• Home
  • About Us
  • ಕರ್ನಾಟಕ
Friday, November 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಗ್ಯಾರಂಟಿ ಎಡವಟ್ಟು 2.. ಗೃಹಜ್ಯೋತಿ ಬಳಿಕ ಗೃಹಲಕ್ಷ್ಮೀ ಗೊಂದಲ..!

ಕೃಷ್ಣ ಮಣಿ by ಕೃಷ್ಣ ಮಣಿ
June 7, 2023
in ಅಂಕಣ
0
ಗ್ಯಾರಂಟಿ ಎಡವಟ್ಟು 2.. ಗೃಹಜ್ಯೋತಿ ಬಳಿಕ ಗೃಹಲಕ್ಷ್ಮೀ ಗೊಂದಲ..!
Share on WhatsAppShare on FacebookShare on Telegram

ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯುವ ಮುನ್ನ 5 ಗ್ಯಾರಂಟಿಗಳನ್ನು ಕೊಟ್ಟಿತ್ತು. ಜೂನ್‌ 2ರಂದು ಭರ್ಜರಿಯಾಗಿ ಕೆಲವು ನಿಬಂಧನೆಗಳನ್ನು ಹಾಕಿ ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ರಾಜ್ಯದ ಜನರೂ ಕೂಡ 5 ಗ್ಯಾರಂಟಿಗಳು ನಮಗೂ ಸಿಗುತ್ತೆ ಎನ್ನುವ ಕಾರಣಕ್ಕೆ ಹಿರಿ ಹಿರಿ ಹಿಗ್ಗಿದ್ದರು. ಗೃಹ ಜ್ಯೋತಿ ಯೋಜನೆಯಲ್ಲಿ 200 ಯೂನಿಟ್​ ವಿದ್ಯುತ್​ ಕೊಡುವ ಬಗ್ಗೆ ಬಾಡಿಗೆದಾರರ ಬಗ್ಗೆ ಸೃಷ್ಟಿಯಾಗಿದ್ದ ಗೊಂದಲವನ್ನು ನಿವಾರಣೆ ಮಾಡಲಾಗಿದೆ. ಆದರೆ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಯೋಜನೆಯಲ್ಲಿ ಸಣ್ಣದೊಂದು ಗೊಂದಲ ಉಳಿಸಿರುವ ರಾಜ್ಯ ಸರ್ಕಾರ, ನೋಟಿಫಿಕೇಷನ್​ನಲ್ಲಿ ಸ್ಪಷ್ಟನೆ ನೀಡಿಲ್ಲ ಎನ್ನುವುದು ಬಹುತೇಕ ಜನರ ಗೊಂದಲಕ್ಕೆ ಕಾರಣವಾಗಿದೆ.

ADVERTISEMENT

ಗೃಹಲಕ್ಷ್ಮಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಅಂತ್ಯೋದಯ, BPL, APL ಕಾರ್ಡ್​ ಹೊಂದಿರುವ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ರೂಪಾಯಿ ಫಿಕ್ಸ್. ರೇಷನ್​ ಕಾರ್ಡ್‌‌ನಲ್ಲಿ ಯಜಮಾನಿ ಎಂದು ನಮೂದು ಆಗಿರಬೇಕು. ಮನೆಯಲ್ಲಿ ಇಬ್ಬರು ಮಹಿಳೆ ಇದ್ದರೆ ಒಬ್ಬರಿಗಷ್ಟೇ ಹಣ. ಜೂನ್ 15ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಆಗಸ್ಟ್ 15ರಂದು ಫಲಾನುಭವಿಗಳ ಖಾತೆಗೆ 2 ಸಾವಿರ ಹಣ ಜಮೆ ಮಾಡಲು ನಿರ್ಧಾರ ಮಾಡಲಾಗಿದೆ. ಆಧಾರ್‌ ಕಾರ್ಡ್‌ ಬ್ಯಾಂಕ್ ಖಾತೆಗೆ ಜೋಡಣೆ ಆಗಿರುವುದು ಕಡ್ಡಾಯ. ಆದರೆ ಮನೆಯ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಹಾಗು ಯಜಮಾನಿ ಅಥವಾ ಪತಿ GST ರಿಟರ್ನ್ಸ್ ಸಲ್ಲಿಸುತ್ತಿದ್ದರೆ ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಯೋಜನೆ ಲಾಭ ಪಡೆಯಲು ಅರ್ಹರಲ್ಲ ಎಂದು ಹೇಳಲಾಗಿದೆ.

