
ಅರವಿಂದ್ ಕೇಜ್ರಿವಾಲ್ ಹತ್ತು ವರುಷಗಳ ಹಿಂದೆ ಶೀಲಾ ದೀಕ್ಷಿತ್ ವಿರುದ್ಧ ಭೃಷ್ಟಾಚಾರದ ಆರೋಪಗಳನ್ನು ಹೊರಿಸಿ, ತಾನು ಅಧಿಕಾರಕ್ಕೇರಿದ್ದರು. ಇವತ್ತು ಆಪ್ ಹಾಗೂ ಕೇಜ್ರಿವಾಲ್ ಸೋಲಿಗೆ ಮತ್ತದೇ ಭೃಷ್ಟಾಚಾರದ ಆರೋಪಗಳೇ ಪ್ರಮುಖ ಕಾರಣ. ಕೇಜ್ರಿವಾಲ್ ತಾನೇ ಅರೆದ ಮದ್ದಿಗೆ ಬಲಿಯಾಗಿದ್ದಾರೆ.
ಅಂದು ಕೇಜ್ರಿವಾಲ್ ಶೀಲಾ ದೀಕ್ಷಿತ್ ಹಾಗೂ ಕಾಂಗ್ರೇಸ್ ಸರ್ಕಾರದ ವಿರುದ್ಧ ಮಾಡಿದ ಒಂದೇ ಒಂದು ಆರೋಪನೂ ಸಾಬೀತಾಗಲಿಲ್ಲ, ಯಾವುದೇ ಕಾಂಗ್ರೇಸಿಗನೂ ಜೈಲಿಗೋಗಲಿಲ್ಲ. ಆದರೆ ತಾನು ಭೃಷ್ಟಾಚಾರ ವಿರುದ್ಧ, ಮಿಸ್ಟರ್ ಕ್ಲೀನ್ ಎಂದು ಎದೆತಟ್ಟಿ ಹೇಳುತ್ತಿದ್ದ ಕೇಜ್ರಿವಾಲರೇ ಭೃಷ್ಟಾಚಾರದ ಆರೋಪದಡಿಯಲ್ಲಿ ಜೈಲಿಗೂ ಹೋಗಿ, ಅಧಿಕಾರವನ್ನೂ ಕಳೆದುಕೊಂಡರು. ಇವತ್ತು ಶೀಲಾ ದೀಕ್ಷಿತ್ ಅವರು ಎಲ್ಲಿದ್ದರೂ ಅಲ್ಲಿಂದಲೇ ಮುಸು ನಗುತ್ತಿರಬಹುದು. ಹರ್ಯಾಣದಲ್ಲಿ ಕೇಜ್ರಿವಾಲ್ ಒಂದೇ ಒಂದು ಸೀಟು ಗೆಲ್ಲದಿದ್ದರೂ ಹೇಗೆ ಕಾಂಗ್ರೇಸಿನ ಸೋಲಿಗೆ ಕಾರಣವಾಗಿದ್ದರೋ, ಅದೇ ರೀತಿ ಇವತ್ತು ದೆಹಲಿಯಲ್ಲಿ ಕಾಂಗ್ರೇಸ್ ಒಂದೇ ಒಂದು ಸೀಟು ಗೆಲ್ಲದಿದ್ದರೂ, ಆಪ್ ಪಕ್ಷದ ಸೋಲಿಗೆ ಕಾರಣವಾಗಿದೆ. ಅಗೈನ್ ಈ ವಿಷಯದಲ್ಲೂ ಕೇಜ್ರಿವಾಲ್ ತಾವೇ ಅರೆದ ಮದ್ದಿಗೆ ಬಲಿಯಾಗಿದ್ದಾರಷ್ಟೆ.

ಆದರೆ ಹರ್ಯಾಣದಲ್ಲಿ ಕಾಂಗ್ರೇಸ್ ಸೋಲಿಗೆ ಕಾಂಗ್ರೇಸಿನ ಅಹಂಕಾರ, ಉದಾಸೀನ ಇತ್ಯಾದಿಗಳು ಕಾರಣವೇ ಹೊರತು ಆಪ್ ಆಲ್ಲ ಎಂದು ಪುಂಖಾನುಪುಂಖ ಬರೆದುಕೊಂಡಿದ್ದ ನಮ್ಮ ಮಧ್ಯದ ಭಯಂಕರ ಪಂಡಿತರು, ಅತೀ ಭಯಂಕರ ಜಾತಿವಾದಿಗಳು, ಇವತ್ತು ಆಪ್ ಸೋಲಿಗೆ ಕಾಂಗ್ರೇಸ್ ಕಾರಣವೆನ್ನುತ್ತಿರುವುದು ಚೋದ್ಯ. ಇವತ್ತು ಕೇಜ್ರಿವಾಲರ ಮೃದು ಹಿಂದೂತ್ವದ ಬಗ್ಗೆ ಇವರಿಗೆ ಬರೆಯಲು ಕೈ ಮುಂದಕ್ಕೋಗುತ್ತಿಲ್ಲ. 25% ಕ್ಕಿಂತಾ ಹೆಚ್ಚು ಮುಸ್ಲೀಮ್ ಮತದಾರರಿರುವ ಕ್ಷೇತ್ರಗಳಲ್ಲಿ ಆಪ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ 61%+ ಮತ ಗಳಿಸಿದ್ದರೆ, ಈ ಬಾರಿ ಗಳಿಸಿರುವುದು 51% ಮಾತ್ರ. ಅಂದರೆ ಸುಮಾರು 11% ಮತಗಳಿಕೆ ಇಲ್ಲಿ ಕಡಿಮೆಯಾಗಿದೆ. ಮುಸ್ಲೀಮ್ ಮತದಾರರ ಪ್ರಮಾಣ 10%-25% ಇರುವ ಕ್ಷೇತ್ರಗಳಲ್ಲೂ ಆಪ್ ಈ ಬಾರಿ 7%+ ಕಡಿಮೆ ವೋಟ್ ಗಳಿಸಿದೆ. ಈ ಟ್ರೆಂಡ್ ಯಾಕೆಂದು ಹೇಳಬೇಕಾಗಿಲ್ಲ.ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಇತರೆ ಪಕ್ಷಗಳನ್ನು ಹೇಗೆ ಮಣಿಸಬೇಕೆಂಬ ಕಲೆ ಸಿದ್ಧಿಸಿದೆ..ಅವರಿಬ್ಬರ ಜಗಳ ಎಲ್ಲರಿಗೂ ಕಾಣ್ಸುತ್ತೆ ಆದ್ರೆ ಒಳ-ಒಪ್ಪಂದ ಯಾರಿಗೂ ಕಾಣ್ಸಲ್ಲ..ಈಗ ಡೆಲ್ಲಿ ಲಿ ಕಾಣ್ಸಿದೆ ನೋಡಿ….ಈ ಮೊದಲು ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಹದಿನೇಳು ಶಾಸಕರನ್ನು ಬಿಜೆಪಿಗೆ ಕಳುಹಿಸಿ ಜೆಡಿಎಸ್+ಕಾಂಗ್ರೆಸ್+ಬಿಎಸ್ಪಿ ಸರ್ಕಾರವನ್ನು ಕೆಡವಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರಲಿಲ್ಲವೆ…! ಇಂತಹ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.
