ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಘಟಕದಲ್ಲಿನ ಹೆಲಿಕಾಪ್ಟರ್ ವಿಭಾಗದಲ್ಲಿ ಖಾಲಿ ಹುದ್ದೆಗಳಿಗೆ ಆಹ್ವಾನಿಸಿರುವ ಅರ್ಜಿಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ಶುಕ್ರವಾರ (ಆಗಸ್ಟ್ 11) ಪ್ರಕಟಣೆ ಹೊರಡಿಸಿದೆ.
ಎಚ್ಎಎಲ್ ಹುದ್ದೆಗಳಿಗಾಗಿ ಐ.ಟಿ.ಐ, ಡಿಪ್ರೊಮಾ ಹಾಗೂ ಯಾವುದೇ ಪದವಿ ಪೂರೈಸಿದ ಅಭ್ಯರ್ಥಿಗಳು (ಬಿ.ಇ/ಬಿ.ಟೆಕ್ ಹೊರತುಪಡಿಸಿ) ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಐ.ಡಿಗಳ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಈ ಸುದ್ದಿ ಓದಿದ್ದೀರಾ? ನಮ್ಮೂರ ತಿಂಡಿ ಹೋಟೆಲ್ ಸ್ಟೀಮರ್‌ನಲ್ಲಿ ಸ್ಫೋಟ ; ಮೂವರಿಗೆ ಗಾಯ, ಆಸ್ಪತ್ರೆಗೆ ರವಾನೆ
ಎಚ್ಎಎಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಐ.ಟಿ.ಐ ಅಭ್ಯರ್ಥಿಗಳು ಎನ್ಎಸಿ/ಏನ್ಸಿವಿಟಿ/ವಿಟಿಎಸ್ನ ಪ್ರಮಾಣಪತ್ರವನ್ನು ತಮ್ಮ ನೋಂದಾಯಿತ ಎಂಪ್ಲಾಯ್ಮೆಂಟ್ ಕಾರ್ಡ್‌ಗೆ ಸೇರಿಸುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆ ಹೇಳಿದೆ.
ಹೆಚ್ಚಿನ ಮಾಹಿತಿಗೆ 0816 2278488 ಸಂಪರ್ಕಿಸಲು ಕೋರಲಾಗಿದೆ.