• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಡ್ರಗ್ಸ್ ಪಾರ್ಟಿ ಪ್ರಕರಣ: ಶಾರುಖ್‌ ಪುತ್ರನಿಗಿಲ್ಲ ಜಾಮೀನು, ಮುಂಬೈ ಹೈಕೊರ್ಟ್‌ಗೆ ಮೇಲ್ಮನವಿ

Any Mind by Any Mind
October 20, 2021
in ದೇಶ
0
ಡ್ರಗ್ಸ್ ಪಾರ್ಟಿ ಪ್ರಕರಣ: ಶಾರುಖ್‌ ಪುತ್ರನಿಗಿಲ್ಲ ಜಾಮೀನು, ಮುಂಬೈ ಹೈಕೊರ್ಟ್‌ಗೆ ಮೇಲ್ಮನವಿ
Share on WhatsAppShare on FacebookShare on Telegram

ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ NDPS ಕೋರ್ಟ್ ತಿರಸ್ಕರಿಸಿದೆ. ಆರ್ಯನ್ ಖಾನೆ ಜೊತೆಗೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಗಳನ್ನೂ ಕೋರ್ಟ್ ತಿರಸ್ಕರಿಸಿದ್ದು, ಈ ಆದೇಶವನ್ನು ಪ್ರಶ್ನಿಸಿ ಮುಂಬೈ ಹೈಕೊರ್ಟ್‌ಗೆ ಆರ್ಯನ್‌ ಪರ ವಕೀಲ ಮೇಲ್ಮನವಿ ಸಲ್ಲಿಸಲಾಗಿದೆ.

ADVERTISEMENT

ಅಕ್ಟೋಬರ್ 3ರಂದು Narcotics Control Bureau (NCB) ಯಿಂದ ಬಂಧಿತನಾಗಿದ್ದ ಆರ್ಯನ್ ಖಾನ್ ಸದ್ಯ ಮುಂಬೈನ ಅರ್ಥೂರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಆರ್ಯನ್ ಖಾನ್ ಗೆ ಜಾಮೀನು ನೀಡುವಂತೆ ಮುಂಬೈನ ಎನ್ಡಿಪಿಎಸ್ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ 20-10-2021 ಬುಧವಾರಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಸೇರಿದಂತೆ ಇನ್ನು ಮೂವರಿಗೆ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಈ ಪ್ರಕರಣದ ಆರೋಪಿ ಆರ್ಯನ್ ಖಾನ್ ಮತ್ತು ಇತರರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 8 (ಸಿ), 20 (ಬಿ), 27, 28, 29 ಮತ್ತು 35ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

“ಮುಂಬೈ NDPS ಕೋರ್ಟ್ ನೀಡಿದ ಆದೇಶ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದೇ ಹೈಕೋರ್ಟ್ ಮೊರೆ ಹೋಗಲಾಗುವುದು. ಒಂದು ವೇಳೆ ಆದೇಶ ಪ್ರತಿ ಸಿಗದಿದ್ದರೆ ಗುರುವಾರ ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗುವುದು,” ಎಂದು ಆರ್ಯನ್ ಖಾನ್ ಪರ ವಕೀಲರು ತಿಳಿಸಿದ್ದಾರೆ. ಈಗ ಹೈಕೊರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ಮುಂದೇನಾಗುತ್ತದೆ ಎಂದುಕಾದು ನೋಡಬೇಕಿದೆ.

ಅತ್ತ ಜೈಲಿನಲ್ಲಿ ಸರಿಯಾಗಿ ಊಟ,ನೀರು ಮತ್ತು ಸ್ನಾನ ಮಾಡದ ಆರ್ಯನ್ ಖಾನ್; ಅಧಿಕಾರಿಗಳಿಗೆ ತಲೆಬಿಸಿ ತಂದಿಟ್ಟಿದ್ದಾರೆ!

ಸ್ಟಾರ್ ಪುತ್ರನಾಗಿ ಹುಟ್ಟಿದ ಆರ್ಯನ್ ಖಾನ್ ಅವರು ಜೀವನದಲ್ಲಿ ಕಷ್ಟವನ್ನೇ ಕಂಡಿರಲಿಲ್ಲ. ಇಷ್ಟು ದಿನ ಐಷಾರಾಮಿ ಜೀವನ ಸಾಗಿಸಿದ್ದ ಅವರಿಗೆ ಈಗ ಜೈಲಿನಲ್ಲಿ ಹೊಂದಿಕೊಳ್ಳುವುದು ಕಷ್ಟ ಆಗಿದೆ. ಅಲ್ಲಿನ ಶೌಚಾಲಯವನ್ನು ಬಳಸಲು ಆರ್ಯನ್ ಹಿಂದೆಮುಂದೆ ನೋಡುತ್ತಿದ್ದಾರೆ. ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸಲು ಅವರು ಊಟ, ನೀರು ಸೇವಿಸುವುದನ್ನು ಕಡಿಮೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಸ್ನಾನವನ್ನೂ ಮಾಡುತ್ತಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

ಶಾರುಖ್ ಪುತ್ರನ ಈ ವರ್ತನೆಯಿಂದ ಜೈಲು ಅಧಿಕಾರಿಗಳಿಗೆ ತಲೆನೋವು ಉಂಟಾಗಿದೆ. ಹೀಗೆಲ್ಲ ಮಾಡಿ ಆರೋಗ್ಯ ಕೆಡಿಸಿಕೊಂಡರೆ ಮುಂದಿನ ವಿಚಾರಣೆಗೆ ತೊಂದರೆ ಆಗುತ್ತದೆ. ಹಾಗಾಗಿ ಜೈಲು ಅಧಿಕಾರಿಗಳು ಶಾರುಖ್ ಪುತ್ರನನ್ನು ಬೇರೊಂದು ಸೆಲ್ಗೆ ವರ್ಗಾಯಿಸಿದ್ದಾರೆ.

ಇತ್ತ ಮಗ ಆರ್ಯನ್ ಬರುವವರೆಗೆ ಸಿಹಿ ತಿಂಡಿ ಮಾಡುವಂತಿಲ್ಲ ಎಂದ ತಾಯಿ ಗೌರಿ ಖಾನ್!

ಈ ಮಧ್ಯೆ ಆರ್ಯನ್ ಖಾನ್ ಬರುವವರೆಗೂ ಮನೆಯಲ್ಲಿಯಾವುದೇ ರೀತಿಯ ಸಿಹಿ ತಿನಿಸು ಅಡುಗೆ ಮಾಡಬಾರದು ಎಂದು ಗೌರಿ ಖಾನ್ ಅಡುಗೆಯವರಿಗೆ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಮನೆಯಲ್ಲಿನ ಅಡುಗೆ ಸಿಬ್ಬಂದಿಗೆ ಗೌರಿ ಖಾನ್ ಈ ಕುರಿತು ಸೂಚನೆ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

Tags: Covid 19Narcotics Control Bureauಆರ್ಯನ್ ಖಾನ್ಗೌರಿ ಖಾನ್ಡ್ರಗ್ಸ್ ಪಾರ್ಟಿ ಪ್ರಕರಣಶಾರುಖ್‌ ಖಾನ್‌
Previous Post

ಬಿಜೆಪಿಗೆ ಯಾಕೆ ಮತ ಹಾಕುತ್ತೀರಾ ? ತೈಲ ಬೆಲೆ ಹೆಚ್ಚಳ ಮಾಡಿದ್ದಕ್ಕಾ? – ರಣದೀಪ್ ಸಿಂಗ್ ಸುರ್ಜೇವಾಲ

Next Post

ರಮೇಶ್ ಜಾರಕಿಹೊಳಿ-ಬೊಮ್ಮಾಯಿ ರಹಸ್ಯ ಸಭೆ; ತೆರೆಮರೆಯಲ್ಲೇ ಸಾಹುಕಾರ್ ಚುನಾವಣಾ ಪ್ರಚಾರ

Related Posts

BREAKING NEWS : ಮನೆಯಿಂದಲೇ ವಾಟಾಳ್‌ ನಾಗರಾಜ್‌ ಪೊಲೀಸ್‌ ವಶಕ್ಕೆ ; ಕುತೂಹಲ ಮೂಡಿಸಿದ ಬಂದ್‌ ಭವಿಷ್ಯ..!
Top Story

BREAKING NEWS : ಮನೆಯಿಂದಲೇ ವಾಟಾಳ್‌ ನಾಗರಾಜ್‌ ಪೊಲೀಸ್‌ ವಶಕ್ಕೆ ; ಕುತೂಹಲ ಮೂಡಿಸಿದ ಬಂದ್‌ ಭವಿಷ್ಯ..!

by ಪ್ರತಿಧ್ವನಿ
August 13, 2026
0

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಮತ್ತು ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು...

Read moreDetails
ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

August 13, 2026
BREAKING NEWS : ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಇಲಾಖೆ ಇಲ್ಲಿದೆ..!

ಶಿವಲಿಂಗೇಗೌಡಗೆ ಅಬಕಾರಿ, ಜಮೀರ್‌ಗೆ ವಸತಿ : ಖಾತೆ ಹಂಚಿಕೆಯಲ್ಲೂ ಸಿಎಂ ಡಿಕೆ ಶಿವಕುಮಾರ್ ದೂರದೃಷ್ಟಿಯ ನಡೆ ..

August 12, 2026
ಇನ್ಮುಂದೆ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ  ಬ್ಯಾನ್‌ : ಹೇಳಿದ್ದನ್ನೆ ಮಾಡಿ ತೋರಿಸಿದ ಸಿಎಂ ಡಿಕೆಶಿ..

ಇನ್ಮುಂದೆ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ ಬ್ಯಾನ್‌ : ಹೇಳಿದ್ದನ್ನೆ ಮಾಡಿ ತೋರಿಸಿದ ಸಿಎಂ ಡಿಕೆಶಿ..

August 12, 2026
ನಗರಗಳ ಮೂಲಸೌಕರ್ಯ ಅಭಿವೃದ್ಧಿ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಿ :  ಡಾ. ಯತೀಂದ್ರ ಸಿದ್ದರಾಮಯ್ಯ ಸೂಚನೆ..

ನಗರಗಳ ಮೂಲಸೌಕರ್ಯ ಅಭಿವೃದ್ಧಿ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಿ : ಡಾ. ಯತೀಂದ್ರ ಸಿದ್ದರಾಮಯ್ಯ ಸೂಚನೆ..

August 12, 2026
Next Post
ರಮೇಶ್ ಜಾರಕಿಹೊಳಿ-ಬೊಮ್ಮಾಯಿ ರಹಸ್ಯ ಸಭೆ; ತೆರೆಮರೆಯಲ್ಲೇ ಸಾಹುಕಾರ್ ಚುನಾವಣಾ ಪ್ರಚಾರ

ರಮೇಶ್ ಜಾರಕಿಹೊಳಿ-ಬೊಮ್ಮಾಯಿ ರಹಸ್ಯ ಸಭೆ; ತೆರೆಮರೆಯಲ್ಲೇ ಸಾಹುಕಾರ್ ಚುನಾವಣಾ ಪ್ರಚಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada