ಅಲೋವೆರದಲ್ಲಿ ವಿಶೇಷ ಗುಣಲಕ್ಷಣಗಳಿದ್ದು ಸಾಕಷ್ಟು ವರ್ಷಗಳಿಂದಲೂ ಇದನ್ನ ಬಳಸಲಾಗುತ್ತದೆ. ಇನ್ನು ನಮ್ಮ ಅಂದವನ್ನು ಹೆಚ್ಚಿಸುವಲ್ಲಿ ತ್ವಜಿಗೆ ಒಳ್ಳೆಯ ಔಷಧಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ, ಮಾತ್ರವಲ್ಲದೆ ನಮ್ಮ ಕೇಶ ರಾಶಿ ಕೂಡ ಉತ್ತಮ. ಅಲೋವೆರವನ್ನು ಬಳಸಿ ಸಾಕಷ್ಟು ಸೋಪು ಹಾಗೂ ಶಾಂಪೂಗಳನ್ನು ಕೂಡ ತಯಾರಿಸಲಾಗುತ್ತದೆ. ಇಷ್ಟೇ ಮಾತ್ರವಲ್ಲದೇ ಅಲೋವೆರದಿಂದ ಇನ್ನೂ ಕೂಡ ಆರೋಗ್ಯಕ್ಕೆ ತುಂಬಾನೇ ಲಾಭಗಳಿವೆ. ಅದು ಕೂಡ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಅಲೋವೆರ ಜೂಸ್ ಕುಡಿಯುವುದರಿಂದ. ಹೆಚ್ಚಿನವರಿಗೆ ಈ ಬಗ್ಗೆ ಮಾಹಿತಿ ತಿಳಿದಿಲ್ಲ.
- ಅಲೋವೆರಾ ಜ್ಯೂಸ್ ಸ್ವಲ್ಪ ಕಹಿಯಾಗಿರುತ್ತೆ ಹಾಗಾಗಿಕಹಿಯನ್ನು ಮರೆಮಾಚಲು ಅಲೋವೆರಾ ರಸವನ್ನು ಕಿತ್ತಳೆ, ದ್ರಾಕ್ಷಿಹಣ್ಣು ಅಥವಾ ಅನಾನಸ್ನಂತಹ ಹಣ್ಣುಗಳೊಂದಿಗೆ ಸೇರಿಸಿ.
- ಇಲ್ಲವಾದಲ್ಲಿ ಅಲೋವೆರಾದ ಜೊತೆಗೆ ಒಂದೆರಡು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪ ಹಾಗೂ ಒಂದು ಟೇಬಲ್ ಸ್ಪೂನ್ ಅಷ್ಟು ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಕ್ಸಿ ಮಾಡಿ ನಂತರ ಕುಡಿಯಬಹುದು.
ಬೆಳಗ್ಗೆ ಎದ್ದಾಗ ಅಲೋವೆರಾ ಜ್ಯೂಸನ್ನು ಕುಡಿಯುವುದರಿಂದ ಏನೆಲ್ಲಾ ಬೆನಿಫಿಟ್ಸ್ ಇದೆ ಗೊತ್ತಾ?
ರೋಗನಿರೋಧಕ ಶಕ್ತಿ
ಅಲೋವೆರಾ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.ಕಾರಣ ಇದರಲ್ಲಿ ವಿಟಮಿನ್ A ವಿಟಮಿನ್ C ಹಾಗು ವಿಟಮಿನ್ E ಇರೋದ್ರಿಂದ ನಮ್ಮ ದೇಹದಲ್ಲಿ ಇಮ್ಮ್ಯೂನಿಟಿ ಪವರ್ ಹೆಚ್ಚು ಮಾಡುತ್ತದೆ ಹಾಗೂ ಇತರೆ ಕಾಯಿಲೆಗಳನ್ನ ದೂರ ಇಡಲು ತುಂಬಾನೇ ಸಹಾಯಕಾರಿ.
ಜೀರ್ಣ ಕ್ರಿಯೆಯನ್ನ ಸುಧಾರಿಸುತ್ತದೆ
ಅಲೋವೆರಾ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮುಖ್ಯವಾಗಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸಲು ಸಹಾಯಕಾರಿ. ಇದರಿಂದ ಕಾನ್ಸ್ಟಿಪೇಶನ್ ಸಮಸ್ಯೆಯೂ ಕೂಡ ನಿವಾರಣೆಯಾಗುತ್ತದೆ.
ಉರಿಯೂತ
ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಬೆಳಗಿನ ಹೊತ್ತು ಕೆಲವರಿಗೆ ಕೈಕಾಲು ಬಿಗಿತ ಹೆಚ್ಚಿರುತ್ತದೆ ಮತ್ತು ಕೀಲು ನೋವಿನ ಸಮಸ್ಯೆ ಇದ್ರೆ..ಅಲೋವೆರಾ ಜ್ಯೂಸ್ ಕುಡಿಯುದರಿಂದ ಇವೆಲ್ಲವೂ ಕೂಡ ಕಡಿಮೆಯಾಗುತ್ತದೆ.
ಲಿವರ್
ಅಲೋವೆರಾ ರಸವು ಯಕೃತ್ತಿನ ಕಾರ್ಯವನ್ನು ಉತ್ತೇಜಿಸಲು ಮತ್ತು ಹಾಗೂ ಡಿಟಾಕ್ಸ್ ಮಾಡಲು ತುಂಬಾನೆ ಸಹಾಯಕಾರಿ.