ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಗುಜರಾತ್ನಲ್ಲಿ ಕಾಂಗ್ರೆಸ್ಗೆ ಆಂತರಿಕ ಬಂಡಾಯದ ಬಿಸಿ ಮುಟ್ಟಿದೆ. ಪಾಟೀದಾರ್ ಸಮುದಾಯದ ಪ್ರಬಲ ನಾಯಕ ಎಂದೇ ಖ್ಯಾತಿ ಪಡೆದಿರುವ ಜಿಪಿಸಿಸಿ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಪಕ್ಷಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ.
ಹಾರ್ದಿಕ್ ಹಾಗು ಕಾಂಗ್ರೆಸ್ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂಧು ಅವರ ಆಪ್ತ ಮೂಲಗಳು ತಿಳಿಸಿವೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜಸ್ಥಾನದ ಉದಯ್ಪುರದಲ್ಲಿ ನಡೆಯುತ್ತಿರುವ ಚಿಂತನ್ ಶಿಬಿರಕ್ಕೆ ಪಟೇಲ್ ಗೈರಾಗಿರುವುದು ಪುಷ್ಠಿ ನೀಡುತ್ತದೆ.
ಈ ಹಿಂದಿನಿಂದಲೂ ಹಾರ್ದಿಕ್ ತಮ್ಮ ಸುದಾಯವನ್ನು ಪಕ್ಷದಲ್ಲಿ ಕಡೆಹಗಣಿಸಲಾಗುತ್ತಿದೆ ಮತ್ತು ನಾಯಕರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸುತ್ತಾ ಬಂದಿದ್ದಾರೆ. ಈ ವಾರ ಗುಜಾರಾತ್ನ ದಾವೋದ್ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಹಾರ್ದಿಕ್ ಕಡೆಯದಾಗಿ ರಾಹುಲ್ ಗಾಂಧಿ ಜೊತೆ ಕಾಣಿಸಿಕೊಂಡದ್ದು ಬಿಟ್ಟರೆ ಪಕ್ಷದ ಬೇರೆ ಯಾವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಉದಯ್ಪುರದ ಚಿಂತನ್ ಶಿಬಿರಕ್ಕೆ ಪಕ್ಷದ ವರಿಷ್ಠರ ಆಹ್ವಾನದ ಹೊರತಾಗಿಯೂ ಹಾರ್ದಿಕ್ ಗೈರಾಗಿದ್ದಾರೆ. ಇನ್ನು ಸ್ವಲ್ಪ ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ ಒಂದು ವೇಳೆ ಅವರು ಕಾಂಗ್ರೆಸ್ನಲ್ಲಿ ಉಳಿಯುವ ದೈರ್ಯ ಮಾಡಿದ್ದರೆ ಅದು ಪವಾಡವೇ ಸರಿ ಎಂದು ಹಾರ್ದಿಕ್ ಆಪ್ತರೊಬ್ಬರು ತಿಳಿಸಿದ್ದಾರೆ.
ಮುಂದುವರೆದು, ದಾಹೋದ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಹಾರ್ದಿಕ್ರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು ಮತ್ತು ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಬಗ್ಗೆ ಹೆಚ್ಚು ಮಾತನಾಡಿದ್ದರು ಎಂಬ ಸಿಟ್ಟು ಅವರಲ್ಲಿದೆ.
ಹಾರ್ದಿಕ್ ಕಾಂಗ್ರೆಸ್ಗೆ ಸೇರಿದ ನಂತರ ಕಳೆದ ಮೂರು ವರ್ಷಗಳಲ್ಲಿ ಪೊಲೀಸರು ಅಣೇಕ ಭಾರೀ ಬಂಧಿಸಿದ್ದಾರೆ ಮತ್ತು ಅವರ ವಿರುದ್ದ 32 FIRಗಳನ್ನು ದಾಖಲಿಸಲಾಗಿದೆ ಇದರ ಬಗ್ಗೆ ಒಮ್ಮೆಯೂ ಟ್ವೀಟ್ ಮಾಡುವುದಾಗಲ್ಲಿ ಹಾಗೆಯೇ ಕಾನೂನು ಹೋರಾಟಕ್ಕೆ ಯಾವುಧೇ ರೀತಿಯ ಬೆಂಬಲವನ್ನು ನೀಡಲಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಒಂದು ವೇಳೆ ಚುನಾವಣೆ ಹೊಸ್ತಿಲಲ್ಲೇ ಹಾರ್ದಿಕ್ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರೆ ಅದು ಕಾಂಗ್ರೆಸ್ಗೆ ದೊಡ್ಡ ಹೊಡೆತ ಬೀಳಲಿದೆ. ಪಾಟೀದಾರ್ ಸಮುದಾಯ ಹೆಚ್ಚಿರುವ ಸೌರಾಷ್ಟ್ರ, ಉತ್ತರ ಗುಜರಾತ್ ಹಾಗು ಸೂರತ್ನಲ್ಲಿ ಪಾಟೀದಾರ್ ಸಮುದಾಯದವರ ಪ್ರಾಬಲ್ಯ ಹೆಚ್ಚಿದ್ದು ಚುನಾವಣೆಯಲ್ಲಿ ದೊಡ್ಡ ಹೊಡೆತ ಬೀಳಲಿದೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಪಾಟೀದಾರ್ ಸಮುದಾಯದ ಪ್ರಬಲ ನಾಯಕ ಎಂದೇ ಗುರುತಿಸಿಕೊಳ್ಳುತ್ತಿರುವ ಉದ್ಯಮಿ ನರೇಶ್ ಪಟೇಲ್ರನ್ನು ಕಾಂಗ್ರೆಸ್ಗೆ ಕರೆತರುವಲ್ಲಿ ನಾಯಕರು ಹಿಂದೇಟು ಹಾಕುತ್ತಿರುವುದು ಹಾರ್ದಿಕ್ ಕೋಪಕ್ಕೆ ಮೂಲ ಕಾರಣ ಎಂದು ತಿಳಿದು ಬಂದಿದೆ.
ಈ ಹಿಂದೆ ಹಲವು ಭಾರೀ ನರೇಶ್ ರಾಜಕೀಯಕ್ಕೆ ಬರುವುದಾಗಿ ಬಹಿರಂಗವಾಗಿ ಘೋಷಿಸಿದ್ದರು ಸಹ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಸ್ಥಳೀಯ ನಾಯಕರು ವಿಫಲರಾಗಿದ್ದಾರೆ ಎಂದು ಹಾರ್ದಿಕ್ ಕಿಡಿಕಾರಿದ್ದಾರೆ. ಆದರೆ, ಸ್ಥಳಿಯ ಕಾಂಗ್ರೆಸ್ ನಾಯಕರು ಹೇಳುವ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ಗೆ ಈಗಾಗಲೇ ಈ ಬಗ್ಗೆ ತಿಳಿಸಿದ್ದೇವೆ ನರೇಶ್ ಪಕ್ಷಕ್ಕೆ ಬರಲು ಕೆಲವು ಷರತ್ತುಗಳನ್ನಿ ವಿಧಿಸಿದ್ದು ಅದಕ್ಕೆ ಕೈಕಮಾಂಡ್ ಪೂರ್ಣ ಪ್ರಮಾಣದ ಒಪ್ಪಿಗೆಯನ್ನ ನೀಡಿಲ್ಲ ಎಂದು ಸ್ಥಳೀಯ ನಾಯಕರು ತಿಳಿಸಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಹಾರ್ದಿಕ್ ಬಿಜೆಪಿ ಸೇರುತ್ತಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಈಗಾಗಲೇ ಈ ಬಗ್ಗೆ ಬಿಜೆಪಿ ನಾಯಕರು ಗಾಳವನ್ನ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಹಾರ್ದಿಕ್ ಯಾವುದೇ ಕಾರಣಕ್ಕು ಬಿಜೆಪಿ ಸೇರುವುದಿಲ್ಲ ಎಂದು ತಿಳಿದು ಬಂದಿದೆ.
ಮುಂದಿನ ದಿನಗಳಲ್ಲಿ ಈ ರಾಜಕೀಯ ಮೇಲಾಟ ಎಲ್ಲಿಗೆ ಬಂದು ನಿಲ್ಲುತ್ತದೆ ಎಂದಬುದನ್ನ ಕಾದು ನೋಡಬೇಕಿದೆ.