ಲೋಕಸಭೆ ಚುನಾವಣೆ ರಾಜ್ಯ ಕಾಂಗ್ರೇಸ್ ಸರ್ಕಾರದ (congress govt.) ಪತನಕ್ಕೆ ನಾಂದಿ ಹಾಡುತ್ತಾ? ಇಂಥದ್ದೊಂದು ಗೊಂದಲ ಸೃಷ್ಟಿಸೋದಕ್ಕೆ ವಿರೋಧ ಪಕ್ಷಗಳು ಮುಂದಾದ ಹಾಗಿದೆ.ರಾಜ್ಯದಲ್ಲಿ ಸಿದ್ದರಾಮಯ್ಯ (cm siddaramaiah) ನೇತೃತ್ವದ ಸರ್ಕಾರ ಸದ್ಯ 136 ಸಂಖ್ಯಾಬಲದೊಂದಿಗೆ ಸಧೃಢವಾಗಿದೆ. ಆದ್ರೆ ಮೈತ್ರಿ ನಾಯಕರ ಹೇಳಿಕೆಗಳು ಬೇರೆಯದ್ದೇ ಸೂಚನೆ ನೀಡುತ್ತಿರುವಂತಿದೆ.
ಈ ಸಂಶಯಕ್ಕೆ ಕಾರಣವಾಗಿರೋದು ಪದೇ ಪದೆ ಸರ್ಕಾರ ಪತನದ ಬಗ್ಗೆ ವಿಪಕ್ಷ ನಾಯಕರು (opposition leaders) ಒಬ್ಬರಾದ ನಂತರ ಮತ್ತೊಬ್ಬರು ಹೇಳಿಕೆಗಳನ್ನ ನೀಡುತ್ತಿರುವುದು. ಬಿ.ಎಸ್ .ಯಡಿರೂಪ್ಪನವರಿಂದ (yediyurappa) ಹೆಚ್.ಡಿ ದೇವೇಗೌಡರ (H.D.Devegowda) ವರೆಗೂ ನಾಯಕರುಗಳು ಇಂಥ ಹೇಳಿಕೆಗಳನ್ನ ಕೊಟ್ಟಿದ್ದಾರೆ. ಇದೇನು ಚುನಾವಣಾ ತಂತ್ರಗಾರಿಕೆನಾ ಅಥವಾ ನಿಜಕ್ಕೂ ಅಂಥದ್ದೊಂದು ಸನ್ನಿವೇಶ ರಾಜ್ಯ ರಾಜಕಾರಣದಲ್ಲಿ ಸೃಷ್ಟಿಯಾಗಿದ್ಯಾ ಎಂಬ ಗೊಂದಲ ಎದುರಾಗಿದೆ.
ಮೊದಲಿಗೆ ಈ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿ (kumaraswamy) ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದು ಹೇಳಿ ಅರಿ ಮೂಡಿಸಿದ್ದರು. ಅಬ್ಬಬ್ಬಾ ಅಂದ್ರೆ ಡಿಸೆಂಬರ್ (December) ತನಕ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತೆ ಅಂತಾ ಭವಿಷ್ಯ ನುಡಿದಿದ್ರು. ಬಳಿಕ ಬಿಎಸ್‌ವೈ ಕೂಡ ವೇದಿಕೆಯೊಂದರಲ್ಲಿ ಇದೇ ಹೇಲಿಕೆಯನ್ನ ಪುನರುಚ್ಚರಿಸಿದ್ರು. ಅದೇ ಹಾದಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇದೀಗ ಸ್ವತಃ ದೇವೇಗೌಡರು ಇಂಥ ಹೇಳಿಕೆ ಕೊಟ್ಟಿರೋದು, ಲೋಕ ಸಮರದ ನಂತರ ಬಾರೀ ಬೆಳವಣಿಗೆಯ ಸೂನೆ ಸಿಕ್ಕಂತಿದೆ.