ಆತಂಕ ಎನ್ನುವುದು ಸಾಮಾನ್ಯ ಎಲ್ಲ ಜನರಲ್ಲೂ ಕಾಡುವ ಒಂದು ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ಇದು ಹೆಚ್ಚಾಗಿ ಕಾಣಿಸಿಕೊಳ್ಳುವುದು ಅಗಾಧವಾದ ಚಿಂತೆ ಹೆದರಿಕೆ ಮತ್ತು ಭಯದ ಭಾವನೆಗಳಿಂದ. ಆದರೆ ಅತಿಯಾದ ಆಂಕ್ಸೈಟಿ ಏನಿದೆ ನಮ್ಮ ದೈನಂದಿನ ಜೀವನ ಮತ್ತು ಸಂಬಂಧ ಒಟ್ಟಾರೆಯಾಗಿ ಹೇಳಬೇಕು ಅಂದ್ರೆ ಯೋಗ ಕ್ಷೇಮಕ್ಕೆ ಅಡ್ಡಿಯಾಗುತ್ತದೆ. ಹಾಗಾದ್ರೆ ಆತಂಕವನ್ನ ನಿವಾರಿಸಲು ಕೆಲವು ಮಾರ್ಗಗಳು ಇಲ್ಲಿವೆ.
ಪ್ರೊಫೆಷನಲ್ ಸಹಾಯ ಪಡೆಯಿರಿ
ಆತಂಕ ಅತಿಯಾದ ನಮ್ಮಲ್ಲಿ ಕೋಪ,ಸಿಟ್ಟು, ಬೇಜಾರು ಮೂಡ್ ಸ್ವಿಂಗ್ಸ್ ಜಗಳ ಎಲ್ಲವೂ ಕೂಡ ಕಾಡುತ್ತದೆ. ಇಂತಹ ಸಂದರ್ಭದಲ್ಲಿ ನಾವು ಸೈಕಿಯಾಟ್ರಿಸ್ಟನ್ನ ಸಂಪರ್ಕಿಸುವುದು ಒಳ್ಳೆಯದು ಅವರಿಂದ ನಮಗೆ ಒಳ್ಳೆಯ ಸಲಹೆ ಅಥವಾ ಮಾರ್ಗದರ್ಶನ ದೊರಕುತ್ತದೆ. ಆಂಕ್ಸೈಟಿ ಅತಿಯಾದ ನಮ್ಮಲ್ಲಿ ಕೋಪ ಸಿಕ್ತು, ಬೇಜಾರು ಮೂಡ್ ಸ್ವಿಂಗ್ಸ್. ಇದರಿಂದಾಗಿ ನಮ್ಮಲ್ಲಿರುವ ಆಂಕ್ಸೈಟಿ ಕಡಿಮೆಯಾಗುತ್ತದೆ.
ರಿಲ್ಯಾಕ್ಸೇಶನ್ ಟೆಕ್ನಿಕ್ಸ್
ಆತಂಕದ ಭಾವನೆಯಿಂದ ಹೊರಬರಲು ನಾವು ಒಂದಿಷ್ಟು ವಿಶ್ರಾಂತಿ ಟೆಕ್ನಿಕ್ಸ್ ಗಳನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ ಅದರಲ್ಲಿ ಡೀಪ್ ಬ್ರೀತಿಂಗ್ ಎಕ್ಸರ್ಸೈಜ್, ಮಜಲ್ ಎಕ್ಸರ್ಸೈಜ್ ಮೆಡಿಟೇಶನ್ ಹಾಗೂ ಯೋಗವನ್ನ ಮಾಡುವುದು ಉತ್ತಮ.
ಸೆಲ್ಫ್ ಕೇರ್
ನಾವು ನಮ್ಮ ಬಗ್ಗೆ ಕಾಳಜಿಯನ್ನ ವಹಿಸಿದಾಗ ಅದರಲ್ಲೂ ಕೂಡ ಪ್ರತಿದಿನ ಕೆಲವೊಂದು ಆಕ್ಟಿವಿಟೀಸ್ ಅಲ್ಲಿ ಭಾಗಿಯಾಗುವುದು ,ಚೆನ್ನಾಗಿ ನಿದ್ದೆ ಮಾಡುವುದು ,ಹೆಲ್ದಿ ಆಹಾರವನ್ನ ಸೇವಿಸುವುದು ಹಾಗೂ ನಮ್ಮ ಬ್ಯೂಟಿ ಅಥವಾ ಸೆಲ್ಫ್ ಕೇರ್ ಮಾಡಿಕೊಳ್ಳುವುದರಿಂದ ಆತಂಕದಿಂದ ಹೊರಬರಬಹುದು.
ಫ್ಯಾಮಿಲಿ
ಕೋಪ ಭಯ ಇವೆಲ್ಲವೂ ಕಾಡ್ತಾ ಇದ್ದಾಗ ನಾವು ನಮ್ಮ ಸ್ನೇಹಿತರ ಜೊತೆ ಅಥವಾ ಕುಟುಂಬದವರಾ ಜೊತೆ ಹೆಚ್ಚಾಗಿ ಕಾಲ ಕಳೆಯುವುದು ಉತ್ತಮ.
ನೆಗೆಟಿವ್ ಥಾಟ್ಸ್
ಬೇಡದ ಅಂದ್ರೆ ಮನಸ್ಸಿಗೆ ನೋವು ಕೊಡುವಂತಹ ಅಥವಾ ಆತಂಕವನ್ನ ಹೆಚ್ಚಿಸುವಂತಹ ವಿಚಾರದಿಂದ ಸ್ನೇಹಿತರಿಂದ ಅಥವಾ ಬಂದು ಬಳಗದಿಂದ ಈ ಒಂದು ಸಂದರ್ಭದಲ್ಲಿ ದೂರವಿರುವುದು ಉತ್ತಮ.