಟಿ(Looty) ನಡೆಯುತ್ತಿದೆ. ಸಂವಿಧಾನ ಬದಲಿಸುವ ಮಾತುಗಳು ಬರುತ್ತಿವೆ ಎಂದು ವಾಗ್ಬಾಣ ಬಿಟ್ಟಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ(Siddaramaiah) ಕೂಡ ಬಿಜೆಪಿಯವರಿಗೆ ಫಲಿತಾಂಶದ ಭಯ ಶುರುವಾಗಿದೆ. ಅದೇ ಕಾರಣಕ್ಕೆ ಹೇಗೆ ಬೇಕೋ ಹಾಗೆ ಮಾತನಾಡ್ತಿದ್ದಾರೆ. ಮೊದಲು ಕಾಂಗ್ರೆಸ್ ಗೆಲ್ಲಲ್ಲ, 28ಕ್ಕೆ 28 ಸ್ಥಾನ ನಾವೇ ಗೆಲ್ತೀವಿ ಎನ್ನುತ್ತಿದ್ದರು. ಇದೀಗ ಕಾಂಗ್ರೆಸ್ 10-12 ಸ್ಥಾನ ಗೆಲ್ಲುತ್ತದೆ ಎಂದು ಬಿಜೆಪಿಯವರೇ ಹೇಳ್ತಿದ್ದಾರೆ ಎಂದರೆ, ಡಿಸಿಎಂ ಡಿಕೆ ಶಿವಕುಮಾರ್ EVM ಮ್ಯಾಜಿಕ್ ಮಾಡದಿದ್ದರೆ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ.
ಜೂನ್ 4ರ ಬಳಿಕ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬರುವ ಬಗ್ಗೆ ರಾಹುಲ್ ಗಾಂಧಿ ವಿಶ್ವಾಸದಲ್ಲಿದ್ದು, ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮೋದಿಯನ್ನು ಪ್ರಶ್ನೆ ಮಾಡ್ತಾರೆ ಎನ್ನುವ ಮೂಲಕ ತನಿಖೆ(Investigation) ಮಾಡ್ತೇವೆ ಅನ್ನೋ ಸುಳಿವು ಕೊಟ್ಟಿದ್ದಾರೆ. ಕಡೇ ಹಂತದ ಮತದಾನಕ್ಕೆ ಎರಡ್ಮೂರು ದಿನಗಳು ಮಾತ್ರ ಬಾಕಿಯಿದ್ದು, ಸಾಧ್ಯವಾದಷ್ಟು ಜನರ ಮನಸ್ಸು ಗೆಲ್ಲುವ ಕಸರತ್ತು ನಡೀತಿದೆ. ಆದರೆ ಚುನಾವಣೆಯಲ್ಲಿ ಮತದಾರ ಯಾವ ನಿರ್ಧಾರ ಮಾಡಿದ್ದಾನೆ..? ದೆಹಲಿ(Delhi) ಗದ್ದುಗೆ ಮೇಲೆ ಕೂರುವುದಕ್ಕೆ ಯಾರನ್ನು ಆರಿಸಿದ್ದಾನೆ ಅನ್ನೋದಕ್ಕೆ ಉತ್ತರ ಜೂನ್ 4ರಂದು ಹೊರ ಬೀಳುವ ಫಲಿತಾಂಶದ(Result) ಮೇಲೆ ನಿರ್ಧಾರ ಆಗಲಿದೆ.
ಕೃಷ್ಣಮಣಿ





