ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (narendra modi) ANI ಗೆ ನೀಡಿದ ಸಂದರ್ಶನ ಬಹಳ ಚರ್ಚೆಗೆ ಕಾರಣವಾಗಿದೆ. ಯಾವುದೇ ಮಾಧ್ಯಮಗಳಿಗೂ ಸಂದರ್ಶನ ನೀಡದ, ಪ್ರೆಸ್ ಮೀಟ್‌ಗಳನ್ನ (Pressmeet) ಮಾಡದ ನಮೋ ANI ಗೆ ಸಂದರ್ಶನ ನೀಡಿದ್ದಾರೆ. ಆದ್ರೆ ಈ ಸಂದರ್ಶನಗಳಲ್ಲಿ ಅವರಿಗೆ ಕೇಳಿದ ಪ್ರಶ್ನೆಗಳು ಮತ್ತು ಮೋದಿ ನೀಡಿದ ಉತ್ತರ ಎಲ್ಲವೂ ಸ್ಕ್ರಿಪ್ಟೆಡ್ (scripted) ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.
ಸ್ಮಿತಾ ಪ್ರಕಾಶ್ (smitha prakash) ಅವರೊಂದಿಗಿನ ಪಿಎಂ ಮೋದಿಯವರ ಎಎನ್‌ಐ (ANI) ಸಂದರ್ಶನದಲ್ಲಿ ದೇಶದ ಪ್ರಮುಖ ಸಮಸ್ಯೆಗಳು, ಜನೆ ಸಮಸ್ಯೆ, ಬಡತನ, ದೇಶದ ಭದ್ರತೆ, ತಮ್ಮ ಮೇಲಿನ ಆರೋಪ ಯಾವೊಂದು ವಿಚಾರಗಳ ಬಗ್ಗೆ ಇಲ್ಲಿ ಮೋದಿಯವರನ್ನ ಪ್ರಶ್ನೆ ಕೇಳಲಾಗಿಲ್ಲ. ಕೇವಲ ಬರೆದುಕೊಟ್ಟ ಪ್ರಶ್ನೆಯನ್ನ ಮಾತ್ರ ಕೇಳಲಾಗಿದೆ ಇದು ಬಹಳ ಹಾಸ್ಯಾಸ್ಪದ ! ಪ್ರಜಾಪಭುತ್ವದ (Democracy) ಅಣಕ ಮಾಡಿದಂತೆ ! ಎಂಬ ಟೀಕೆಗಳು ಕೇಳಿ ಬರ್ತಿವೆ. ಇದೊಂದು ಜನರ ಪ್ರಮುಖ ಸಮಸ್ಯೆಗಳ ಸ್ಕ್ರಿಪ್ಟ್ ಮತ್ತು ಅದರ ಅಪಹಾಸ್ಯವಾಗಿತ್ತು ಎಂಬ ಕಮೆಂಟ್‌ಗಳು ಕೇಳಿ ಬರ್ತಿವೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಎಕ್ಸ್ (X) ಖಾತೆದಾರರೊಬ್ಬರು ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ ಹಣದುಬ್ಬರದ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, ನಿರುದ್ಯೋಗದ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, COVID ಪರಿಣಾಮಗಳ ಕುರಿತು ಯಾವುದೇ ಪ್ರಶ್ನೆಗಳಿಲ್ಲ,ಮಹಿಳೆಯರ ಸುರಕ್ಷತೆಯ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, ರೈತರ ಬಗ್ಗೆ ಪ್ರಶ್ನೆ ಇಲ್ಲ,ಕಾರ್ಮಿಕರ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ.ಶಿಕ್ಷಣದ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ,ಮಣಿಪುರದ ಹೆಣ್ಣುಮಕ್ಕಳ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ,ಬ್ರಿಜ್ಯೂಷಣ್ ಸಿಂಗ್ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, ಜೆಪಿ ನಡ್ಡಾ ಅವರಿಂದ AIIMS ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, ಹಾಗಿದ್ರೆ ಈ ಸಂದರ್ಶನ ಇನ್ಯಾವ ಉದ್ದೇಶದಿಂದ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದು ಕೇವಲ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವುದು ಮತ್ತು ಭಾರತದ ಜನರ ಮುಂದೆ ನಕಲಿ ಸಂಖ್ಯೆಗಳನ್ನು ಹೇಳುವುದಕ್ಕೆ ಹೇಳಿ ಮಾಡಿಸಿಕೊಂಡ ಸಂದರ್ಶನ ಎಂಬಂತೆ ಭಾಸವಾಗ್ತಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಜೊತೆಗೆ ಮೋದಿಯವರ ಉತ್ತರಗಳಿಗೆ ನಿರೂಪಕಿ ಸ್ಮಿತಾ ಯಾವುದೇ ಮರು ಪ್ರಶ್ನೆ ಮಾಡಿಲ್ಲ, ಸುಳ್ಳನ್ನು ಪರಿಶೀಲಿಸಲಿಲ್ಲ ಮತ್ತು ಬಿಜೆಪಿ ಕಾರ್ಯಕರ್ತನಂತೆ ವರ್ತಿಸಿದ್ದಾರೆ ಅಂತ ಹಲವರು ಜರಿದಿದ್ದಾರೆ