ಸತತ ಸೋಲಿನ ಸುಳಿಯಲ್ಲಿ ಸಿಲುಕಿ ತಿಣುಕಾಡುತ್ತಿದ್ದ ಮುಂಬೈ ಇಂಡಿಯನ್ಸ್ (Mumbai indians )ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಗುರುವಾರ RCB ವಿರುದ್ಧ ನಡೆದ ಪಂದ್ಯದಲ್ಲಿ ಸ್ಫೋಟಕ ಆಟದ ಮೂಲಕ ಮುಂಬೈ ಗೆಲುವು ತನ್ನದಾಗಿಸಿಕೊಂಡಿದೆ. ಆಡಿದ 6 ಪಂದ್ಯಗಳಲ್ಲಿ ೫ ಪಂದ್ಯ ಸೋತಿರುವ RCB ಪಾಯಿಂಟ್ಸ್ ಟೇಬಲ್ (points table) ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.
ಮೊದಲು ಬ್ಯಾಟಿಂಗ್ ಮಾಡಿದ RCB ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಭರ್ಜರಿ 196 ರನ್ ಕಲೆಹಾಕಿತ್ತು. ಫಾಫ್ ಡ್ಯೂಪ್ಲೆಸಿಸ್ (duplesis) ಅಬ್ಬರದ ಆಟದ ಮೂಲಕ ಉತ್ತಮ ಆರಂಭ ಪಡೆದುಕೊಂಡ ಟೀಮ್ ನಂತರ ಸ್ವಲ್ಪ ಮುಗ್ಗರಿಸಿತ್ತು. ಆದ್ರೆ ಅಂತಿಮವಾಗಿ ದಿನೇಶ್ ಕಾರ್ತಿಕ್ (Dinesh karthik) ಉತ್ತಮ ಪ್ರದರ್ಶನದಿಂದ RCB 197 ರನ್ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಯ್ತು.
ಬೃಹತ್ ಮೊತ್ತ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ಆರಂಭದಿಂದಲೇ ಸ್ಫೋಟಕ ಆಟಕ್ಕೆ ಮುಂದಾಯಿತು. ರೋಹಿತ್ ಶರ್ಮಾ (Rohith sharma) ಹಾಗೂ ಇಶಾನ್ ಕಿಶನ್ (Ishan kishan) ಮುಂಬಯಿ ಇಂಡಿಯನ್ಸ್ ಗೆ ಅದ್ಬುತ ಬುನಾದಿ ಹಾಕಿಕೊಟ್ರು. ನಂತರ ಬಂದ ಸೂರ್ಯ ಕುಮಾರ ಯಾದವ್ (surya kumar yadav), ತಿಲಕ್(Tilak), RCB ಬೌಲರ್ ಗಳನ್ನ ಮನ ಬಂದಂತೆ ದಂಡಿಸಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ಕೇವಲ 15.3 ಓವರ್ ಗಳಲ್ಲಿ 199 ರನ್ ಗಳಿಸುವ ಮೂಲಕ ಭರ್ಜರಿ ಜಯ ದಾಖಲಿಸಿ ಪಾಯಿಂಟ್ ಟೇಬಲ್ ನಲ್ಲಿ 7 ಸ್ಥಾನಕ್ಕೆ ಏರಿತು.