ಬೆಂಗಳೂರಿನಲ್ಲಿರುವ ಫ್ಲೈ ಓವರ್‌ಗಲಕು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಸದ್ಯದ್ದು. ಸುಮ್ಮನಹಳ್ಳಿ ಮೇಲ್ ಸೇತುವೆ ರೀತಿ ಬೇರೆ ಫ್ಲೈ ಓವರ್ ಸಮಸ್ಯೆ ಇದೆಯಾ? ಈ ಕುರಿತು ಬಿಬಿಎಂಪಿ ಖಾಸಗಿ ಕಂಪನಿ ಮೂಲಕ ಆಡಿಟ್ ಮಾಡಿಸಿದೆ. ಈ ಆಡಿಡ್ ನಲ್ಲಿ ನಗರದ ಎರಡು ಪ್ರಮುಖ ಮೇಲ್ಸೇತುವೆಗಳಲ್ಲಿ ದೋಷ ಕಂಡು ಬಂದಿದೆ. ಹೀಗಾಗಿ ಈ ಬಗ್ಗೆ ಪರಿಶೀಲಿಸಿ ದುರಸ್ತಿ ಮಾಡಲು ಪಾಲಿಕೆ ಮುಂದಾಗಿದೆ.
ಬೆಂಗಳೂರಿನ 42 fly over ನಲ್ಲಿ ಎರಡು ಮೇಲ್ಸೇತುವೆ ಸೇಫಲ್ಲ.!!
ಬೆಂಗಳೂರಿನ ಫ್ಲೈಓವರ್‌ಗಳ ಸುರಕ್ಷತೆ ಬಗ್ಗೆ ಪದೇ ಪದೆ ದೂರು ಕೇಳಿಬರುತ್ತಿದೆ. ಸುಮ್ಮನಹಳ್ಳಿ ಮೇಲ್ ಸೇತುವೆ ಸಮಸ್ಯೆ ಕಂಡುಬಂದ ಹಿನ್ನೆಲೆ ವಾಹನ ಸವಾರರಿಗೆ ಆತಂಕ ಹೆಚ್ಚು ಮಾಡಿದೆ. ಈ ಕಾರಣಕ್ಕೆ ಬಿಬಿಎಂಪಿ ಅವುಗಳ ಸದೃಢತೆ ಪರೀಕ್ಷೆಗೆ ಇನ್ಫ್ರಾ ಸಪೋರ್ಟ್ ಎಂಬ ಸಂಸ್ಥೆಯನ್ನು ನೇಮಿಸಿದೆ. ಈ ಸಂಸ್ಥೆಯು ನಗರದ 42 ಫ್ಲೈಓವರ್‌ಗಳ ಪೈಕಿ 25 ಫ್ಲೈಓವರ್‌ಗಳ ಸದೃಢತೆ ಪರೀಕ್ಷೆ ನಡೆಸಿ ಪಾಲಿಕೆಗೆ ಅಂತಿಮ ವರದಿ ಸಲ್ಲಿಸಿದೆ. ಅದರಲ್ಲಿ ಈ ಮೂರು ಫ್ಲೈಓವರ್‌ನಲ್ಲಿ ದೋಷವಿರುವುದು ದೃಢಪಟ್ಟಿದೆ. ಹೊರ ವರ್ತುಲ ರಸ್ತೆಯಲ್ಲಿರುವ ಸುಮ್ಮನಹಳ್ಳಿ ಫ್ಲೈಓವರ್‌ನ ಸ್ಲ್ಯಾಬ್‌ಗಳಲ್ಲಿ ವೈಟ್ ಪ್ಯಾಚಸ್ (ನೆಲ ಹಾಸು ಕಾಂಕ್ರಿಟ್‌ನಲ್ಲಿ ದೋಷ) ಇವೆ. ಇಷ್ಟು ಮಾತ್ರವಲ್ಲ ಮೈಸೂರು ರಸ್ತೆಯ ಸಿರ್ಸಿ ಫ್ಲೈಓವರ್ ನಲ್ಲಿ ಬಿರುಕುಗಳಿವೆ ಎಂಬ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಮೈಸೂರು ರಸ್ತೆಯಲ್ಲಿರುವ ಸಿರಸಿ ಸರ್ಕಲ್ ಫ್ಲೈ ಓವರ್ ನಲ್ಲೂ ಸಮಸ್ಯೆ.!!
ಮೈಸೂರು ರಸ್ತೆ ಮೇಲ್ ಸೇತುವೆ ಬೆಂಗಳೂರು ನಗರದ ಮಧ್ಯ ಭಾಗದಲ್ಲಿರೋ ಅತಿ ಉದ್ದದ ಮೇಲ್ಸೇತುವೆ. ದಿನವೊಂದಕ್ಕೆ ಲಕ್ಷಾಂತರ ಮಂದಿ ಈ ಫ್ಲೈ ಓವರ್ ಮೇಲೆ ಪ್ರಯಾಣಿಸುತ್ತಾರೆ. ಕೃಷ್ಣರಾಜ ಮಾರುಕಟ್ಟೆಯಿಂದ ಸಿರ್ಸಿ ಸರ್ಕಲ್ ವರೆಗೆ ಇರುವ ಈ ಫ್ಲೈಓವರ್, ಈ ಭಾಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅತ್ಯಗತ್ಯ. ಆದರೆ, ಈ ಫ್ಲೈಓವರ್ ನಿಜಕ್ಕೂ ಸಂಚಾರ ಯೋಗ್ಯವೇ? ಪ್ರಯಾಣಿಕರ ಜೀವ ಸುರಕ್ಷಿತವೇ? ಎಂಬ ಪ್ರಶ್ನೆ ಇದೀಗ ಉದ್ಬವಿಸಿದೆ. 26 ವರ್ಷದ ಹಿಂದೆ ಬಿಬಿಎಂಪಿಯು 2.86 ಕಿ.ಮೀ ಉದ್ದದ ಫ್ಲೈಓವರ್ ನಿರ್ಮಿಸಿದ್ದು, ಕಂಬಗಳು, ಗರ್ಡರ್ ಹಾಗೂ ಕಾಲಂಗಳಲ್ಲಿ ಬಿರುಕುಗಳು ಗಂಭೀರವಾದ ಕಾಣಿಸಿಕೊಂಡಿದೆ. ಇದನ್ನು ಸರಿಪಡಿಸಬೇಕೆಂದು ಆಡಿಟ್ ರಿಪೋರ್ಟ್ ನಲ್ಲಿ ತಿಳಿಸಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಮತ್ತೊಂದು ವರದಿ ತರಿಸಿಕೊಂಡು ಫ್ಲೈ ಓವರ್ ಸದೃಢಗೊಳಿಸುವ ಕಾರ್ಯ ಮಾಡುತ್ತೇವೆ ಎನ್ನುತ್ತಾರೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್.
ಈಗಾಗಲೇ ಗೊರಗುಂಟೆಪಾಳ್ಯದಿಂದ ಬಿಇಎಲ್ ಸರ್ಕಲ್ ಕಡೆ ಸಾಗುವ ಮಾರ್ಗದಲ್ಲಿರುವ ಎಂಇಎಸ್ ರೈಲ್ವೆ ಫ್ಲೈಓವರ್ ಸಮಸ್ಯೆ ಬಗೆಹರಿಸಲಾಗಿದೆ. ಬೇರಿಂಗ್ ನಲ್ಲಿ ಕಾಣಿಸಿಕೊಂಡ ಬಿರುಕು ಮತ್ತು ಕಾಂಕ್ರಿಟ್ ಎಕ್ಸ್‌ಪೆನ್ಷನ್ ಜೋಡಣೆಯಲ್ಲಿ ದೋಷವನ್ನು ಸರಿಪಡಿಸಲಾಗಿದೆ. ಉಳಿದಂತೆ ಸಿರ್ಸಿ ಮತ್ತು ಸುಮ್ಮನಹಳ್ಳಿ ಫ್ಲೈಓವರ್‌ಗಳ ದುರಸ್ತಿ ಕೈಗೊಳ್ಳುವುದು ಬಾಕಿ ಇದೆ.