ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವಕ್ಪ್ ಆಸ್ತಿ ವಿವಾದ ಭುಗಿಲೆದ್ದಿದೆ. ವಿಜಯಪುರದ ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿದೆ.. ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಶಾಸಕರಾದ ಹರೀಶ್ ಪೂಂಜಾ, ಮಹೇಶ್ ತೆಂಗಿನಕಾಯಿ, ಮಾಜಿ ಎಂಎಲ್ಸಿ ಅರುಣ್ ಶಾಹಾಪೂರ ಹಾಗೂ ಇನ್ನಿತರ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಪಡಗಾನೂರು ಗ್ರಾಮದ ಹಲವು ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದು, ನೋಟಿಸ್ ಜಾರಿ ಮಾಡಿದ ಬಗ್ಗೆಯೂ ಬಿಜೆಪಿ ನಿಯೋಗ ಮಾಹಿತಿ ಕಲೆ ಹಾಕಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡದಲ್ಲಿ ವಕ್ಫ್ ಆಸ್ತಿ ಬಗ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ನೆಹರು ಕಾಲದಲ್ಲಿ ವಕ್ಫ್ ಕಾನೂನು ಮಾಡಿದ್ದಾರೆ. ಏಕೆ ಮಾಡಿತು ನನಗೆ ಗೊತ್ತಿಲ್ಲ, ಅವರು ಮಾಡಿ ಇಟ್ಟಿದ್ದರು. ಆದರೆ 2013 ರಲ್ಲಿ ದೇಶದ ಯಾವ ವಿಭಾಗಕ್ಕೂ ಇರಲಾರದ ಅಧಿಕಾರ ಕೊಟ್ಟರು. ಸುಪ್ರಿಂ ಕೋರ್ಟ್‌ಗೂ ವಕ್ಪ್ ನೋಟಿಫಿಕೇಷನ್ ವಿಚಾರಿಸುವ ಆಧಿಕಾರ ಇಲ್ಲ ಎಂದಿದ್ದಾರೆ. ಇವರಿಗೆ ಹುಚ್ಚ ಧೈರ್ಯ ಅನ್ನಬೇಕಾ, ಮೈಯೊಳಗಿನ ಸೊಕ್ಕು ಅನಬೇಕಾ..? ಎಂದು ಪ್ರಶ್ನಿಸಿದ್ದಾರೆ. ಇನ್ನು ಉಪಚುನಾವಣೆ ಮತ್ತು ಬೇರೆ ಚುನಾವಣೆಗಳು ನಡೆದಿವೆ. ಹೀಗಾಗಿ ನೋಟಿಸ್ ಹಿಂದೆ ತಗೋತೀವಿ ಎನ್ನುತ್ತಿದ್ದಾರೆ. ಅಳ್ನಾವರ ಪೊಲೀಸ್ ಠಾಣೆಯನ್ನೇ ವಕ್ಫ್ ಆಸ್ತಿ ಎಂದಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ಶಾಸಕ ಎಸ್. ಎನ್ ಚನ್ನಬಸಪ್ಪ ಆಕ್ರೋಶ ಹೊರ ಹಾಕಿದ್ದಾರೆ. ಕರ್ನಾಟಕ ರಾಜ್ಯವನ್ನ ವಕ್ಫ್ ಬೋರ್ಡ್ ಮೂಲಕ ಮುಸಲ್ಮಾನ್ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ.ವಕ್ಫ್ ಇರುವಂತದ್ದು ಬೇರೆ ಉದ್ದೇಶಕ್ಕಾಗಿ. ಆದರೆ ರೈತರ ಜಮೀನನ್ನ ಕಿತ್ತುಕೊಂಡು ವಕ್ಫ್ ಬೋರ್ಡಿಗೆ ಸೇರಿಸುವ ಕುತಂತ್ರಿ ಬುದ್ಧಿಯನ್ನು ಮುಸಲ್ಮಾನ್ ಬಂಧುಗಳು ಮಾಡುತ್ತಿದ್ದಾರೆ. ಅವರಿಗೆ ಬಂಧುಗಳು ಎನ್ನುವುದಕ್ಕೂ ನಮಗೆ ಅಸಹ್ಯ ಎನಿಸುತ್ತಿದೆ. ನಾವೆಷ್ಟೇ ಅವರನ್ನ ಬಂಧುಗಳು ಎಂದು ಹೇಳಿದರು ಸಹ ಅವರು ಮಾಡಬಾರದ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಮುಸಲ್ಮಾನ್ ಲ್ಯಾಂಡ್ ಮಾಫಿಯವನ್ನು ವಕ್ಫ್ ಬೋರ್ಡ್ ಮೂಲಕ ಮಾಡಲು ರಾಜ್ಯ ಸರ್ಕಾರ ಹೊರಟಿದೆ ಎಂದು ಟೀಕಿಸಿದ್ದಾರೆ.
ಕಲಬುರ್ಗಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಚಲವಾದಿ ನಾರಾಯಣ್ ಸ್ವಾಮಿ ಮಾತನಾಡಿ, ರೈತರ ಜಮೀನಿನ ಪಾಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗ್ತಿದೆ. ಬಿಜಾಪುರ, ಯಾದಗಿರಿ, ಕಲಬುರಗಿ, ತುಮಕೂರು, ಚಿತ್ರದುರ್ಗದಲ್ಲಿ ಮಸೀದಿಗಳು ಸರ್ಕಾರಕ್ಕೆ ಪತ್ರ ಬರೆದಿವೆ. ಆ ಜಾಗ, ಈ ಜಾಗ ನಮಗೆ ಸೇರಿದ್ದು ಅಂತಾ ಪತ್ರ ಬರೆದಿವೆ. ಮಸೀದಿಗಳು ಈ ಸರ್ಕಾರವನ್ನ ಹ್ಯಾಂಡಲ್ ಮಾಡ್ತಿವೆ. ಮಸೀದಿಗಳು ಸರ್ಕಾರ ಹ್ಯಾಂಡಲ್ ಮಾಡ್ತಿರುವ ಪರಿಸ್ಥಿತಿ ಇವರು ತಂದುಕೊಂಡಿದ್ದಾರೆ. ತಕ್ಷಣ ವಕ್ಫ್ ಬೋರ್ಡ್ ಅಬಾಲಿಶ್ ಮಾಡಬೇಕು. ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ ಇದೆ ಅಂತಾ ವಕ್ಫ್ ಬೋರ್ಡ್ ಘೋಷಣೆ ಮಾಡಲಿ. ಹಿಂದೂ ಮಠಗಳು, ದೇವಸ್ಥಾನಗಳು ನಮ್ಮದೂ ಅಂತಾ ನೋಟಿಸ್ ಕೊಡ್ತಿದ್ದಾರೆ. ಈ ದೇಶ ಯಾರಪ್ಪನ ಆಸ್ತಿಯೂ ಅಲ್ಲ. ಇದು ಹಿಂದೂಸ್ತಾನ್ ಎಂದಿದ್ದಾರೆ.