ಮಂಡ್ಯ : ಹೊಳೆ ಆಂಜನೇಯ ದೇವಸ್ಥಾನದಲ್ಲಿ ಹರಕೆ ತೀರಿಸಿದ್ದಾರೆ ಸಿ.ಪಿ ಯೋಗೇಶ್ವರ್ ಪತ್ನಿ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಯೋಗೇಶ್ವರ್ ಗೆಲುವು ಸಾಧಿಸುತ್ತಿದ್ದಂತೆ ಮದ್ದೂರಿನ ಹೊಳೆ ಆಂಜನೇಯ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಸಿ.ಪಿ ಯೋಗೇಶ್ವರ್ ಪತ್ನಿ ಶೀಲಾ ಯೋಗೇಶ್ವರ್ ಹೊಳೆ ಆಂಜನೇಯ ದೇಗುಲಕ್ಕೆ ಭೇಟಿ ನೀಡಿ, ಚುನಾವಣೆ ಪೂರ್ವದಲ್ಲಿ ದೇಗುಲಕ್ಕೆ ಭೇಟಿ ನೀಡಿ ಹರಕೆ ಕಟ್ಟಿಕೊಂಡಿದ್ದರು. ಹೊಳೆ ಆಂಜನೇಯನಿಗೆ ಒಂದು ಕಾಲು ರೂಪಾಯಿ ಹರಕೆ ಕಟ್ಟಿ ಗೆಲುವಿಗಾಗಿ ಪ್ರಾರ್ಥಿಸಿದ್ದರು.
ಚುನಾವಣೆಯಲ್ಲಿ ಗೆದ್ದ ಹಿನ್ನೆಲೆ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದು, ದೀಪ ಹಚ್ಚುವ ಮೂಲಕ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಮಾತನಾಡಿದ ಶೀಲಾ ಯೋಗೇಶ್ವರ್, ಕಷ್ಟದ ಸಂದರ್ಭದಲ್ಲಿ ಮಾತೃ ಪಕ್ಷ ಕಾಂಗ್ರೆಸ್ ಕೈಹಿಡಿಯಿತು. ಚನ್ನಪಟ್ಟಣ ಜನರ ಆಶಿರ್ವಾದದಿಂದ ಗೆದ್ದಿದ್ದಾರೆ ಎಂದಿದ್ದಾರೆ.
ನನ್ನ ಪತಿಯ ಜನ್ಮ ಭೂಮಿ ಹಾಗೂ ಕರ್ಮ ಭೂಮಿ ಚನ್ನಪಟ್ಟಣ. ಸಾಮಾನ್ಯ ಕುಟುಂಬದಿಂದ ಬಂದವರು ಸಿ.ಪಿ ಯೋಗೇಶ್ವರ್. ನನ್ನ ಪತಿಯ ಜನಸೇವೆ ಗುರುತಿಸಿ ಜನ ಕೈ ಹಿಡಿದಿದ್ದಾರೆ. ಎರಡು ಬಾರಿ ಸೋಲು ಅನುಭವಿಸಿದ್ದರು. ಈ ಬಾರಿ ಗೆಲ್ಲುವ ಭರವಸೆ ಇತ್ತು. ಚನ್ನಪಟ್ಟಣದ ಜನ ತಮ್ಮ ಮನೆ ಮಗನನ್ನ ಗೆಲ್ಲಿಸಿದ್ದಾರೆ. ನಮ್ಮದೆ ಸರ್ಕಾರ ಇರೋದ್ರಿಂದ ಜನ ಸೇವೆ ಮಾಡಬಹುದು ಎಂದಿದ್ದಾರೆ.