ನಂಜನಗೂಡು : ಸರ್ಕಾರದ ಜಾಗದಲ್ಲಿ ಅಕ್ರಮ ಮಣ್ಣು ಸಾಗಾಟ ಮಾಡುತ್ತಿರುವ ಘಟನೆ ನಂಜನಗೂಡು ತಾಲೂಕಿನ
ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ಕೆಐಡಿಬಿ ಸರ್ಕಾರಿ ಭೂಮಿಯಲ್ಲಿ ಬೆಳಕಿಗೆ ಬಂದಿದೆ.ಅಕ್ರಮವಾಗಿ ಮಣ್ಣನ್ನ ಸಾಗಿಸುತ್ತಿದ್ದ ಲಾರಿಗಳನ್ನ ರೈತರು ತಡೆಹಿಡಿದಿದ್ದಾರೆ.
ಈ ವೇಳೆ ರೈತರ ಮೇಲೆ ದುಷ್ಕರ್ಮಿಗಳು ಲಾರಿ ಹರಿಸಲು ಯತ್ನಿಸಿದ್ದಾರೆಂದು ಆರೋಪಿಸಿ ನಂಜನಗೂಡು ಪೊಲೀಸರ ವಿರುದ್ಧ ರೈತ ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಲಾಗಿದೆ.
ರಾತ್ರಿ ಹಗಲು ಎನ್ನದೆ ರಾಜಾರೋಷವಾಗಿ ಹೊರ ರಾಜ್ಯ ಕೇರಳ ನಂಬರ್ ಪ್ಲೇಟ್ ಅಳವಡಿಸಿರುವ ಲಾರಿಗಳ ಮೂಲಕ ಮಣ್ಣು ಸಾಗಿಸುತ್ತಿರುವ ಆರೋಪ ಮಾಡಲಾಗಿದೆ.ರೈತ ಸಂಘದ ಜಿಲ್ಲಾ ಮುಖಂಡ ವಿದ್ಯಾಸಾಗರ್ ಮತ್ತು ಇಮ್ಮಾವು ರಘು ರವರಿಂದ ಅಕ್ರಮ ಮಣ್ಣು ಸಾಗಿಸುತ್ತಿದ್ದ ಲಾರಿಗೆ ಅಡ್ಡ ಕುಳಿತು ಪ್ರತಿಭಟನೆ ನಡೆಸಿದ್ದಾರೆ.ಕೂದಲೆಳೆಯ ಅಂತರದಿಂದ ರೈತ ಮುಖಂಡರು ಬಚಾವ್ ಆಗಿದ್ದಾರೆ.
ಅಕ್ರಮ ಮಣ್ಣು ಸಾಗಿಸುತ್ತಿದ್ದ ಲಾರಿಗಳು ಸ್ಥಳದಿಂದ ಎಸ್ಕೇಪ್ ಆಗಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಂಜನಗೂಡು ಪೊಲೀಸರ ವಿರುದ್ಧ ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಮೇಲೆ ಲಾರಿ ಹರಿಸಲು ಮುಂದಾದ ಲಾರಿ ಚಾಲಕರು ಮತ್ತು ಅಕ್ರಮ ಮಣ್ಣು ಸಾಗಾಟಗಾರರ ವಿರುದ್ಧ ಪ್ರಕರಣ ದಾಖಲಿಸಲು ರೈತ ಸಂಘದ ಮುಖಂಡರು ಮುಂದಾಗಿದ್ದಾರೆ.