ಬೆಂಗಳೂರು: ಬೆಂಗಳೂರು(Bengaluru )ನಗರದಲ್ಲಿ ಜನ ಸಂಖ್ಯೆ ದಿನದಿನಕ್ಕೆ ದಿನಕ್ಕೆ ಹೆಚ್ಚಾಗುತ್ತಿದ್ದು, ವಾಹನ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದರ ಪರಿಣಾಮದಿಂದ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಲೇ ಇದೆ.

ಡಿಸೆಂಬರ್ 12ರಂದು ಬೆಂಗಳೂರು ಗಾಳಿಯ ಗುಣಮಟ್ಟ ಸೂಚ್ಯಂಕ 175ಕ್ಕೆ ತಲುಪಿದ್ದು, ಇಂದು ಸುಮಾರು 186 ರಿಂದ 206ರ ವರೆಗೂ ಏರಿಕೆಯಾಗಿದೆ. ಪ್ರತಿ ದಿನವೂ ಎಕ್ಯೂಐ ಹೆಚ್ಚಾಗುತ್ತಿದ್ದು, ಇದೇ ರೀತಿಯ ವಾತಾವರಣ ಮುಂದುವರಿದರೆ ನಗರದಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಿತಿ ಮೀರಿದ ವಾಹನಗಳ ಹೊಗೆ, ಕೈಗಾರಿಕಾ ಹೊಗೆ, ಹಾಗೂ ಇಂಧನಗಳ ಹೊಗೆಯಿಂದ ವಾಯುಮಾಲಿನ್ಯ ಹೆಚ್ಚುತ್ತಿದ್ದೆ. ಹೀಗೆ ಮುಂದುವರಿದರೆ ದೆಹಲಿಯ ಪರಿಸ್ಥಿತಿ ಬೆಂಗಳೂರಿನಲ್ಲೂ ಬರಲಿದೆ. ಸದ್ಯ ನಗರದಲ್ಲಿ PM2.5 95 ಮೈಕ್ರೋಗ್ರಾಮ್ ಇದ್ದು, PM10 ಪ್ರಮಾಣ 96 ಇದೆ ಎಂದು ವರದಿಯಾಗಿದೆ.

ಅಲ್ಲದೇ ಬೆಂಗಳೂರಿನ ಗಾಳಿಯ ಗುಣಮಟ್ಟ 200 ದಾಟಿರುವುದರಿಂದ ಉಸಿರಾಟದ ತೊಂದರೆ ಇರುವವರು ಜಾಗೃತೆಯಿಂದ ಇರಬೇಕಾಗಿದೆ. ಇನ್ನು ಬೆಂಗಳೂರಿನ ಬೆಳ್ಳಂದೂರು ಹಾಗೂ ಅರೆಕೆರೆ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ ಎಂದು ವರದಿಯಾಗಿದೆ.











