ಆಂಧ್ರಪ್ರದೇಶದಲ್ಲಿ (AndraPradesh) ವಿಧಾನಸಭಾ ಹಾಗು ಲೋಕಸಭಾ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿರುವಾಗಲೇ ರಕ್ತ ರಾಜಕಾರಣ ಶುರುವಾಗಿದೆ. ಮೇ 13ರಂದು ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಭರ್ಜರಿ ಪ್ರಚಾರ ಯಾತ್ರೆ ನಡೆಯುತ್ತಿದೆ. ಮಗದೊಮ್ಮೆ ಅವಕಾಶ ಕೇಳಿಕೊಂಡು ಹಾಲಿ ಸಿಎಂ ಜಗನ್ಮೋಹನ್ ರೆಡ್ಡಿ (Jagan Mohan Readdy) ಸಿದ್ದಂ (Siddam) ಬಸ್ (Bus) ಯಾತ್ರೆ ನಡೆಸುತ್ತಿದ್ದಾರೆ. ಈ ವೇಳೆ ಸಿಎಂ ಜಗನ್ಮೋಹನ್ ರೆಡ್ಡಿ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
ವಿಜಯವಾಡದ ಮೇಮಂತದಲ್ಲಿ ನಡೆಯುತ್ತಿದ್ದ ಸಿದ್ಧಂ ಬಸ್ ಯಾತ್ರೆ ವೇಳೆ ಕಲ್ಲು ತೂರಾಟ ಮಾಡಲಾಗಿದೆ. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಹಣೆಯಿಂದ ರಕ್ತ ಸೋರ್ತಿದ್ದಂತೆ ಯಾತ್ರೆ ಮೊಟಕುಗೊಳಿಸಿ ಬಸ್ನಲ್ಲೇ ವೈದ್ಯರು ಚಿಕಿತ್ಸೆ ನೀಡಿದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ವಿಶ್ರಾಂತಿಗೆ ಸೂಚಿಸಿದರು ಬಸ್ ಯಾತ್ರೆ ಮುಂದುವರಿಸಿದ್ದಾರೆ ಸಿಎಂ ಜಗನ್ ಮೋಹನ್ ರೆಡ್ಡಿ. ಬಸ್ ಯಾತ್ರೆ ವೇಳೆ ಸಿಎಂ ಜಗನ್ ಮೋಹನ್ ಮೇಲೆ ಅಪರಿಚಿತ ಕಲ್ಲು ತೂರಾಟ ಮಾಡಿದ್ದಾನೆ.
ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಸಿಗುತ್ತಿರುವ ಭಾರೀ ಬೆಂಬಲ ಕಂಡು ದ್ವೇಷದಿಂದ ವಿಜಯವಾಡದಲ್ಲಿ (Vijayawada) ತೆಲುಗು ದೇಶಂ ಪಾರ್ಟಿ ಹೇಡಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಇಂದು ಅವರು ಎಸೆಯುವ ಕಲ್ಲುಗಳು ಮತಗಳಾಗಿ ಬದಲಾಗುತ್ತವೆ ಎಂದಿರುವ YSRCP, ಮೇ 13 ರಂದು ಫಲಿತಾಂಶ ಮೂಲಕ ತಿರುಗಿಸಿ ಕೊಡುತ್ತೇವೆ. ನೇರವಾಗಿ ಮುಖಾಮುಖಿ ಎದುರಿಸಿ, ಇಂಥಹ ರಾಜಕೀಯ ಏಕೆ..? ಎಂದು ವ್ಯಂಗ್ಯವಾಡಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi), ತಮಿಳುನಾಡಿ ಸಿಎಂ ಸ್ಟಾಲಿನ್ (Stalin), ಕೆ.ಟಿ ರಾಮ್ರಾವ್ K. T. Rama Rao) ಸೇರಿದಂತೆ ಜಗನ್ ಮೋಹನ್ ರೆಡ್ಡಿಗೆ ಕಲ್ಲೇಟು ಬಿದ್ದಿರುವುದನ್ನು ಖಂಡಿಸಿದ್ದಾರೆ. ಆದಷ್ಟು ಬೇಗ ಗುಣಮುಖರಾಗುವಂತೆ ಆಶಿಸಿದ್ದಾರೆ. ಚಂದ್ರಬಾಬು ನಾಯ್ಡು ನೇತೃತ್ವದ TDP ಭಾರೀ ಅಬ್ಬರ ಸೃಷ್ಟಿಸಿದ್ದು, ಜನರು ಜಗನ್ ರೆಡ್ಡಿ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ವಿರೋಧಿಗಳು ಹೇಳುತ್ತಿದ್ದಾರೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಟಿಡಿಪಿ ಈ ಬಾರಿ ಸರ್ಕಾರ ರಚಿಸುವ ಉಮ್ಮಸ್ಸಿನಲ್ಲಿದೆ.
ಕೃಷ್ಣಮಣಿ