ಹಾವೇರಿ : ಸಂಸದ ಅನಂತ್ ಕುಮಾರ್ ಹೆಗಡೆ (Anant kumar hegde) ಹುಚ್ಚ, ಅವರಿಗೆ ಸಂಸ್ಕೃತಿ ಇಲ್ಲ ಎಂದು ಹೇಳಿಕೆ ನೀಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu bhangarappa) ವಿರುದ್ದ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಆರ್. ಅಶೋಕ್, ಮಧು ಬಂಗಾರಪ್ಪ ಮೊದಲು ಶಿವಮೊಗ್ಗ ಕ್ಷೇತ್ರದಲ್ಲಿ ಗೆದ್ದು ಬರಲಿ. ಅ ಮೇಲೆ ಬೇರೆಯವರ ಬಗ್ಗೆ ಮಾತನಾಡಲಿ. ಸೋಲಿನ ಭಯದಲ್ಲಿ ಮಧು ಬಂಗಾರಪ್ಪ ಹಾಗೆ ಮಾತನಾಡಿದ್ದಾರೆ. ದೇಶದಲ್ಲಿ ಎಲ್ಲಿ ನೋಡಿದರೂ ರಾಮಮಂದಿರ ಅಂತಿದ್ದಾರೆ. ಮಧು ಬಂಗಾರಪ್ಪ ಅಲ್ಫಸಂಖ್ಯಾತರನ್ನ ಬ್ರದರ್ಸ್ ಅನ್ನುತ್ತಾರೆ . ಹಾಗಾದರೇ ಮಧು ಬಂಗಾರಪ್ಪ ಬ್ರದರ್ಸ್ ಸಿಸ್ಟರ್ಸ್ ನೋಡಿಕೊಂಡು ಇರಲಿ ಎಂದು ಟಾಂಗ್ ನೀಡಿದರು.

ಮಧು ಬಂಗಾರಪ್ಪ ಮೊದಲ ಬಾರಿಗೆ ಶಾಸಕರಾಗಿದ್ದಾರೋ ಏನೋ ಗೊತ್ತಿಲ್ಲ. ಆದರೆ ಅನಂತ ಕುಮಾರ್ ಹೆಗಡೆ 5 ಬಾರಿ ಸಂಸದರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಮತದಾರರು ಅವರನ್ನ ಗೆಲ್ಲಿಸಿದ್ದಾರೆ. ಮಧು ಬಂಗಾರಪ್ಪ ಅವರ ಹೇಳಿಕೆ ಜನರಿಗೆ ಅವಮಾನವಾಗುವ ರೀತಿ ಹೇಳಿಕೆ ಎಂದು ಹರಿಹಾಯ್ದರು.
ಕಾಂಗ್ರೆಸ್ 13 ಲೋಕಸಭಾ ಕ್ಷೇತ್ರದಲ್ಲಿ ನಿಲ್ಲಲು ಗತಿ ಇಲ್ಲ. ಈ ಬಗ್ಗೆ ಇತ್ತೀಚೆಗೆ ವರದಿಯಾಗಿದೆ. ಗತಿಯಲ್ಲಿದ ಕ್ಷೇತ್ರದಲ್ಲಿ ಮೊದಲು ಟಿಕೆಟ್ ನೀಡಲಿ ಆಮೇಲೆ ಬಿಜೆಪಿ ಬಗ್ಗೆ ಮಾತನಾಡಲಿ ಎಂದು ಆರ್.ಅಶೋಕ್ ಕಿಡಿಕಾರಿದರು.