ಬೆಂಗಳೂರು: ಪತಿ ವಿರುದ್ಧ ವಿಚಿತ್ರ ವರ್ತನೆ ಆರೋಪ ಮಾಡಿದ್ದ ಪ್ರಕರಣದಲ್ಲಿ ಪತಿ & ಪತ್ನಿ ಆರೋಪ ಪ್ರತ್ಯಾರೋಪ ಜೋರಾಗಿದೆ. ಪತ್ನಿ ಮೇಘಾಶ್ರೀ ಮಾಡಿದ್ದ ಆರೋಪಕ್ಕೆ ಪ್ರತ್ಯಾರೋಪ ಮಾಡಿದ್ದ ಪತಿ ಮಂಜುನಾಥ್ ಗೆ ಪತ್ನಿ ಮತ್ತೆ ತಿರುಗೇಟು ನೀಡಿದ್ದಾಳೆ.

ನನಗೆ ಈ ಹಿಂದೆ ಎರಡೂ ಮದುವೆಯಾಗಿ ವಿಚ್ಚೇದನವಾಗಿದೆ. ಮೊದಲ ಪತಿ ಕುಟುಂಬದವರು ಕೆಲಸದವಳಂತೆ ನೋಡುತ್ತಿದ್ದರು. ಎರಡನೇ ಪತಿ ಸುಳ್ಳು ಹೇಳಿ ಮದುವೆಯಾಗಿದ್ದ. ಅದಕ್ಕೆ ಮಂಜುನಾಥನೇ ಎರಡನೇ ಪತಿಗೆ ಡಿವೋರ್ಸ್ ತೆಗೆದುಕೊಳ್ಳುವಂತೆ ಮಾಡಿದ್ದು, ಮಂಜುನಾಥ್ ಮದುವೆಯಾಗಲೆಂದು ಎರಡನೇ ಪತಿಗೆ ವಿಚ್ಚೇದನ ನೀಡಿದ್ದೆ. ಈ ಕಾರಣಗಳು ಮುಂಜುನಾಥ್ ಗೆ ಗೊತ್ತಿತ್ತು. ಆದರೂ ಈಗ ಆರೋಪ ಮಾಡ್ತಿದ್ದಾನೆ. ನನಗೆ ಆತ ಯಾವುದೇ ಹಣ ಕೊಟ್ಟಿಲ್ಲ. ನಿಜ ಹೇಳಬೇಕು ಅಂದ್ರೆ ಇವನು ಪತಿಯಲ್ಲ. ವಿಕೃತ ಕಾಮಿ. ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದಿದ್ದಾಳೆ.

ಇತ್ತೀಚೆಗೆ ಪತಿ ಮಂಜುನಾಥ್ ಮೇಲೆ ಪತ್ನಿ ಮೇಘಾಶ್ರೀ ವಿಚಿತ್ರ ವರ್ತನೆ ಆರೋಪ ಮಾಡಿ, ಕೇಂದ್ರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ವಿರುದ್ಧ ದೂರು ನೀಡಿದ್ದಳು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಂಜುನಾಥ್, ಮೇಘಾಶ್ರೀಗೆ ತಾನು ಮೂರನೇ ಪತಿಯಾಗಿದ್ದು ನಾಲ್ಕನೇ ಗಂಡ ಬೇಕಂತ ಈ ರೀತಿ ಆರೋಪ ಮಾಡಿದ್ದಾಳೆ. ಅಷ್ಟಲ್ಲದೇ ಶೋಕಿಗೆ ಗಂಡಂದಿರ ಹಣ ಬಳಸಿಕೊಂಡು ಹೀಗೆ ಮಾಡ್ತಿದ್ದಾಳೆ ಎಂದು ಆರೋಪ ಮಾಡಿದ್ದಾರೆ.

ಇನ್ನು ನನ್ನಿಂದ 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್, ಟ್ಯಾಬ್ ಪಡೆದಿದ್ದಾಳೆ. ಈಗಾಗಲೇ ಮೇಘಶ್ರೀ ಮೊದಲ ಗಂಡನ ವಿರುದ್ದ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದಾಳೆ. ಎರಡನೇ ಗಂಡನ ವಿರುದ್ದ ಕೂಡ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದು, ಇದೀಗ ನನಗನ ವಿರುದ್ದವೂ ದೂರು ನೀಡಿದ್ದಾಳೆ. ಮೇಘಶ್ರೀಯ ಅಸಲಿ ಮುಖವಾಡವನ್ನ ಪೊಲೀಸರ ಮುಂದೆ ಬಯಲು ಮಾಡ್ತೀನಿ. ಮದುವೆಗೆ ಎಂದು ದಾಖಲಾತಿ ಕೇಳಿದಾಗ ದಾಖಲೆಯನ್ನೂ ನೀಡಿಲ್ಲ. ಕೇವಲ ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡಿದ್ದಳು. ಹಾರ ಬದಲಿಸಿಕೊಂಡ ಬಳಿಕ 12 ಲಕ್ಷ ಹಣ ನೀಡಿ ಮನೆ ಲೀಸ್ ಗೆ ಕೊಡಿಸಿದ್ದೆ. ಮನೆಗೆ ಬಂದಾಗ ಬಟ್ಟೆ ಬದಲಿಸುವಾಗ ಕದ್ದು ಪೋಟೊ ತೆಗೆದಿದ್ದು, ತನಗೆ ರೌಡಿಶೀಟರ್ ಓರ್ವನಿಂದ ನಿಂದ ಧಮ್ಕಿ ಹಾಕಿಸಿದ್ದಾಳೆ ಎಂದು ಮಂಜುನಾಥ್ ಆರೋಪ ಮಾಡಿದ್ದರು.






