ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಮಧ್ಯಪ್ರವೇಶ ಮುಗಿಸಿ ಡಿಸೆಂಬರ್ ಮೊದಲನೇ ವಾರದಲ್ಲಿ ರಾಜಸ್ಥಾನ ಪ್ರವೇಶಿಸಲಿದ್ದು ಇದಕ್ಕೂ ಮುನ್ನ ರಾಜ್ಯಸದಲ್ಲಿ ಉದ್ಭವಿಸಿದ ಬಿಕ್ಕಟ್ಟನ್ನು ತಣಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ.
ಸೋಮವಾರ ಇಂದೋರ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡು ವೇಳೆ ರಾಹುಲ್ ಗಾಂಧಿ ಪೈಲಟ್ ಹಾಗೂ ಗೆಹ್ಲೋಟ್ ಈ ಇಬ್ಬರು ನಾಯಕರು ಪಕ್ಷದ ಆಸ್ತಿ ಎಂದು ಹೇಳಿದ್ದರು ಮತ್ತು ಈ ಇಬ್ಬರು ನಾಯಕರ ನಡುವಿನ ಬಿಕ್ಕಟ್ಟು ಶೀಘ್ರ ಶಮನವಾಗುತ್ತದೆಂದು ವಿಶ್ವಾಸ ವ್ಯಕ್ತಪಡಿಸಿದರು.
We are united. Here Ashok Ji and Sachin Pilot Ji have said that the Congress party in Rajasthan is united. Rahul Gandhi has clearly stated that both Ashok Gehlot and Sachin Pilot are assets to the party: KC Venugopal, Gen Secy-Org, Congress, at Jaipur pic.twitter.com/44Bq4Os41l
— ANI (@ANI) November 29, 2022
ಇನ್ನು ರಾಹುಲ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ರಾಹುಲ್ ಗಾಂಧಿ ಹೇಳಿದ ಮೇಲೆ ಮುಗಿಯಿತು ಇದು ನಮ್ಮ ಪಕ್ಷದ ಸೌಂದರ್ಯ ಮುಂದಿನ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಕೂಡ ನಮ್ಮ ಆಸ್ತಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಯನ್ನ ಯಶಸ್ವಿಗೊಳಿಸುತ್ತೇವೆ ಮತ್ತು 2023ರಲ್ಲಿ ರಾಜ್ಯದಲ್ಲಿ ಮತ್ತ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುತ್ತೇವೆ ಎಂದು ಗೆಹಲೋಟ್ ಕೆ.ಸಿ.ವೇಣುಗೋಪಾಲ್ ಜೊತೆಗಿನ ಸಭೆಯ ನಂತರ ತಿಳಿಸಿದ್ದಾರೆ.
#WATCH | "Rahul Gandhi has said that Ashok Gehlot and Sachin Pilot are assets to the party," Rajasthan CM & Congress leader Ashok Gehlot at Jaipur pic.twitter.com/rRfGN5ffPl
— ANI (@ANI) November 29, 2022