ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವಂತೆ ಬಿಬಿಎಂಪಿ ಸರ್ಕಲ್ ಹಾಗು ಪಾರ್ಕ್‌ಗಳನ್ನು ಆಸಕ್ತರಿಗೆ ನಿರ್ವಹಣಾ ಉಸ್ತುವಾರಿ ಕೊಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಇದಕ್ಕಾಗಿ ನಿಯಮಗಳನ್ನು ರೂಪಿಸಿದ್ದು, ಸಂಘ ಸಂಸ್ಥೆಗಳು ಅಥವಾ ಜನರು ದತ್ತು ಪಡೆಯಬಹುದಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾರ್ಕ್, ಸರ್ಕಲ್‌ಗಳ ನಿರ್ವಹಣೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. 1,280 ಉದ್ಯಾನವನ ಮತ್ತು ವೃತ್ತಗಳನ್ನು ಸಹ ಪಾಲಿಕೆ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ‘ನಮ್ಮ ಬೆಂಗಳೂರು ನನ್ನ ಕೊಡುಗೆ’ ಮತ್ತು ಸಿಎಸ್‌ಆರ್ ಪಾಲಿಸಿ ಯೋಜನೆ ಅಡಿಯಲ್ಲಿ ಉದ್ಯಾನವನಗಳು, ರಸ್ತೆ ವಿಭಜಕಗಳು ಮತ್ತು ವ್ಯತ್ತಗಳನ್ನು ನಿರ್ವಹಿಸಲು ಖಾಸಗಿ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ದತ್ತು ವಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. https://www.bbmp.gov.in ವೆಬ್‌ಸೈಟ್ ಮೂಲಕ ದತ್ತು ಪಡೆಬಹುದಾಗಿದೆ.
ಇತ್ತೀಚೆಗೆ ದಿನಗಳಲ್ಲಿ ನಾಗರಿಕ ಗುಂಪುಗಳು (Citizens Group) ಮತ್ತು ಸರ್ಕಾರೇತರ ಸಂಸ್ಥೆಗಳು (NGO) ಪಾಲಿಕೆಯನ್ನು ಸಂರ್ಪಕಿಸಿ ಉದ್ಯಾನವನಗಳು, ವೃತ್ತಗಳ ನಿರ್ವಹಣೆ ಅಥವಾ ಅಭಿವೃದ್ಧಿ ಮಾಡಲು ಆಸಕ್ತಿ ತೋರಿಸಿದ್ದರು. ಹೀಗಾಗಿ ಆಸಕ್ತ Community involvement for Park Conservation Policy CIPC-2024, CSR ಅಡಿಯಲ್ಲಿ ಹಾಗೂ ನಮ್ಮ ಬೆಂಗಳೂರು – ನನ್ನ ಕೊಡುಗೆ ಘೋಷ ವಾಕ್ತದ ಅಡಿಯಲ್ಲಿ ಆಸಕ್ತ ಸಂಸ್ಥೆಗಳಿಗೆ ದತ್ತು ನೀಡುವ ಅವಕಾಶ ಕಲ್ಪಿಸಿಕೊಡಲಾಗಿದೆ.
ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ 6 ವಿವಿಧ ಸಂಸ್ಥೆಗಳಿಗೆ ಈಗಾಗಲೇ ಉದ್ಯಾನವನಗಳನ್ನು ದತ್ತು ನೀಡಲಾಗಿದೆ. ಅದರಂತೆ ಮತ್ತೊಮ್ಮೆ ಆಸಕ್ತ ಸಂಸ್ಥೆಗಳಿಂದ ದತ್ತು ಪಡೆಯಲು ಅರ್ಜಿಯನ್ನು ಆಹ್ವಾನಿಸಿದ್ದು ನವೆಂಬರ್ 15ರ ಸಂಜೆ 5 ಗಂಟೆ ಒಳಗಡೆ, ಉವ ನಿರ್ದೇಶಕರು ತೋಟಗಾರಿಕೆ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಸಲು ಸೂಚನೆ ಕೊಡಲಾಗಿದೆ.