ಭಿವಾನಿ: ನಾನು ಇರುವವರೆಗೂ ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೀಸಲಾತಿ ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹರಿಯಾಣದ ಭಿವಾನಿಯಲ್ಲಿ ಸಾರ್ವಜನಿಕ ಸಭೆ ಉದ್ಧೇಶಿಸಿ ಮಾತನಾಡಿದ ಪ್ರಧಾನಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯು ರಾತ್ರೋರಾತ್ರಿ ಮುಸ್ಲಿಂರಿಗೆ ಹಾಗೂ ನುಸುಳುಕೋರರಿಗೆ ಒಬಿಸಿ ಪ್ರಮಾಣ ಪತ್ರಗಳನ್ನು ನೀಡಿದೆ. ಕಳೆದ 10-12 ರಲ್ಲಿ ಮುಸ್ಲಿಂರಿಗೆ ನೀಡಲಾದ ಎಲ್ಲಾ ಒಬಿಸಿ ಪ್ರಮಾಣಪತ್ರಗಳನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್, ಟಿಎಂಸಿ ಮತ್ತು ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳು ಅವರ ಮತ ಬ್ಯಾಂಕ್ ನ್ನು ಬೆಂಬಲಿಸುತ್ತಿವೆ. ಮೋದಿ ವಂಚಿತರ ಹಕ್ಕುಗಳ ಕಾವಲುಗಾರ. ಇದು ರಾಜಕೀಯ ಭಾಷಣವಲ್ಲ, ಇದು ಮೋದಿಯವರ ಗ್ಯಾರಂಟಿ ಎಂದು ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟಕ್ಕೆ ದೇಶಕ್ಕಿಂತ ಅವರ ಮತ ಬ್ಯಾಂಕ್ ಮುಖ್ಯವಾಗಿದೆ. ಮತ ಬ್ಯಾಂಕ್ ಗಾಗಿ ದೇಶವನ್ನು ವಿಭಜಿಸಿದ್ದಾರೆ. ಅವರು ಒಂದು ಭಾರತವನ್ನು ಮತ್ತು ಎರಡು ಮುಸ್ಲಿಂ ರಾಷ್ಟ್ರಗಳನ್ನು ರಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.