• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಟೆರರ್ ಗ್ರೂಪ್ ಹಣೆಪಟ್ಟಿ ಕಳಚುತ್ತಲೇ ಭಾರತದ ವಿರುದ್ಧ ಯೂ ಟರ್ನ್ ಹೊಡೆದ ತಾಲಿಬಾನ್ !

Shivakumar by Shivakumar
September 4, 2021
in ದೇಶ, ವಿದೇಶ
0
ಟೆರರ್ ಗ್ರೂಪ್ ಹಣೆಪಟ್ಟಿ ಕಳಚುತ್ತಲೇ ಭಾರತದ ವಿರುದ್ಧ ಯೂ ಟರ್ನ್ ಹೊಡೆದ ತಾಲಿಬಾನ್ !
Share on WhatsAppShare on FacebookShare on Telegram
ADVERTISEMENT

ಆಫ್ಘಾನಿಸ್ತಾನದ ನೆಲವನ್ನು ತನ್ನ ವಿರುದ್ಧದ  ಭಯೋತ್ಪಾದನಾ ಚಟುವಟಿಕೆಗಳ ನೆಲೆಯಾಗಿ ಬಳಸಿಕೊಳ್ಳಬಹುದು ಎಂಬ ಭಾರತದ ಆತಂಕದ ನಡುವೆಯೇ, ತಾಲಿಬಾನ್ ವಕ್ತಾರರಿಂದ ಆಘಾತಕಾರಿ ಹೇಳಿಕೆ ಹೊರಬಿದ್ದಿದೆ.

ಕಾಶ್ಮೀರವೂ ಸೇರಿದಂತೆ ಜಗತ್ತಿನ ಯಾವುದೇ ಮೂಲೆಯ ಮುಸ್ಲಿಮರ ಪರ ದನಿ ಎತ್ತುವ ಹಕ್ಕು ತನಗಿದೆ ಎಂದು ಆಫ್ಘಾನಿಸ್ತಾನದ ಅಧಿಕಾರ ಹಿಡಿದಿರುವ ತಾಲಿಬಾನ್ ಭಯೋತ್ಪಾದಕ ಸಂಘಟನೆಯ ವಕ್ತಾರ ಸುಹೇಲ್ ಶಹೀನ್ ಶುಕ್ರವಾರ ಹೇಳಿದ್ದಾರೆ. ಬಿಬಿಸಿ ಉರ್ದು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದು, ಇದೀಗ ಭಾರತ ತಾಲಿಬಾನ್ ವಿಷಯದಲ್ಲಿ ಈವರೆಗೆ ಹೊಂದಿದ್ದ ಅನುಮಾನ ನಿಜವಾಗುವ ಸೂಚನೆ ಸಿಕ್ಕಂತಾಗಿದೆ.

ಮುಸ್ಲಿಮರಾಗಿ ನಾವು ಅದು ಭಾರತವಿರಬಹುದು, ಕಾಶ್ಮೀರವಿರಬಹುದು ಅಥವಾ ಜಗತ್ತಿನ ಯಾವುದೇ ಮೂಲೆಯ ಮುಸ್ಲಿಮರ ಪರ ದನಿ ಎತ್ತುವ ಹಕ್ಕು ನಮಗಿದೆ. ಹಾಗಂತ ನಾವು ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವುದಿಲ್ಲ. ಮುಸ್ಲಿಮರು ನಿಮ್ಮ ದೇಶದ ನಾಗರಿಕರು. ನಿಮ್ಮದೇ ಕಾನೂನು-ಕಾಯ್ದೆಗಳ ಪ್ರಕಾರ ಅವರಿಗೆ ಎಲ್ಲರಂತೆ ಬದುಕುವ ಹಕ್ಕಿದೆ. ಅವರ ಹಕ್ಕುಗಳನ್ನು ಗೌರವಿಸುವುದು ನಿಮ್ಮ ಹೊಣೆ ಎಂಬುದನ್ನು ನಾವು ಆಯಾ ರಾಷ್ಟ್ರಗಳಿಗೆ ಹೇಳುತ್ತೇವೆ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾರೆ.

ಮಂಗಳವಾರ ತಾನೆ, ಒಂದು ಕಡೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಗಸ್ಟ್ ತಿಂಗಳ ಮುಖ್ಯಸ್ಥನಾಗಿ ಭಾರತ, ತಾಲಿಬಾನ್ ಸಂಘಟನೆಯ ಮೇಲಿದ್ದ ‘ಘೋಷಿತ ಭಯೋತ್ಪಾದಕ ಸಂಘಟನೆ’ ಎಂಬ ಹಣೆಪಟ್ಟಿ ತೆಗೆಯಲು ಮುಂದಾಳತ್ವ ವಹಿಸಿತ್ತು. ಭಾರತದ ನೇತೃತ್ವದಲ್ಲಿಯೇ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳ ಪೈಕಿ ರಷ್ಯಾ ಮತ್ತು ಚೀನಾದ ಹೊರತಾಗಿಯೂ, ಬ್ರಿಟನ್, ಫ್ರಾನ್ಸ್, ಅಮೆರಿಕ ಮತ್ತಿತರ 13 ರಾಷ್ಟ್ರಗಳ ಬೆಂಬಲದೊಂದಿಗೆ ತಾಲಿಬಾನ್ ವಿರುದ್ಧದ ಹಣೆಪಟ್ಟಿ ತೆಗೆದು, ಆಫ್ಘಾನಿಸ್ತಾನದ ಅಧಿಕೃತ ಪ್ರಭುತ್ವದ ಮಾನ್ಯತೆ ನೀಡುವ ನಿರ್ಣಯ ಕೈಗೊಳ್ಳಲಾಗಿತ್ತು. ಮತ್ತೊಂದು ಕಡೆ ಅದೇ ದಿನ ದೋಹಾದಲ್ಲಿ ಕತಾರ್ ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ತಾಲಿಬಾನ್ ರಾಜಕೀಯ ಕಚೇರಿಯಲ್ಲಿ ಅದರ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ತೇನ್ಜಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ವಿಶ್ವಸಂಸ್ಥೆಯ  ನಿರ್ಣಯ ಮತ್ತು ದೋಹಾ ಮಾತುಕತೆಗಳೆರಡಲ್ಲೂ, ಮುಖ್ಯವಾಗಿ ಆಫ್ಘನ್ ನೆಲದಲ್ಲಿ ಯಾವುದೇ ಭಯೋತ್ಪಾದಕ ