ಬೆಂಗಳೂರಿನಲ್ಲಿ (Bengaluru) ಮತ್ತೊಂದು ಗ್ಯಾಂಗ್ ರೇಪ್ (Gang rape) ನಡೆದಿದ್ದು, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಜನವರಿ 20ರ ತಡರಾತ್ರಿ ಒಂಟಿಯಾಗಿ ಬಸ್ಗಾಗಿ ಕಾಯುತ್ತಿದ್ದ ಮಹಿಳೆಯನ್ನ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ.
ಮಹಿಕೆಯೊಬ್ಬರು ತಮಿಳುನಾಡಿನಿಂದ (Tamil nadu) ಬೆಂಗಳೂರಿನ ಅಣ್ಣನ ಮನೆಗೆ ಬರ್ತಿದ್ದ ವೇಳೆ ಕೆ.ಆರ್ ಮಾರುಕಟ್ಟೆಯಲ್ಲಿ (KR market) ಯಲಹಂಕ ಬಸ್ಗಾಗಿ ಕಾಯ್ತಿದ್ದರು. ಈ ವೇಳೆ ಬಸ್ಗಾಗಿ ಆರೋಪಿಗಳ ಬಳಿ ಮಹಿಳೆ ವಿಚಾರಿಸಿದ್ದಾರೆ. ಈ ವೇಳೆ ಬಸ್ ತೋರಿಸುತ್ತೇವೆಂದು ಗೋಡೌನ್ ಸ್ಟ್ರೀಟ್ಗೆ (Godown street) ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ.
ಈ ಆರೋಪಿಗಳು ಅತ್ಯಾಚಾರ ಬಳಿಕ ಮಹಿಳೆಯ ಬಳಿಯಿದ್ದ ಮೊಬೈಲ್,ಹಣ,ತಾಳಿ, ಚಿನ್ನ ಕದ್ದು ಪರಾರಿಯಾಗಿದ್ದಾರೆ. ಜನವರಿ ರಾತ್ರಿ 11:30ರ ಸುಮಾರಿಗೆ ಕೆ.ಆರ್ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ.
ಕೆ.ಆರ್ ಮಾರುಕಟ್ಟೆ ಠಾಣಾ ವ್ಯಾಪ್ತಿಯ ಗೋಡೌನ್ ಸ್ಟ್ರೀಟ್ನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆಯಿಂದ ಬೆಂಗಳೂರು ಕೇಂದ್ರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.ಪೊಲೀಸರು ಆರೋಪಿಗಳ ಪತ್ತೆಗಾಗಿ ಎರಡು ಪ್ರತ್ಯೇಕ ತಂಡ ರಚಿಸಿ ತನಿಖೆ ಆರಂಭಿಸಿದ್ದಾರೆ.