ರಾಜ್ಯ ಸರ್ಕಾರದ ನೋಟಿಫಿಕೇಷನ್​ನಲ್ಲಿ ಗೊಂದಲ ಏನಿದೆ..?

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎಲ್ಲರಿಗೂ ಬ್ಯಾಂಕ್​ ಅಕೌಂಟ್​ ಎಂದು ಜನಧನ್​ ಖಾತೆ ಮಾಡಿಸಿತ್ತು. ಆ ಬಳಿಕ ಟ್ಯಾಕ್ಸ್​ ಸ್ಲಾಬ್​ ಒಳಗೆ ಬಂದರೂ ಬಾರದಿದ್ದರೂ ಆದಾಯ ತೆರಿಗೆ (ITR) ಪಾವತಿಗೆ ಆದೇಶ ಮಾಡಿತ್ತು. ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬಾರದಿದ್ದರೆ ಕೇಂದ್ರ ಸರ್ಕಾರಕ್ಕೆ ಯಾವುದೇ ಆದಾಯ ತೆರಿಗೆ ಪಾವತಿ ಮಾಡುವಂತಿಲ್ಲ. ಎರಡ್ಮೂರು ಲಕ್ಷ ವೇತನ ಪಡೆಯುವ ವ್ಯಕ್ತಿ ಕೂಡ ಕಡ್ಡಾಯವಾಗಿ ITR ಸಲ್ಲಿಕೆ ಕಡ್ಡಾಯ ಮಾಡಿದ್ದಾರೆ. ಇದೀಗ ITR ಸಲ್ಲಿಕೆ ಮಾಡುವ ಎಲ್ಲರಿಗೂ 2 ಸಾವಿರ ಬರುವುದಿಲ್ಲವೋ..? ಅಥವಾ ಆದಾಯ ತೆರಿಗೆ ಕಟ್ಟುವ ಜನರಿಗೆ ಮಾತ್ರ ಸಿಗುವುದಿಲ್ಲವೋ ಅನ್ನೋ ಗೊಂದಲ ಸೃಷ್ಟಿಯಾಗಿದೆ.

ರಾಜ್ಯ ಸರ್ಕಾರದ ನೋಟಿಫಿಕೇಷನ್​ನಲ್ಲಿರುವ 2ನೇ ಗೊಂದಲ..!

ಪ್ರತಿ ಮನೆಯಲ್ಲೂ ರೇಷನ್​ ಕಾರ್ಡ್​ ಇರುತ್ತದೆ. ಕೆಲವು ಮನೆಗಳಲ್ಲಿ ಮಾತ್ರ ರೇಷನ್​ ಕಾರ್ಡ್​ ಮಹಿಳೆಯರ ಹೆಸರಿನಲ್ಲಿ ಇರುತ್ತದೆ. ಬಹುತೇಕ ಮನೆಗಳ ರೇಷನ್​ ಕಾರ್ಡ್​ ಮನೆ ಮಾಲೀಕ ಯಾರು ಇರುತ್ತಾರೋ ಅವರ ಹೆಸರಿನಲ್ಲೇ ಇರುವುದು ಸರ್ವೇ ಸಾಮಾನ್ಯ. ಒಂದು ವೇಳೆ ರೇಷನ್​ ಕಾರ್ಡ್​ನಲ್ಲಿ ಮಹಿಳೆಯ ಹೆಸರು ಮನೆಯ ಮಾಲಕಿ ಅಂತಾ ನಮೂದು ಆಗದಿದ್ದರೆ ಈ ಯೋಜನೆಯ ಲಾಭ ಪಡೆಯುವುದು ಹೇಗೆ..? ರೇಷನ್​ ಕಾರ್ಡ್​ನಲ್ಲಿ ತಿದ್ದುಪಡಿಗೆ ಅವಕಾಶ ಕೊಡಲಾಗುತ್ತಾ..? ಅಥವಾ ಕೇವಲ ಮಹಿಳೆಯೇ ಯಜಮಾನಿ ಎಂದು ನಮೂದು ಮಾಡಿರುವ ಕಾರ್ಡ್​ ಮಾಲೀಕರಿಗೆ ಮಾತ್ರವೇ ಲಾಭ ಸಿಗುತ್ತಾ ಅನ್ನೋ ಹೊಂದಲ ಮೂಡಿದೆ. ಈ ಬಗ್ಗೆ ಸರ್ಕಾರ ಉತ್ತರ ಕೊಡದೆ ನುಣುಚಿಕೊಲ್ಳುವ ಕೆಲಸ ಮಾಡುತ್ತಿದೆ.

ಉತ್ತರ ಕೇಳಿದಾಗ ಜಾರಿಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್​..

ಗೃಹಲಕ್ಷ್ಮಿಯೋಜನೆ ಗ್ಯಾರಂಟಿಗೆ ಹಾಕಿರುವ ಷರತ್ತು ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ ಜಾರಿಕೊಳ್ಳೋ ಉತ್ತರ ನೀಡಿದ್ದಾರೆ. ಸರ್ಕಾರ ನಡೆಸೋರು ನಾವು, ಒಬ್ಬರಿಗೆ ಒಂದು ರೂಪಾಯಿ ಕೊಡಬೇಕಾದ್ರೆ ಅಕೌಂಟ್ ಇರಬೇಕು. ಯಾರು ವೋಟರ್ ಲಿಸ್ಟ್ ಇಟ್ಟುಕೊಂಡಿದ್ದಾರೆ, ಯಾರು ವೋಟರ್, ಯಾರು ಆಧಾರ್ ಕಾರ್ಡ್ ಇಟ್ಟುಕೊಂಡಿದ್ದಾರೆ, ಎಲ್ಲವನ್ನೂ ನೋಡಬೇಕು. ಅವರಿಗೆ ಬ್ಯಾಂಕ್ ಅಕೌಂಟ್ ಇರಬೇಕು. ಬೇರೆ ಅವರ ಅಕೌಂಟ್ ಕೊಡೋಕೆ ಆಗಲ್ಲ. ಯಜಮಾನಿ ಯಾರು ಅಂತ ಅವರೇ ತೀರ್ಮಾನ ಮಾಡಬೇಕು, ನಮ್ಮ ಬಳಿಯೂ ಎಲ್ಲಾ ದಾಖಲೆಗಳು ಇವೆ ಎಂದಿದ್ದಾರೆ. ಮನೆ ಸಂಸಾರ ಯಾರು ನಡೆಸುತ್ತಾರೆ ಅಂತ ಅವರೇ ಹೇಳಬೇಕು. ಅವರ ಮನೆ ವಿಚಾರದಲ್ಲಿ ನಾವು ಮಧ್ಯ ಪ್ರವೇಶ ಮಾಡಲ್ಲ ಎಂದಿರುವ ಡಿಕೆ ಶಿವಕುಮಾರ್, ಒಂದು ಮನೆಗೆ ಒಂದು, ವೋಟ್​ರ್ ಲಿಸ್ಟ್​ನಲ್ಲಿ ಲೆಕ್ಕ ಇದೆ. ಫಸ್ಟ್ ನೇಮ್ ಕೊಡಬೇಕಾ, ಸೆಕೆಂಡ್ ನೇಮ್ ಕೋಡಬೇಕಾ..? ಹೆಣ್ಣುಮಕ್ಕಳು ತೀರ್ಮಾನ ಮಾಡಬೇಕು ಎಂದಿದ್ದಾರೆ.

ಐಟಿ ಸಲ್ಲಿಕೆ ಮಾಡುವ ಜನರಿಗೆ ಬೇಕಿಲ್ಲ – ಡಿಕೆ ಶಿವಕುಮಾರ್

ಐಟಿ ಕಟ್ಟೋರಿಗೆ ಗ್ಯಾರಂಟಿ ಇಲ್ಲ ಎಂಬ ಆದೇಶದ ಬಗ್ಗೆ ಕೇಳಿದ ಪ್ರಶ್ನೆಗೆ ಬಡವರಿಗೆ ಕೊಡಬೇಕು ಅಂತ ನಾವು ತೀರ್ಮಾನ ಮಾಡಿದ್ದು. ಐಟಿ ಕಟ್ಟೋರು ಯಾರು ಗ್ಯಾರಂಟಿ ಕೇಳಿಲ್ಲ. ಯಾರು ಬಂದು ಗ್ಯಾರಂಟಿ ಕೊಡಿ ಅಂತ ಕೇಳೋದಿಲ್ಲ. ಬಹಳ ಜನ ನಮಗೆ 2 ಸಾವಿರ ಬೇಡ ಎಂದು ಪತ್ರ ಬರೆದಿದ್ದಾರೆ. ಯಾರು ಪತ್ರ ಬರೆದಿದ್ದಾರೆ ಅಂತ ನಾನು ಹೇಳೋಕೆ ಅಗಲ್ಲ ಎಂದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್. ಇನ್ನು ಗ್ಯಾರಂಟಿ ಘೋಷಣೆ ಮಾಡುವಾಗ ಕಂಡಿಷನ್ ಇರಲಿಲ್ಲ, ಈಗ ಷರತ್ತುಗಳು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಡಿಕೆ ಶಿವಕುಮಾರ್, ಇದು ಸರ್ಕಾರ, ಸರ್ಕಾರ ನಡೆಸೋದು ನಾವು. ನಾವು ಏನ್ ಕೊಡಬೇಕು ಅಂತ ನಾವು ಹೇಳಿದ್ದೇವೆ. ಜನ ಕೇಳಿದ್ದಾರೆ ಅದನ್ನು ನಾವು ಕೊಡ್ತೇವೆ. ಐಟಿ ಕಟ್ಟೋರು ಯಾರು ನಮಗೆ ಬೇಕು ಅಂತ ಕೇಳಿಲ್ಲ. ಸರ್ಕಾರಿ ನೌಕರರಿಗೆ ಗ್ಯಾರಂಟಿ ಅನ್ವಯ ಆಗುತ್ತಾ ಎಂಬ ಪ್ರಶ್ನೆಗೆ ನಮಗೆ ಅವೆಲ್ಲ ಗೊತ್ತಿದೆ ಬಿಡಿ ಎಂದು ಸಾಗ ಹಾಕಿದ್ದಾರೆ. ಒಟ್ಟಾರೆ ಒಂದೆರಡು ಗೊಂದಲಗಳನ್ನು ಪರಿಹರಿಸಿದರೆ ಸರ್ಕಾರದ ಗ್ಯಾರಂಟಿ ಜಾರಿಯಾಗೋದು ನಿಶ್ಚಿತ.

ಕೃಷ್ಣಮಣಿ

Tags: BJPGriha JyotiGrilahakshmiguarantee cardಕಾಂಗ್ರೆಸ್​ಗೃಹಜ್ಯೋತಿಗೃಹಲಕ್ಷ್ಮೀಗ್ಯಾರಂಟಿ ಕಾರ್ಡ್ಬಿಜೆಪಿ
Previous Post

ಗಾಂಜಾ ಮಾರಾಟ : ಮೂವರು ಮಹಿಳಾ ಡ್ರಗ್​ ಪೆಡ್ಲರ್​ಗಳ ಬಂಧನ

Next Post

ವಿದ್ಯಾರ್ಥಿನಿಗೆ ಕರೆ ಮಾಡಿ ಮಂಚಕ್ಕೆ ಕರೆದ ಅತಿಥಿ ಶಿಕ್ಷಕ : ಆಡಿಯೋ ವೈರಲ್​

Related Posts

Top Story

ಮಂಡ್ಯ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್..!!

by ಪ್ರತಿಧ್ವನಿ
November 11, 2025
0

ಅಸಂಘಟಿತ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾರ್ಮಿಕರಿಗೆ ಸೌಲಭ್ಯ, ಅನುಕೂಲತೆಗಳನ್ನು ತಿಳಿಸಲು ಪ್ರತಿ ಜಿಲ್ಲೆಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ರಾಜ್ಯದಲ್ಲಿನ ಪ್ರತಿಯೊಬ್ಬ ಕಾರ್ಮಿಕರು...

Read moreDetails

Delhi: ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಹೈ ಅಲರ್ಟ್ ಘೋಷಣೆ..

November 10, 2025
ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

November 7, 2025

Dinesh G Rao: ಬ್ರಾಹ್ಮಣರ ಸಮಸ್ಯೆ ಪರಿಹರಿಸಲು ನಾವೆಲ್ಲ ಒಗ್ಗಟ್ಟಾಗಿ ಪ್ರಯತ್ನಿಸೋಣ : ದಿನೇಶ್ ಗುಂಡೂರಾವ್

November 7, 2025
DK Shivakumar: ಜಲ ಯೋಜನೆಗಳ ಬಗ್ಗೆ ಒಂದು ದಿನವೂ ಬಾಯಿ ಬಿಡದ ರಾಜ್ಯದ ಬಿಜೆಪಿ ಸಂಸದರು..

DK Shivakumar: ಜಲ ಯೋಜನೆಗಳ ಬಗ್ಗೆ ಒಂದು ದಿನವೂ ಬಾಯಿ ಬಿಡದ ರಾಜ್ಯದ ಬಿಜೆಪಿ ಸಂಸದರು..

November 6, 2025
Next Post
ವಿದ್ಯಾರ್ಥಿನಿಗೆ ಕರೆ ಮಾಡಿ ಮಂಚಕ್ಕೆ ಕರೆದ ಅತಿಥಿ ಶಿಕ್ಷಕ : ಆಡಿಯೋ ವೈರಲ್​

ವಿದ್ಯಾರ್ಥಿನಿಗೆ ಕರೆ ಮಾಡಿ ಮಂಚಕ್ಕೆ ಕರೆದ ಅತಿಥಿ ಶಿಕ್ಷಕ : ಆಡಿಯೋ ವೈರಲ್​

Please login to join discussion

Recent News

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ
Top Story

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

by ಪ್ರತಿಧ್ವನಿ
November 14, 2025
ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌
Top Story

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

by ಪ್ರತಿಧ್ವನಿ
November 14, 2025
ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ
Top Story

ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

by ಪ್ರತಿಧ್ವನಿ
November 14, 2025
ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು
Top Story

ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು

by ಪ್ರತಿಧ್ವನಿ
November 14, 2025
Children’s Day 2025: ಮಕ್ಕಳು-ದಿನಾಚರಣೆ ಮತ್ತು ಸೂಕ್ಷ್ಮ ಸಂವೇದನೆ
Top Story

Children’s Day 2025: ಮಕ್ಕಳು-ದಿನಾಚರಣೆ ಮತ್ತು ಸೂಕ್ಷ್ಮ ಸಂವೇದನೆ

by ನಾ ದಿವಾಕರ
November 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

November 14, 2025
ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

November 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada