ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ನಟನೆಯ ʻಏಜೆಂಟ್ʼ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಟ್ರೇಲರ್ನ ಉದ್ದಕ್ಕೂ ಅಖಿಲ್ ಆ್ಯಕ್ಷನ್ ಮೆರೆದಿದ್ದು, ಸದ್ಯ ʻಏಜೆಂಟ್ʼ ಟ್ರೇಲರ್ಗೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.
![](https://pratidhvani.com/wp-content/uploads/2023/04/agent-ott-release-date-time-where-to-watch-plot-and-much-more-1024x768.jpg)
2015ರಲ್ಲಿ ತೆರೆಕಂಡ ʻಅಖಿಲ್ʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಖಿಲ್ ಅಕ್ಕಿನೇನಿ, ಇದುವರೆಗೂ 4 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಅವರ ಯಾವ ಸಿನಿಮಾ ಕೂಡ ಹೇಳಿಕೊಳ್ಳುವಂತ ಯಶಸ್ಸು ತಂದುಕೊಟ್ಟಿಲ್ಲ.
![](https://pratidhvani.com/wp-content/uploads/2023/04/93458237-1024x576.gif)
ಇದೀಗ ಅಖಿಲ್ ಅಕ್ಕಿನೇನಿ ʻಏಜೆಂಟ್ʼ ಚಿತ್ರದ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಈ ಹಿಂದೆ ಚಾಕ್ಲೆಟ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಖಿಲ್, ಇದೇ ಮೊದಲ ಬಾರಿ ಸಂಪೂರ್ಣ ಆ್ಯಕ್ಷನ್ ಸಿನಿಮಾದಲ್ಲಿ ಮಿಂಚಲಿದ್ದಾರೆ.
![](https://pratidhvani.com/wp-content/uploads/2023/04/agent-97268581-1024x768.jpg)
ʻಏಜೆಂಟ್ʼ ಚಿತ್ರದ ಮೂಲಕ ಕಂಬ್ಯಾಕ್ ಮಾಡ್ತಿರುವ ಅಖಿಲ್ ಅಕ್ಕಿನೇನಿ, ಈ ಸಿನಿಮಾಗಾಗಿ ಸಾಕಷ್ಟು ಕಸರತ್ತು ನಡೆಸಿದ್ದಾರೆ. ಮಾಸ್ ಆಗಿ ಕಾಣಿಸೋಕೆ ಸಖತ್ ಬಾಡಿ ಬಿಲ್ಡ್ ಮಾಡಿಕೊಂಡಿದ್ದಾರೆ ನಟ ಅಖಿಲ್. ಸದ್ಯ ʻಏಜೆಂಟ್ʼ ಸಿನಿಮಾ ಇದೇ ಏಪ್ರಿಲ್ 28ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
![](https://pratidhvani.com/wp-content/uploads/2023/04/akhil-akkineni-1617869923-1-1024x576.jpg)