ಶ್ರೀಮಂತರ ಪಟ್ಟಿಯಲ್ಲಿ ಜ್ಯಾಕ್ ಮಾ ಸೇರಿದಂತೆ ಚೀನಾದ ಬಹುತೇಕ ಬಿಲಿಯೇನಿರ್ಸ್ ಅನ್ನು ಹಿಂದಿಕ್ಕಿದ ಅಂಬಾನಿ-ಅದಾನಿ.!

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅದಾನಿ ಗ್ರೂಪ್ ನ ಅಧ್ಯಕ್ಷ ಗೌತಮ್ ಅದಾನಿ ತಮ್ಮ ಸಂಪತ್ತಿನ ವಿಷಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದಾನಿ ಮತ್ತು ಅಂಬಾನಿ ಅಲಿಬಾಬಾ ಗ್ರೂಪ್‌ನ ಸಂಸ್ಥಾಪಕ ಬಿಲಿಯೇನರ್ ಜ್ಯಾಕ್ ಮಾ ಅವರ ಹೆಸರನ್ನು ಒಳಗೊಂಡಂತೆ ಜಾಗತಿಕ ಸಂಪತ್ತು ಶ್ರೇಯಾಂಕದಲ್ಲಿ ಚೀನಾದ ಎಲ್ಲಾ ಬಿಲಿಯೇನರ್‌ಗಳನ್ನು ಹಿಂದಿಕ್ಕಿದ್ದಾರೆ.

ಅಂಬಾನಿ-ಅದಾನಿ ಸಂಪತ್ತು ಏರುತ್ತಿದೆ

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಮುಖೇಶ್ ಅಂಬಾನಿಯ ಸಂಪತ್ತು 84 ಶತಕೋಟಿಗೆ ಏರಿಕೆಯಾದರೆ, ಗೌತಮ್ ಅದಾನಿಯ ಸಂಪತ್ತು 78 ಶತಕೋಟಿಗೆ ಏರಿದೆ. ಅದರ ನಂತರ ಭಾರತೀಯ ಉದ್ಯಮಿಗಳು ಇಬ್ಬರೂ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿಗಳಾಗಿದ್ದಾರೆ. ಮುಖೇಶ್ ಅಂಬಾನಿ ಜಾಗತಿಕ ಸಂಪತ್ತು ಶ್ರೇಯಾಂಕದಲ್ಲಿ 12ನೇ ಸ್ಥಾನದಲ್ಲಿದ್ದಾರೆ.

ಭಾರತದ ಈ ಇಬ್ಬರು ದೊಡ್ಡ ಉದ್ಯಮಿಗಳು ಚೀನಾದ ದೊಡ್ಡ ಉದ್ಯಮಿಗಳಾದ ಜಾಂಗ್ ಶನ್ಶನ್, ಜ್ಯಾಕ್ ಮಾ ಮತ್ತು ಪೋನಿ ಮಾ ಅವರನ್ನು ಹಿಂದಿಕ್ಕಿದ್ದಾರೆ.

ಜ್ಯಾಕ್ ಮಾ ಅವರ ಶ್ರೇಯಾಂಕವು ಗಳಿಕೆಯ ವಿಷಯದಲ್ಲಿ ಕುಸಿತ

ವರದಿಯ ಪ್ರಕಾರ, ಜ್ಯಾಕ್ ಮಾ ಅವರ ಶ್ರೇಯಾಂಕವು ಈಗ 26 ನೇ ಸ್ಥಾನಕ್ಕೆ ಬಂದಿದೆ. ಕೆಲವು ವರ್ಷಗಳ ಹಿಂದೆ, ಜ್ಯಾಕ್ ಮಾ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಇದರ ನಂತರ, ಅವರ ಶ್ರೇಯಾಂಕವು ಕುಸಿದಿದೆ. ಚೀನಾ ಸರ್ಕಾರದೊಂದಿಗಿನ ವಿವಾದದ ನಂತರ ಅವರು ಹಲವಾರು ತಿಂಗಳುಗಳ ಕಾಲ ಕಣ್ಮರೆಯಾಗಿದ್ದರು.

ಕರೋನಾ ಅವಧಿಯಲ್ಲಿ ಶ್ರೀಮಂತರಾದವರು

ದೇಶಾದ್ಯಂತ ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಾಗ, ಆ ಕರೋನಾ ಅವಧಿಯಲ್ಲಿಯೇ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯವರ ಸಂಪತ್ತು ಗಮನಾರ್ಹವಾಗಿ ಹೆಚ್ಚಾಗಿದನ್ನು ಗಮನಿಸಬಹುದು. ಮಾರ್ಚ್ 2021 ರ ವರದಿಯಲ್ಲಿ, ಈ ಎರಡೂ ಉದ್ಯಮಿಗಳು ಶ್ರೀಮಂತರ ಪಟ್ಟಿಯಲ್ಲಿ ಹಲವಾರು ಸ್ಥಾನಗಳನ್ನು ಗಳಿಸಿದ್ದಾರೆ ಎಂದು ತಿಳಿಸಲಾಗಿದೆ. ಅದಾನಿಯ ಸಂಪತ್ತು ಅಂಬಾನಿಗಿಂತ ವೇಗವಾಗಿ ಹೆಚ್ಚಾಗಿದೆ. ಏಷ್ಯಾದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಅದಾನಿ ಶೀಘ್ರದಲ್ಲೇ ಅಂಬಾನಿಯನ್ನು ಹಿಂದಿಕ್ಕಲಿದ್ದಾರೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...