ನವದೆಹಲಿ: ಚುನಾವಣಾ ಆಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಮತದಾನದ ಅಂಕಿ-ಅಂಶಗಳ ಬಿಡುಗಡೆ ಕುರಿತು ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ತರಾಟೆಗೆದೆ ತೆಗೆದುಕೊಂಡಿದೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿಕೆಗಳು ಅಧಾರರಹಿತವಾಗಿದ್ದು, ಗೊಂದಲ ಸೃಷ್ಟಿಸುತ್ತದೆ. ನ್ಯಾಯಸಮ್ಮತ ಚುನಾವಣೆಗೆ ಅಡ್ಡಿಪಡಿಸುವಂತಿದೆ. ಆರೋಪಗಳು ಅಸಮರ್ಥನೀಯವಾಗಿದೆ. ಸತ್ಯಗಳಿಲ್ಲದ ಗೊಂದಲವನ್ನು ಹರಡುವ ಪಕ್ಷಪಾತ ಮತ್ತು ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಆಯೋಗ ಖಾರವಾಗಿ ಪ್ರತಿಕ್ರಿಯೆ ನೀಡಿದೆ.
ಆಯೋಗವು ಮತದಾನದ ಅಂಕಿ-ಅಂಶಗಳನ್ನು ಪ್ರಕಟಿಸಲು ನಿರಾಕರಿಸುವುದು, ಮತದಾನದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲು ವಿಳಂಬ ಮಾಡುವುದು ಲೋಕಸಭೆ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಬಹುದು ಎಂದು ಖರ್ಗೆ ಆರೋಪಿಸಿದ್ದರು.