• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನಿಮ್ಮನ್ನು ಆರಿಸಿದ್ದಕ್ಕೆ ನಾವು ನೇಣು ಹಾಕಿಕೊಳ್ಳಬೇಕೆ?

Any Mind by Any Mind
May 14, 2021
in ಕರ್ನಾಟಕ
0
ನಿಮ್ಮನ್ನು ಆರಿಸಿದ್ದಕ್ಕೆ ನಾವು ನೇಣು ಹಾಕಿಕೊಳ್ಳಬೇಕೆ?
Share on WhatsAppShare on FacebookShare on Telegram

ರಾಜ್ಯದಲ್ಲಿ ಕೋವಿಡ್ ಮಾರಣಹೋಮದ ನಡುವೆ ಜನ ಜೀವ ಉಳಿಸಿಕೊಳ್ಳಲು ಲಸಿಕೆಯ ಮೊರೆಹೋಗುತ್ತಿದ್ದಾರೆ. ಮೊದಲನೆಯದಾಗಿ ದೇಶದ ಜನರಿಗೆ ಬೇಕಾದಷ್ಟು ಲಸಿಕೆ ಲಭ್ಯತೆ ಖಾತರಿಪಡಿಸಿಕೊಳ್ಳದೆ ‘ವ್ಯಾಕ್ಸಿನ್ ಡಿಪ್ಲೊಮಸಿ’ ಎಂಬ ಪ್ರಧಾನಮಂತ್ರಿಗಳ ಜಾಗತಿಕ ವರ್ಚಸ್ಸು ವೃದ್ಧಿಯ ತಂತ್ರಗಾರಿಕೆಗಾಗಿ ಕೋಟ್ಯಂತರ ಲಸಿಕೆಗಳನ್ನು ವಿದೇಶಕ್ಕೆ ಉಚಿತವಾಗಿ ಹಂಚಲಾಯಿತು.

ADVERTISEMENT

ಎರಡನೆಯದಾಗಿ, ದೇಶದ ಲಭ್ಯ ಲಸಿಕೆ ಮತ್ತು ಸದ್ಯದಲ್ಲಿ ಲಸಿಕೆ ಉತ್ಪಾದನೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವ ವರ್ಗದ ಜನರಿಗೆ ಮೊದಲ ಆದ್ಯತೆಯಾಗಿ ಲಸಿಕೆ ನೀಡಬೇಕು? ಮತ್ತು ಅದಕ್ಕಾಗಿ ಎಷ್ಟು ಲಸಿಕೆ ಬೇಕಾಗುತ್ತದೆ? ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆ ಉತ್ಪಾದನೆಯ ವೇಗದ ಲೆಕ್ಕದಲ್ಲಿ ಅಗತ್ಯ ಲಸಿಕೆ ಉತ್ಪಾದನೆಗೆ ತಗಲುವ ಸಮಯವೆಷ್ಟು? ಎಂಬ ಪ್ರಾಥಮಿಕ ಅಂಶಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳದೆ, ಅವಸರದಲ್ಲಿ ಲಸಿಕೆ ಅಭಿಯಾನಗಳಿಗೆ ಚಾಲನೆ ನೀಡಲಾಯಿತು.

ಈ ನಡುವೆ, ಪ್ರಕರಣಗಳು ಅತಿ ಹೆಚ್ಚಿರುವ ಕರ್ನಾಟಕಕ್ಕೆ ಅತಿ ಕಡಿಮೆ ಲಸಿಕೆ ಮತ್ತು ಕರ್ನಾಟಕಕ್ಕಿಂತ ಹಲವು ಪಟ್ಟು ಕಡಿಮೆ ಪ್ರಕರಣಗಳಿರುವ ಪ್ರಧಾನಮಂತ್ರಿಗಳ ತವರು ರಾಜ್ಯ ಗುಜರಾತಿಗೆ ಅತಿ ಹೆಚ್ಚು ಲಸಿಕೆ ನೀಡುವಂತಹ ಕನ್ನಡಿಗರ ವಿರೋಧಿ ಧೋರಣೆಯನ್ನು ಕೇಂದ್ರ ಸರ್ಕಾರ ಪ್ರದರ್ಶಿಸಿತು. ನೆರೆ ಪರಿಹಾರ, ಜಿಎಸ್ ಟಿ ಪಾಲು ಹಂಚಿಕೆಯಂತಹ ಹಲವು ವಿಷಯಗಳಲ್ಲಿ ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ನಿರಂತರ ಮಲತಾಯಿ ಧೋರಣೆಯನ್ನು ರಾಜಾರೋಷವಾಗಿ ಪ್ರದರ್ಶಿಸುತ್ತಿರುವ ಕೇಂದ್ರ ಸರ್ಕಾರ, ಈಗ ಜನರ ಸಾವು ಬದುಕಿನ ವಿಷಯದಲ್ಲಿ ಕೂಡ ಅಂತಹದ್ದೇ ಅಮಾನವೀಯ ನಡೆ ಅನುಸರಿಸಿದೆ.

ಆದರೆ, ಇಂತಹ ಘೋರ ಅನ್ಯಾಯದ ಹೊತ್ತಲ್ಲಿ ಕೂಡ ಕನ್ನಡಿಗರು ಮತ್ತು ಕರ್ನಾಟಕವನ್ನು ಕೇಂದ್ರ ಸರ್ಕಾರದಲ್ಲಿ ಮತ್ತು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಸಂಸದರು ಅನ್ಯಾಯದ ವಿರುದ್ಧ ತುಟಿಬಿಚ್ಚುತ್ತಿಲ್ಲ. ರಾಜ್ಯದ 28 ಲೋಕಸಭಾ ಸದಸ್ಯರ ಪೈಕಿ, 25 ಮಂದಿ ಆಡಳಿತರೂಢ ಬಿಜೆಪಿಯ ಸದಸ್ಯರೇ ಇದ್ದಾರೆ. ಮತ್ತೊಮ್ಮೆ ಮೋದಿ ಘೋಷಣೆಗೆ ಮಾರುಹೋಗಿ ಕನ್ನಡಿಗರು ದೇಶದಲ್ಲೇ ಅತಿಹೆಚ್ಚು ಮಂದಿ(ರಾಜ್ಯ ಸ್ಥಾನಬಲದ ಅನುಸಾರ)ಯನ್ನು ಆರಿಸಿಕಳಿಸಿದರು. ಜೊತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಐವರು ರಾಜ್ಯಸಭಾ ಸದಸ್ಯರನ್ನೂ ಬಿಜೆಪಿ ಹೊಂದಿದೆ. ಸಂಸದರ ಪೈಕಿ ಡಿ ವಿ ಸದಾನಂದಗೌಡ ಮತ್ತು ಪ್ರಹ್ಲಾದ್ ಜೋಷಿ ಕೇಂದ್ರ ಸಚಿವ ಸಂಪುಟದ ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಆದರೆ, ಇವರಾರೂ ಆಮ್ಲಜನಕದ ವಿಷಯದಲ್ಲಾಗಲೀ, ಲಸಿಕೆಯ ವಿಷಯದಲ್ಲಾಗಲೀ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನಿಷ್ಟ ಜನರ ಹಕ್ಕನ್ನು ಮಂಡಿಸುವ ಪ್ರಯತ್ನವನ್ನೂ ಮಾಡಿಲ್ಲ.

ಅದಕ್ಕೆ ಬದಲಾಗಿ, ಲಸಿಕೆಯ ವಿಷಯದಲ್ಲಿ ರಾಜಾದ್ಯಂತ ಎದ್ದಿರುವ ಹಾಹಾಕಾರದ ಹಿನ್ನೆಲೆಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಸಚಿವ ಸದಾನಂದಗೌಡರು, “ಲಸಿಕೆ ಉತ್ಪಾದನೆಯಾಗಲಿಲ್ಲ ಎಂದರೆ ನಾವೇನೂ ನೇಣು ಬಿಗಿದುಕೊಳ್ಳಬೇಕೆ?” ಎಂದಿದ್ದಾರೆ. ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ “ನ್ಯಾಯಾಧೀಶರೇನೂ ಸರ್ವಜ್ಞರಲ್ಲ” ಎಂದು ಜನರ ಪರ ದನಿ ಎತ್ತಿದ ನ್ಯಾಯಾಂಗವನ್ನೇ ವ್ಯಂಗ್ಯವಾಡಿದ್ದಾರೆ.

ಹಾಗಾಗಿ, ಈಗ, ನಿಮ್ಮಂಥ ಜನದ್ರೋಹಿ ಜನಪ್ರತಿನಿಧಿಗಳನ್ನು ಆರಿಸಿಕಳಿಸಿದ್ದಕ್ಕೆ ನಾವು ನೇಣುಹಾಕಿಕೊಳ್ಳಬೇಕೆ? ನಾವು ಕರೋನಾದ ದವಡೆಗೆ ಆಹಾರವಾಗಬೇಕೆ? ಕನಿಷ್ಟ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಯಾವ ಹೊಣೆಗಾರಿಕೆಯನ್ನು ತೋರದ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸದ ನಿಮ್ಮಂಥವರನ್ನು ಸಂಸತ್ತಿಗೆ ಕಳಿಸಿದ್ದೇ ನಮ್ಮ ಜೀವಕ್ಕೆ ಕಂಟಕವಾಯಿತೆ ಎಂದು ಈಗ ಪ್ರಶ್ನಿಸಬೇಕಿದೆ.

ಹಾಗೇ ಪ್ರಶ್ನಿಸದೇ ಇದ್ದರೆ, ಜನಪ್ರತಿನಿಧಿಗಳಿಗೆ ಮತದಾರ ನೀಡಿರುವ ಅಧಿಕಾರ ಎಂಬುದು ಯಾವ ಹೊಣೆಗಾರಿಕೆ ಇರದ, ಉತ್ತರದಾಯಿತ್ವ ಇರದ ಪರಮಾಧಿಕಾರ ಎಂದಾಗುತ್ತದೆ. ಹಾಗಾಗಿ ಪ್ರಶ್ನಿಸುವುದು ಜನರ ಹೊಣೆ ಕೂಡ. ಆ ಹಿನ್ನೆಲೆಯಲ್ಲಿ ‘ಪ್ರತಿಧ್ವನಿ’ ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರ ಅಧಿಕೃತ ದೂರವಾಣಿ ಮತ್ತು ಇಮೇಲ್ ಮಾಹಿತಿ ಒದಗಿಸಿದ್ದು(ಲೋಕಸಭೆ ವೆಬ್ ಅಧಿಕೃತ ಮಾಹಿತಿ), ರಾಜ್ಯದ ಜನತೆ ಅವರ ಹೊಣೆಗೇಡಿತನವನ್ನು ಪ್ರಶ್ನಿಸಲು ಈಗಲಾದರೂ ಮುಂದಾಗಬೇಕಿದೆ.

ಲೋಕಸಭಾ ಸದಸ್ಯರು

ಡಿ ವಿ ಸದಾನಂದಗೌಡ(ಕೇಂದ್ರ ಸಚಿವರು)

ದೂರವಾಣಿ: (080) 23413249 ಮೊಬೈಲ್: 9448123249/ 09868180269

ಇಮೇಲ್: sadananda.gowda@sansad.nic.in / sadanandagowda@yahoo.com

ಪ್ರಹ್ಲಾದ ಜೋಷಿ(ಕೇಂದ್ರ ಸಚಿವರು)

ದೂರವಾಣಿ: (0836) 2251055/ 2258955. ಮೊಬೈಲ್: 9448283555/ 0986818041

ಇಮೇಲ್: joshi.pralhad@sansad.nic.in / pralhadvjoshi@gmail.com / officeofpralhadjoshiji.gmail.com

ಅನಂತಕುಮಾರ ಹೆಗಡೆ(ಉತ್ತರಕನ್ನಡ)

ದೂರವಾಣಿ: (08384) 234337(R), Telefax: (08384) 225248(O) ಮೊಬೈಲ್: 8762180337

ಇಮೇಲ್: anantkh@sansad.nic.in / mpcanara@gmail.com/ anantkumarhegde@gmail.com

ಶೋಭಾ ಕರಂದ್ಲಾಜೆ(ಉಡುಪಿ-ಚಿಕ್ಕಮಗಳೂರು)

ಮೊಬೈಲ್: 9448087039

ಇಮೇಲ್: shobhakarandlaje@sansad.nic.in / karandljeshobha@gmail.com


ನಳೀನ್ ಕುಮಾರ್ ಕಟೀಲು(ದಕ್ಷಿಣ ಕನ್ನಡ)

ದೂರವಾಣಿ: (0824) 2448888, ಮೊಬೈಲ್: 9448549445


ಇಮೇಲ್: nalinkumar.kateel@sansad.nic.in / mpdkannada@gmail.com

ಪ್ರತಾಪ ಸಿಂಹ(ಮೈಸೂರು)

ದೂರವಾಣಿ: (0821)2444999, ಮೊಬೈಲ್: 8277219999 / 09013869192

ಇಮೇಲ್: pratap.simha@sansad.nic.in / officeofpratapsimha@gmail.com

ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ)

ದೂರವಾಣಿ: (080)26651166, ಮೊಬೈಲ್: 9916836964 / 09964453032

ಇಮೇಲ್: tejasvi.surya@sansad.nic.in / contact@tejasvisurya.in

ವಿ ಶ್ರೀನಿವಾಸ ಪ್ರಸಾದ್(ಚಾಮರಾಜನಗರ)

ದೂರವಾಣಿ: (0821) 2511533, ಮೊಬೈಲ್: 9448448150

ಇಮೇಲ್: vsreenivasa.prasad@sansad.nic.in / srinivasprasad1949@gmail.com

ಎ ನಾರಾಯಣ ಸ್ವಾಮಿ(ಚಿತ್ರದುರ್ಗ)

ಮೊಬೈಲ್: 9900845555

ಇಮೇಲ್: a.narayanswamy@sansad.nic.in / anarayanaswamyanekal5@gmail.com

ಬಿ ಎನ್ ಬಚ್ಚೇಗೌಡ (ಚಿಕ್ಕಬಳ್ಳಾಪುರ)

ದೂರವಾಣಿ: (080)22222096 ಮೊಬೈಲ್: 9535777868

ಇಮೇಲ್: bnb.gowada@sansad.nic.in / sharathbachegowda@gmail.com


ಜಿ ಎಸ್ ಬಸವರಾಜ್(ತುಮಕೂರು)

ದೂರವಾಣಿ: (0816) 2279192, Fax. (0816) 2255530 ಮೊಬೈಲ್: 9448079192
ಇಮೇಲ್: gsiddappa@sansad.nic.in / gsbasavaraj.mp@gmail.com

ಪಿ ಸಿ ಗದ್ದಿಗೌಡರ್ (ಬಾಗಲಕೋಟೆ)

ದೂರವಾಣಿ: (08357) 220164, ಮೊಬೈಲ್: 9868180612, 9448137164

ಇಮೇಲ್: pc.gaddigoudar@sansad.nic.in / pcgaddigoudar@rediffmail.com

ಉಮೇಶ್ ಜಾಧವ್ (ಕಲಬುರ್ಗಿ)

ಮೊಬೈಲ್: 9242211591 / 8588823456 / 9013997159

ಇಮೇಲ್: ug.jadhav@sansad.nic.in / ugjadhav@yahoo.com

ರಮೇಶ್ ಜಿಗಜಿಣಗಿ(ವಿಜಯಪುರ)

ದೂರವಾಣಿ: (0835) 262233 Fax :(0835) 253755/ ಮೊಬೈಲ್: 986180849, 9449031477

ಇಮೇಲ್: rameshj@sansad.nic.in / mpbijapur@gmail.com


ಅಣ್ಣಾ ಸಾಹೇಬ್ ಜೊಲ್ಲೆ (ಚಿಕ್ಕೋಡಿ)

ದೂರವಾಣಿ: (08338)276424, ಮೊಬೈಲ್: 09900559835

ಇಮೇಲ್: asjmp.chikkodi@sansad.nic.in / asj9835@gmail.com

ಸಂಗಣ್ಣ ಕರಡಿ (ಕೊಪ್ಪಳ)

ದೂರವಾಣಿ: (08539) 222909, ಮೊಬೈಲ್: 09480219009

ಇಮೇಲ್: karadi.amarappa@sansad.nic.in / bjpdpkpl@gmail.com


ಭಗವಂತ ಖೂಬಾ (ಬೀದರ್)

ದೂರವಾಣಿ: (0848) 2225925, ಮೊಬೈಲ್: 9448115926 / 9871748771 / 9013869178

ಇಮೇಲ್: bhagwanth.khuba@sansad.nic.in / mpbidar@gmail.com

ಪಿ ಸಿ ಮೋಹನ್ (ಬೆಂಗಳೂರು ಸೆಂಟ್ರಲ್)

ದೂರವಾಣಿ: (080) 26710133(R) 22865454(O) ಮೊಬೈಲ್: 9845003600/ 9013180136

ಇಮೇಲ್: pc.mohan@sansad.nic.in / contact@pcmohan.com

ಎಸ್ ಮುನಿಸ್ವಾಮಿ (ಕೋಲಾರ)

ದೂರವಾಣಿ: (080) 40942853, ಮೊಬೈಲ್: 9880088528

ಇಮೇಲ್: kolarmpmuniswamy.s@sansad.nic.in / kolarmpmuniswamy.s@gmail.com



ರಾಜಾ ಅಮರೇಶ್ವರ ನಾಯ್ಕ್ (ರಾಯಚೂರು)

ಮೊಬೈಲ್: 9008989464

ಬಿ ವೈ ರಾಘವೇಂದ್ರ (ಶಿವಮೊಗ್ಗ)

ದೂರವಾಣಿ: (08187) 222256, (08182) 255427, Fax. (08187) 222777 ಮೊಬೈಲ್: 9560203221, 9731853100
ಇಮೇಲ್: by.raghavendra@sansad.nic.in / raghuby@gmail.com / mppa.smg@gmail.com

ಜಿ ಎಂ ಸಿದ್ಧೇಶ್ವರ (ದಾವಣಗೆರೆ)

ದೂರವಾಣಿ: (08194) 262017, 262022, ಮೊಬೈಲ್: 9448161799/ 9868180264

ಇಮೇಲ್: gm.siddeshwara@sansad.nic.in / gmsiddeshwara@gov.in

ಶಿವಕುಮಾರ್ ಉದಾಸಿ (ಹಾವೇರಿ)

ದೂರವಾಣಿ: (08379) 262330, ಮೊಬೈಲ್: 9844034575/ 9013180140

ಇಮೇಲ್: udasi.channabasappa@sansad.nic.in / 68southavenue@gmail.com

ದೇವೇಂದ್ರಪ್ಪ (ಬಳ್ಳಾರಿ)

ಮೊಬೈಲ್: 9448424272 / 9945627086

ಇಮೇಲ್: y.devendrappa@sansad.nic.in / ydevendrappa1@gmail.com

ಸುಮಲತಾ ಅಂಬರೀಶ್(ಮಂಡ್ಯ)

ಮೊಬೈಲ್: 9481687299 / 9845052494

ಇಮೇಲ್: suma.ambareesh@sansad.nic.in / sumabi@yahoo.com

ಪ್ರಜ್ವಲ್ ರೇವಣ್ಣ(ಹಾಸನ)

ದೂರವಾಣಿ: (08175) 273216, ಮೊಬೈಲ್: 9448364483 / 9811267210

ಇಮೇಲ್: prajwal.revanna@sansad.nic.in / prajwal8055revanna@gmail.com


ಡಿ ಕೆ ಸುರೇಶ್ (ಬೆಂಗಳೂರು ಗ್ರಾ.)

ದೂರವಾಣಿ: (080)23617000, Fax : (080)23619000 ಮೊಬೈಲ್: 9845029142/ 9480929142

ಇಮೇಲ್: dk.suresh@sansad.nic.in / dksuresh18@gmail.com

Previous Post

ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರಲ್ಲಿ ಯಾರಾದರೂ ಒಬ್ಬರು ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರಾ? – ಡಿ.ಕೆ. ಶಿವಕುಮಾರ್

Next Post

ಕೋವಿಡ್ ಚಿಕಿತ್ಸೆಗಾಗಿ ಗೋ ಮೂತ್ರ ಬಳಸುವುದರ ವಿರುದ್ಧ ಎಚ್ಚರಿಕೆ ನೀಡಿದ ವೈದ್ಯರು

Related Posts

Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು
Top Story

Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

by ಪ್ರತಿಧ್ವನಿ
January 13, 2026
0

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ (Toxic) ಟೀಸರ್ ಬಿಡುಗಡೆಯಾದ  ದಿನದಿಂದ ಭಾರೀ ವಿವಾದಕ್ಕೆ ಕಾರಣವಾಗಿದೆ. ಜನವರಿ 08ರಂದು ಬಿಡುಗಡೆಯಾದ...

Read moreDetails
BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

January 13, 2026
BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

January 13, 2026
ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್..ಟೆಕ್ಕಿ ಅರೆಸ್ಟ್

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್..ಟೆಕ್ಕಿ ಅರೆಸ್ಟ್

January 13, 2026
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

January 13, 2026
Next Post
ಕೋವಿಡ್ ಚಿಕಿತ್ಸೆಗಾಗಿ ಗೋ ಮೂತ್ರ ಬಳಸುವುದರ ವಿರುದ್ಧ ಎಚ್ಚರಿಕೆ ನೀಡಿದ ವೈದ್ಯರು

ಕೋವಿಡ್ ಚಿಕಿತ್ಸೆಗಾಗಿ ಗೋ ಮೂತ್ರ ಬಳಸುವುದರ ವಿರುದ್ಧ ಎಚ್ಚರಿಕೆ ನೀಡಿದ ವೈದ್ಯರು

Please login to join discussion

Recent News

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?
Top Story

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

by ಪ್ರತಿಧ್ವನಿ
January 13, 2026
Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು
Top Story

Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

by ಪ್ರತಿಧ್ವನಿ
January 13, 2026
BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!
Top Story

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

by ಪ್ರತಿಧ್ವನಿ
January 13, 2026
ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!
Top Story

ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!

by ಪ್ರತಿಧ್ವನಿ
January 13, 2026
BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?
Top Story

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

January 13, 2026
Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada