• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಆರ್ಟಿಕಲ್ 370 ಮತ್ತು ಸರದಾರ್ ಪಟೇಲ್

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
March 18, 2022
in ಅಭಿಮತ
0
ಆರ್ಟಿಕಲ್ 370 ಮತ್ತು ಸರದಾರ್ ಪಟೇಲ್
Share on WhatsAppShare on FacebookShare on Telegram

ಕಾಶ್ಮೀರ ಫೈಲ್ಸ್ ಎನ್ನುವ ಅಪಪ್ರಚಾರದ ಕಥಾವಸ್ತು ಹೊಂದಿರುವ ಚಲನ ಚಿತ್ರ ಮಾಡುತ್ತಿರುವ ಗದ್ದಲದ ನಡುವೆ ಈ ಇಡೀ ಘಟನೆಯ ದೊಡ್ಡ ಪಾತ್ರಧಾರಿ ಎಲ್‌ಕೆ ಅಡ್ವಾಣಿ ಕಾಶ್ಮೀರ ವಿಷಯದ ಬಗ್ಗೆ ಏನು ಯೋಚಿಸುತ್ತಿರಬಹುದು ಎಂದು ಯೋಚಿಸಲಾರಂಭಿಸಿದೆ. ಅಡ್ವಾಣಿಯವರು ತಮ್ಮ ಆತ್ಮಕಥೆಯಲ್ಲಿ ಕಾಶ್ಮೀರದ ಬಗ್ಗೆ ಬರೆದಿರುವುದಕ್ಕೂ ಹಾಗು ಇಂದು ಬಿಜೆಪಿ ಮಾಡುತ್ತಿರುವ ಅಪಪ್ರಚಾರಕ್ಕೂ ತಾಳೆಯಾಗುವುದಿಲ್ಲ ˌ ಅಷ್ಟೇ ಅಲ್ಲದೆ ಅಡ್ವಾಣಿ ಅನಿಸಿಕೆ ಸಂಪೂರ್ಣ ತದ್ವಿರುದ್ದವಾಗಿದೆ.

ADVERTISEMENT

370 ನೇ ವಿಧಿಯನ್ನು ತೆಗೆದುಹಾಕುವಾಗ, ಸಂಸತ್ತಿನಲ್ಲಿ ಬಿಜೆಪಿ ಸರ್ಕಾರದ ಮಂತ್ರಿಗಳು ಇದಕ್ಕಾಗಿ ಆಗಿನ ಪ್ರಧಾನಿ ಪಂಡಿತ್ ನೆಹರು ಅವರನ್ನು ಸಾಮೂಹಿಕವಾಗಿ ಹೊಣೆಗಾರರನ್ನಾಗಿ ಬಿಂಬಿಸುವ ಪ್ರಯತ್ನ ಮಾಡಿದರು. ಆದರೆ ಅಂದಿನ ಸಂವಿಧಾನ ಸಭೆಯಲ್ಲಿ 370ನೇ ವಿಧಿ ಅಂಗೀಕಾರವಾದ ದಿನ ಪಂಡಿತ್ ನೆಹರೂ ವಿದೇಶದಲ್ಲಿದ್ದರು ಎಂದು ಅಡ್ವಾಣಿ ತಮ್ಮ ಆತ್ಮಕಥನ ‘ಮೈ ಕಂಟ್ರಿ ಮೈ ಲೈಫ್’ನಲ್ಲಿ ಬರೆದುಕೊಂಡಿದ್ದಾರೆ.

ಸಂಪೂರ್ಣ ಕಾಂಗ್ರೆಸ್ ಪಕ್ಷವೇ 370ನೇ ವಿಧಿಯ ವಿರುದ್ಧವಿತ್ತು ಎಂದು ಅಡ್ವಾಣಿಯವರು ಈ ಇಡೀ ಬೆಳವಣಿಗೆಯ ಕುರಿತು ಸುದೀರ್ಘ ವಿವರಣೆ ನೀಡಿದ್ದಾರೆ. ಈ ವಿಷಯ ಚರ್ಚಿಸಲು ಸರ್ದಾರ್ ಪಟೇಲ್ ಕಾಂಗ್ರೆಸ್ ನಾಯಕರ ಸಭೆ ಕರೆದಿರುತ್ತಾರೆ. ಈ ವೇಳೆ ಸಭೆಯಲ್ಲಿ ಭಾರೀ ಗದ್ದಲ ಉಂಟಾಗುತ್ತದೆ. ಮೌಲಾನಾ ಆಜಾದ್ ಸೇರಿದಂತೆ ಎಲ್ಲಾ ಕಾಂಗ್ರೆಸ್ಸಿಗರಿಗೆ 370 ನೇ ವಿಧಿಯ ಬಗ್ಗೆ ಮನವರಿಕೆ ಮಾಡಲು ಪಟೇಲರಿಗೆ ಸಾಧ್ಯವಾಗಲಿಲ್ಲ.

ಅಂತಿಮವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 370 ನೇ ವಿಧಿಯ ಪ್ರಾಯೋಗಿಕ ಅಂಶ ಮತ್ತು ಅಂತರರಾಷ್ಟ್ರೀಯ ಸಂಕೀರ್ಣತೆಗಳನ್ನು ವಿವರಿಸುತ್ತಾರೆ. ಅಂತಿಮವಾಗಿ ಕಾಂಗ್ರೆಸ್ ಪಕ್ಷವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಇಚ್ಛೆಗೆ ಮಣಿಯುತ್ತದೆ ಮತ್ತು 370 ನೇ ವಿಧಿಯನ್ನು ಸಂವಿಧಾನ ಸಭೆಯಲ್ಲಿ ಪರಿಚಯಿಸಿದಾಗ ಬಹುತೇಕ ಅದು ಚರ್ಚೆಯಿಲ್ಲದೆ ಅಂಗೀಕರಿಸಲಾಗುತ್ತದೆ.

ಸರ್ದಾರ್ ಪಟೇಲ ಅವರು ನೆಹರೂ ಅನುಪಸ್ಥಿತಿಯಲ್ಲಿ ಅದನ್ನು ಏಕೆ ಬೆಂಬಲಿಸಿದರು ಎನ್ನುವುದು ಇಂದಿಗೂ ನಿಘೂಡವಾಗಿದೆ ಎಂದು ಅಡ್ವಾಣಿ ಬರೆದಿದ್ದಾರೆ. ನಂತರ ಸರ್ದಾರ್ ಪಟೇಲ್ ಅವರ ಆಪ್ತ ಕಾರ್ಯದರ್ಶಿ ವಿ ಶಂಕರ್ ಅವರು ಆರ್ಟಿಕಲ್ 370 ಅನ್ನು ಸರ್ದಾರ್ ಪಟೇಲ್ ಅವರ ಸಾಧನೆ ಎಂದು ಬಣ್ಣಿಸಿದ ಕುರಿತು ಕೂಡ ಅಡ್ವಾಣಿಯವರು ತಮ್ಮ ಆತ್ಮಕತೆಯಲ್ಲಿ ಬರೆದಿದ್ದಾರೆ.

Tags: BJPCongress PartyCovid 19ಆರ್ಟಿಕಲ್ 370 ‌ಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿಸರದಾರ್ ಪಟೇಲ್
Previous Post

ಮಂಗಳೂರು ಏರ್‌ಪೋರ್ಟ್ ಬಾಂಬ್ ಪತ್ತೆ ಪ್ರಕರಣ : ಮನೆಯಲ್ಲಿಯೇ ಬಾಂಬ್ ತಯಾರಿಸಿದ್ದ ಆದಿತ್ಯ ರಾವ್

Next Post

ಶಾಲಾ ಪಠ್ಯ ಪುಸ್ತಕದಲ್ಲಿ ಅಪ್ಪುವಿನ ಜೀವನ ಚರಿತ್ರೆಗೆ ಆಗ್ರಹ!

Related Posts

ಸುಡು ವಾಸ್ತವಗಳ ನಡುವೆ ಉತ್ಪಾದಿತ ನಿರೂಪಣೆಗಳು
ಅಂಕಣ

ಸುಡು ವಾಸ್ತವಗಳ ನಡುವೆ ಉತ್ಪಾದಿತ ನಿರೂಪಣೆಗಳು

by ಪ್ರತಿಧ್ವನಿ
July 25, 2026
0

ವಿಶೇಷ ಲೇಖನ : ನಾ ದಿವಾಕರ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಯುವಜನರ ಪ್ರತಿಭಟನೆಗಳು ತಮ್ಮ ಅಂತಿಮ ಗುರಿ ತಲುಪಲು ಸಾಧ್ಯವೇ ? ಪ್ರತಿಯೊಂದು ಜನಾಂದೋಲನದ...

Read moreDetails
ಅಹಂಕಾರದ ಪರಾಕಾಷ್ಠೆ : ಹೋರಾಟದ ನಿಷ್ಠೆ ; CJP ದೇಶದಲ್ಲಿ ಬದಲಾವಣೆಯ ಮುನ್ಸೂಚನೆಯೇ..?

ಅಹಂಕಾರದ ಪರಾಕಾಷ್ಠೆ : ಹೋರಾಟದ ನಿಷ್ಠೆ ; CJP ದೇಶದಲ್ಲಿ ಬದಲಾವಣೆಯ ಮುನ್ಸೂಚನೆಯೇ..?

July 21, 2026
ಅರಾಜಕ ಸಮಾಜದ ಅನಾಗರಿಕ  ಮನಸ್ಥಿತಿಗಳು

ಅರಾಜಕ ಸಮಾಜದ ಅನಾಗರಿಕ ಮನಸ್ಥಿತಿಗಳು

June 29, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
Next Post
ಶಾಲಾ ಪಠ್ಯ ಪುಸ್ತಕದಲ್ಲಿ ಅಪ್ಪುವಿನ ಜೀವನ ಚರಿತ್ರೆಗೆ ಆಗ್ರಹ!

ಶಾಲಾ ಪಠ್ಯ ಪುಸ್ತಕದಲ್ಲಿ ಅಪ್ಪುವಿನ ಜೀವನ ಚರಿತ್ರೆಗೆ ಆಗ್ರಹ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada