ಮೂರು ವಾರಗಳ ಜೈಲು ವಾಸದ ನಂತರ ಆರ್ಯನ್ ಖಾನ್ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಕ್ರೂಸ್ ಶಿಪ್ ಪಾರ್ಟಿಯ ಮೇಲೆ ದಾಳಿ ನಡೆಸಿದ ದಿನದಿಂದ ಅಕ್ಟೋಬರ್ 3 ರಿಂದ ಆರ್ಯನ್ ಖಾನ್ ಬಂಧನದಲ್ಲಿದ್ದರು.
ಅಕ್ಟೋಬರ್ 8 ರಿಂದ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್ ಅವರಿಗೆ ಈ ಹಿಂದೆ ಎರಡು ಬಾರಿ ಕೊರ್ಟ್ ಜಾಮೀನು ನಿರಾಕರಿಸಲಾಗಿತ್ತು.
ಆತನಲ್ಲಿ ಯಾವುದೇ ಮಾದಕ ದ್ರವ್ಯ ಪತ್ತೆಯಾಗಿಲ್ಲ ಎಂದು ಅವರ ವಕೀಲರು ಪದೇ ಪದೇ ವಾದಿಸಿದ್ದರು.
ಆದಾಗ್ಯೂ, ಎನ್ಸಿಬಿ ಅವರು ಆರ್ಯನ್ ಪಿತೂರಿಯ ಭಾಗವಾಗಿದ್ದರು ಮತ್ತು ಅವರ ವಾಟ್ಸಾಪ್ ಚಾಟ್ಗಳು ಅಕ್ರಮ ಡ್ರಗ್ ದಂಧೆಯಲ್ಲಿ ತೊಡಗಿಸಿಕೊಂಡಿರುವ ದಾಖಲೆಗಳು ಸಿಕ್ಕಿವೆ ಎಂದು ವಾದಿಸಿದ್ದರು. ವಾದ ವಿವಾದ ಎಲ್ಲಾ ಗಮನಿಸಿದ ಕೊರ್ಟ್ ಇಂದು ಆರ್ಯನ್ ಖಾನ್ಗೆ ಜಾಮೀನು ನೀಡಿದೆ.
ಆರ್ಯನ್ ಖಾನ್ ಅವರ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಮಾಡೆಲ್ ಮುನ್ಮುಮ್ ಧಮೇಚಾ ಅವರಿಗೂ ಜಾಮೀನು ನೀಡಲಾಗಿದೆ.
ಈ ಪ್ರಕರಣದಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬ ಯಾವುದೇ ಪುರಾವೆಗಳಿಲ್ಲದ ಕಾರಣ ಆರ್ಯನ್ ಖಾನ್ ಅವರ ಬಂಧನ ಮತ್ತು ಜಾಮೀನು ನಿರಾಕರಣೆಯು ಎಷ್ಟರ ಮಟ್ಟಗೆ ಸರಿ ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು.