• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, August 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BCI ಅಧ್ಯಕ್ಷರ ವಿರುದ್ಧ ₹150 ಕೋಟಿ ಅಕ್ರಮ ಆರೋಪ:15 ದಿನದಲ್ಲಿ ರಾಜೀನಾಮೆಗೆ ಒತ್ತಾಯ

ಪ್ರತಿಧ್ವನಿ by ಪ್ರತಿಧ್ವನಿ
August 23, 2026
in Top Story, ದೇಶ
0
BCI ಅಧ್ಯಕ್ಷರ ವಿರುದ್ಧ ₹150 ಕೋಟಿ ಅಕ್ರಮ ಆರೋಪ:15 ದಿನದಲ್ಲಿ ರಾಜೀನಾಮೆಗೆ ಒತ್ತಾಯ
Share on WhatsAppShare on FacebookShare on Telegram
ADVERTISEMENT

ನವದೆಹಲಿ: ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಆಡಳಿತದಲ್ಲಿ ಭಿನ್ನಮತ ಬಹಿರಂಗವಾಗಿದ್ದು, ಬಿಸಿಐ ಸಹ-ಅಧ್ಯಕ್ಷ ಹಾಗೂ ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ ಅವರು ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Lokayukta Raid:ಜಿಲ್ಲಾಧಿಕಾರಿ ಕಛೇರಿ ಮೇಲೆ ಲೋಕಾಯುಕ್ತ ದಾಳಿ #pratidhvani

ಮಿಶ್ರಾ ಅವರಿಗೆ ಪತ್ರ ಬರೆದಿರುವ ಸದಾಶಿವ ರೆಡ್ಡಿ, 15 ದಿನಗಳೊಳಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಬಿಸಿಐ ಅನ್ನು ವೈಯಕ್ತಿಕ ಸಂಸ್ಥೆಯಂತೆ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಸಿಐಗೆ ಸೇರಿದ ಸುಮಾರು ₹150 ಕೋಟಿ ಹಣವನ್ನು ‘BCI Trust PEARL First’ ಎಂಬ ಟ್ರಸ್ಟ್‌ಗೆ ವರ್ಗಾಯಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸದಾಶಿವ ರೆಡ್ಡಿ ಆರೋಪಿಸಿದ್ದಾರೆ. ಈ ಕ್ರಮಕ್ಕೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರೂ ಹಣ ವರ್ಗಾವಣೆ ಮಾಡಲಾಗಿದೆ. 2020ರಲ್ಲಿ ಮೂಲ ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್’ ಅನ್ನು ನಿಷ್ಕ್ರಿಯಗೊಳಿಸಿ ಹೊಸ ಟ್ರಸ್ಟ್ ರಚಿಸಲಾಗಿದೆ ಎಂಬ ಆರೋಪವೂ ಪತ್ರದಲ್ಲಿದೆ. ಹೊಸ ಟ್ರಸ್ಟ್‌ಗೆ ಅಧ್ಯಕ್ಷರು ತಮಗೆ ಆಪ್ತರಾದವರನ್ನು ಟ್ರಸ್ಟಿಗಳಾಗಿ ನೇಮಿಸಿಕೊಂಡಿದ್ದಾರೆ ಎಂದು ಸದಾಶಿವ ರೆಡ್ಡಿ ಆರೋಪಿಸಿದ್ದಾರೆ.

Karnataka Legislative Council : BJP VS ಕಾಂಗ್ರೆಸ್‌ ನಾಯಕರ‌ ನಡುವೆ ಟಾಕ್‌ ಫೈಟ್..! #bhojegowda #utkhader

ಕಾನೂನು ಕಾಲೇಜುಗಳಿಂದ ಹಣ ವಸೂಲಿ ಆರೋಪ

ಬಿಸಿಐ ಮಾನ್ಯತೆ ಮತ್ತು ಮಾನ್ಯತೆ ನವೀಕರಣದ ಸಂದರ್ಭದಲ್ಲಿ ದೇಶದ ಕೆಲವು ಕಾನೂನು ಕಾಲೇಜುಗಳಿಂದ ಹೆಚ್ಚಿನ ಮೊತ್ತದ ಹಣ ಪಡೆಯಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ನಿಯಂತ್ರಕ ಸಂಸ್ಥೆಯೇ ತನ್ನ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಂದ ಹಣ ಪಡೆಯುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಬಿಸಿಐ ಹಾಗೂ ಅದರ ಶೈಕ್ಷಣಿಕ ಸಂಸ್ಥೆಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲೂ ನಿಯಮ ಉಲ್ಲಂಘನೆಯಾಗಿದೆ ಎಂದಿರುವ ಸದಾಶಿವ ರೆಡ್ಡಿ ಅಧಿಕೃತವಾಗಿ ಹುದ್ದೆಗಳ ಜಾಹೀರಾತು ನೀಡದೆ ಹಾಗೂ ಅರ್ಹತಾ ಪಟ್ಟಿ ಪ್ರಕಟಿಸದೆ, ಅಧ್ಯಕ್ಷರಿಗೆ ಆಪ್ತರಾದವರು ಮತ್ತು ಕುಟುಂಬದ ಸದಸ್ಯರಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ ಎಂದು ದೂರಿದ್ದಾರೆ.

Karnataka Legislative Council : ಸಚಿವ ಚಲುವರಾಯಸ್ವಾಮಿ ವಿರುದ್ಧ ಗುಡುಗಿದ ಕಾಂಗ್ರೆಸ್‌ ಶಾಸಕಿ..! #congress

ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಬಿಸಿಐನ ಸಂಪೂರ್ಣ ಸಭೆ ಕರೆಯಬೇಕು, ಅನುಮಾನಾಸ್ಪದ ಪಾವತಿಗಳನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಸ್ವತಂತ್ರ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಸದಾಶಿವ ರೆಡ್ಡಿ ಆಗ್ರಹಿಸಿದ್ದಾರೆ.

D. K. Shivakumar : ಕೇರಳದಲ್ಲಿ ಸಿಎಂ ಡಿಕೆಶಿಗೆ ಅದ್ದೂರಿ ಸ್ವಾಗತ..! ಸಿಎಂ ಡಿಕೆ ಶಿವಕುಮಾರ್‌ ಕೇರಳದಲ್ಲಿ ಹವಾ..!
Previous Post

ರಾಜ್ಯದಲ್ಲಿ ಬರದ ಛಾಯೆ: ಮಳೆಗಾಗಿ ಕೊಡಗಿನಲ್ಲಿ ಕೃಷಿ ಸಚಿವರಿಂದ ವಿಶೇಷ ಪೂಜೆ

Next Post

ಹೊಸಕೋಟೆ 4 ಗಂಟೆ ಬಿರಿಯಾನಿಗೆ ಬ್ರೇಕ್‌: ಕಾರಣವೇನು..?

Related Posts

ಕೆಲಸದ ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ: ‘ಎಲ್ಲರೂ ಒಂದಾಗಿ ಸೇರೋಣ, ಜೊತೆಯಾಗಿ ಆಡೋಣ’ ಎಂದ ಕೆ.ವಿ. ಪ್ರಭಾಕರ್
Top Story

ಕೆಲಸದ ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ: ‘ಎಲ್ಲರೂ ಒಂದಾಗಿ ಸೇರೋಣ, ಜೊತೆಯಾಗಿ ಆಡೋಣ’ ಎಂದ ಕೆ.ವಿ. ಪ್ರಭಾಕರ್

by ಪ್ರತಿಧ್ವನಿ
August 23, 2026
0

ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಸದಾ ಕೆಲಸದ ಒತ್ತಡದಲ್ಲಿರುವ ಪತ್ರಕರ್ತರಿಗೆ ಕ್ರೀಡೆಯ ಮೂಲಕ ಕೊಂಚ ವಿರಾಮ ಹಾಗೂ ಮನರಂಜನೆ ಒದಗಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಬಿ ಝೆಡ್ ಕಪ್ ಮೀಡಿಯಾ...

Read moreDetails
ಬೆಂಗಳೂರಿನಲ್ಲಿ ‘ಕ್ಲೀನ್ ಅಪ್’ ಅಭಿಯಾನಕ್ಕೆ ವೇಗ: ಬೆಸ್ಕಾಂನಿಂದ ಶೇ.80ರಷ್ಟು ತೆರವು ಕಾರ್ಯ ಪೂರ್ಣ

ಬೆಂಗಳೂರಿನಲ್ಲಿ ‘ಕ್ಲೀನ್ ಅಪ್’ ಅಭಿಯಾನಕ್ಕೆ ವೇಗ: ಬೆಸ್ಕಾಂನಿಂದ ಶೇ.80ರಷ್ಟು ತೆರವು ಕಾರ್ಯ ಪೂರ್ಣ

August 23, 2026
ಸಾವಿನ ಬಳಿಕ ವೃದ್ಧೆಯ ಮನೆಯಲ್ಲಿ ಶಾಕ್‌! ಭಿಕ್ಷೆ ಬೇಡಿ ಕೂಡಿಟ್ಟಿದ್ದ ಹಣ ನೋಡಿ ಬೆಚ್ಚಿಬಿದ್ದ ಜನ 

ಸಾವಿನ ಬಳಿಕ ವೃದ್ಧೆಯ ಮನೆಯಲ್ಲಿ ಶಾಕ್‌! ಭಿಕ್ಷೆ ಬೇಡಿ ಕೂಡಿಟ್ಟಿದ್ದ ಹಣ ನೋಡಿ ಬೆಚ್ಚಿಬಿದ್ದ ಜನ 

August 23, 2026
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನಾಪತ್ತೆ ವದಂತಿಗೆ ತೆರೆ: ‘ನಾನು ಸುರಕ್ಷಿತವಾಗಿದ್ದೇನೆ’ ಎಂದ ಅಧಿಕಾರಿ

IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನಾಪತ್ತೆ ವದಂತಿಗೆ ತೆರೆ: ‘ನಾನು ಸುರಕ್ಷಿತವಾಗಿದ್ದೇನೆ’ ಎಂದ ಅಧಿಕಾರಿ

August 23, 2026
‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವಘಡ: FIR ದಾಖಲು

‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವಘಡ: FIR ದಾಖಲು

August 23, 2026
Next Post
ಹೊಸಕೋಟೆ 4 ಗಂಟೆ ಬಿರಿಯಾನಿಗೆ ಬ್ರೇಕ್‌: ಕಾರಣವೇನು..?

ಹೊಸಕೋಟೆ 4 ಗಂಟೆ ಬಿರಿಯಾನಿಗೆ ಬ್ರೇಕ್‌: ಕಾರಣವೇನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada