• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಜೆಡಿಎಸ್​ ಜೊತೆಗೆ ಕೈ ಜೋಡಿಸಿದ್ರಾ ಸಚಿವ ಜಮೀರ್​ ಅಹ್ಮದ್​ ಖಾನ್​..

ಕೃಷ್ಣ ಮಣಿ by ಕೃಷ್ಣ ಮಣಿ
November 16, 2024
in Uncategorized, ಕರ್ನಾಟಕ, ರಾಜಕೀಯ
0
ಜೆಡಿಎಸ್​ ಜೊತೆಗೆ ಕೈ ಜೋಡಿಸಿದ್ರಾ ಸಚಿವ ಜಮೀರ್​ ಅಹ್ಮದ್​ ಖಾನ್​..
Share on WhatsAppShare on FacebookShare on Telegram
ADVERTISEMENT

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಸೋಲು ಒಪ್ಪಿಕೊಂಡಿದೆ. ಅದರಲ್ಲೂ ಜಮೀರ್​ ಮಾತಿನಿಂದಲೇ ಸೋಲು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಜಮೀರ್​ ಹೇಳಿಕೆ ಹಿಂದೆ ಯಾರಿದ್ದಾರೆ..? ಯಾವ ಉದ್ದೇಶಕ್ಕೆ ಜಮೀರ್​ ಅಹ್ಮದ್​ ಖಾನ್​ ಹೇಳಿದ್ರು..? ಯೋಗೇಶ್ವರ್​ ಸೋಲಿಸುವ ಉದ್ದೇಶ ಮುಂಚೆಯೇ ಇತ್ತಾ..? ಅನ್ನೋ ಬಗ್ಗೆಯೂ ಅನುಮಾನಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಜಮೀರ್​ ಬಳಗದಲ್ಲೇ ಇದ್ದ ಶ್ರೀರಂಗಪಟ್ಟಣ ಶಾಸಕ ರಮೇಶ್​ ಬಂಡಿಸಿದ್ದೇಗೌಡ, ಜಮೀರ್​ ಹೇಳಿಕೆ ಹಿಂದೆ ಕುಮಾರಸ್ವಾಮಿ ಇರಬಹುದು ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.

Rahul Gandhi: 56 ಇಂಚಿನ ಎದೆ, ಮನ್ ಕಿ ಬಾತ್,ಮೋದಿ ವಿರುದ್ಧ ರಾಹುಲ್‌ ಗಾಂಧಿ ಕಿಡಿ..! #narendramodi #bjp #land

ಕುಮಾರಸ್ವಾಮಿ ಹಾಗು ಜಮೀರ್​ ಅಹ್ಮದ್​ ಖಾನ್​ ಗಳಸ್ಯ ಕಂಟಸ್ಯ ಸ್ನೇಹಿತರು. ಈಗಲೂ ಜಮೀರ್​​ ಹಾಗು ಕುಮಾರಣ್ಣ ಚೆನ್ನಾಗಿದ್ದಾರೆ. ಈ ಹೇಳಿಕೆ ಕೊಡುವ ಹಿಂದೆ ಕುಮಾರಸ್ವಾಮಿಯೇ ಇರಬೇಕು ಎನ್ನುವ ಅನುಮಾನವನ್ನು ರಮೇಶ್​ ಬಂಡಿಸಿದ್ದೇಗೌಡ ಹೇಳಿದ್ದಾರೆ. ಅಂದರೆ ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಯಾಗಿದ್ದ ಸಿ.ಪಿ ಯೋಗೇಶ್ವರ್​ ಸೋಲಿಸಲು ಕಾಂಗ್ರೆಸ್​​ ನಾಯಕರೇ ಯೋಜನೆ ರೂಪಿಸಿದ್ರಾ..? ಅನ್ನೋ ಅನುಮಾನವನ್ನು ಈ ಹೇಳಿಕೆ ಹುಟ್ಟುಹಾಕಿದೆ. ಬಿಜೆಪಿಯಲ್ಲಿದ್ದ ಯೋಗೇಶ್ವರ್​​ ಜೆಡಿಎಸ್​ನಿಂದ ಟಿಕೆಟ್​ ಪಡೆದು ಗೆಲ್ಲುವ ಎಲ್ಲಾ ಸಾಧ್ಯತೆಗಳೂ ಇತ್ತು. ಆದರೆ ಕಾಂಗ್ರೆಸ್​​ನಿಂದ ಆಹ್ವಾನ ಕೊಟ್ಟು ಸೋಲಿಸಿದ್ರಾ..? ಅನ್ನೋ ಚರ್ಚೆಗಳು ನಡೆಯುತ್ತಿವೆ.

ಕರಿಯಾ ಕುಮಾರಸ್ವಾಮಿ ಎಂದು ಹೇಳು ಎಂದು ಸಚಿವ ಜಮೀರ್​ಗೆ ಕುಮಾರಸ್ವಾಮಿಯೇ ಹೇಳಿಕೊಟ್ಟಿದ್ದಾರೆ ಎನ್ನುವಂತೆ ಕಾಂಗ್ರೆಸ್​ ಶಾಸಕರೇ ಹೇಳಿದ್ದಾರೆ. ಅಂದರೆ ಜಮೀರ್​ ಅಹ್ಮದ್​ ಖಾನ್​​, ಕಾಂಗ್ರೆಸ್​​ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಉದ್ದೇಶದಿಂದಲೇ ಹೇಳಿದ್ದಾರೆ ಎಂದರೆ ಕಾಂಗ್ರೆಸ್​ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದೇ ಅರ್ಥ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್​​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಡಿ.ಕೆ ಸುರೇಶ್​ ಮಾತನಾಡಿ, ಈ ಮೊದಲೂ ಜಮೀರ್​ ಹೇಳಿದ್ದರು. ಆಗ ಇದರ ಬಗ್ಗೆ ಮಾಧ್ಯಮಗಳು ದೊಡ್ಡದಾಗಿ ಸುದ್ದಿ ಮಾಡಿಲ್ಲ. ಚುನಾವಣೆ ಸಮಯದಲ್ಲಿ ಇದನ್ನು ದೊಡ್ಡದು ಮಾಡಲಾಯ್ತು ಎನ್ನುವ ಮೂಲಕ ಚುನಾವಣೆಯಲ್ಲಿ ಪರಿಣಾಮ ಬೀರಿದೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ.

ಈಗಾಗಲೇ ಜಮೀರ್​ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಅಷ್ಟೇ ಅಲ್ಲದೆ ಕಾಂಗ್ರೆಸ್​ ಪಕ್ಷದ ಮುಖ್ಯ ವಾಹಿನಿಯಲ್ಲಿ ಜಮೀರ್​ ಅವರನ್ನು ಮುಸ್ಲಿಂ ಅಗ್ರಗಣ್ಯ ಮುಖಂಡ ಎನ್ನುವಂತೆ ಬಿಂಬಿಸಬಾರದು ಎಂದು ಕೆಪಿಸಿಸಿಗೆ ಪತ್ರ ಬರೆದು ಮುಸ್ಲಿಂ ಮುಖಂಡರೇ ಒತ್ತಾಯ ಮಾಡಿದ್ದಾರೆ. ಇದೀಗ ರಮೇಶ್​ ಬಂಡಿಸಿದ್ದೇಗೌಡ ಹೇಳಿಕೆ ಜಮೀರ್​ ಕುಮಾರಸ್ವಾಮಿ ಜೊತೆಗೆ ಕೈಜೋಡಿಸಿದ್ದಾರೆ ಎನ್ನುವಂತಿದೆ. ಇದೀಗ ಕೆಪಿಸಿಸಿ ಯಾವ ಕ್ರಮ ತೆಗೆದುಕೊಳ್ಳುತ್ತೆ..? ಕಾಂಗ್ರೆಸ್​ ಹೈಕಮಾಂಡ್​ ಚುನಾವಣಾ ಫಲಿತಾಂಶದ ತನಕ ಕಾದು, ಆ ಬಳಿಕ ಸಚಿವ ಸ್ಥಾನದಿಂದ ಕೊಕ್​ ಕೊಡುವ ಸಾಧ್ಯತೆ ಇದೆಯಾ..? ಅನ್ನೋ ಬಗ್ಗೆಯೂ ಕಾಂಗ್ರೆಸ್​ನ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿರುವ ವಿಚಾರ.

HD Kumaraswamy: ಸಿದ್ದರಾಮಯ್ಯ,ಡಿಕೆಶಿ ವಿರುದ್ಧ ಕುಮಾರಸ್ವಾಮಿ ಕೆಂಡಮಂಡಲ..! #zameer #siddaramaiah #dks
Tags: BJPchannapatna by electionchannapatna by election 2024channapatna by election candidatechannapatna by election datechannapatna by election newschannapatna by election votingchannapatna by pollschannapatna election 2024channapattana election 2024Congress Partykarnataka by election 2024karnataka by election 2024 updateskarnataka by election pollingkarnataka by election voting daykarnataka election 2024tv9 kannada by election newsಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮೊಟ್ಟ ಮೊದಲ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಿದ ಮಾರುತಿ ಕಂಪನಿ!

Next Post

ಹಲಗೆವರೆಡಹಳ್ಳಿ ಡಿನೋಕಿಫಿಕೇಷನ್ ಕೇಸ್ – ಜನಪ್ರತಿನಿಧಿಗಳ ಕೋರ್ಟ್ ಗೆ ಹಾಜರಾದ ಹೆಚ್.ಡಿ.ಕುಮಾರಸ್ವಾಮಿ !

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post
ಹಲಗೆವರೆಡಹಳ್ಳಿ ಡಿನೋಕಿಫಿಕೇಷನ್ ಕೇಸ್ – ಜನಪ್ರತಿನಿಧಿಗಳ ಕೋರ್ಟ್ ಗೆ ಹಾಜರಾದ ಹೆಚ್.ಡಿ.ಕುಮಾರಸ್ವಾಮಿ !

ಹಲಗೆವರೆಡಹಳ್ಳಿ ಡಿನೋಕಿಫಿಕೇಷನ್ ಕೇಸ್ - ಜನಪ್ರತಿನಿಧಿಗಳ ಕೋರ್ಟ್ ಗೆ ಹಾಜರಾದ ಹೆಚ್.ಡಿ.ಕುಮಾರಸ್ವಾಮಿ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada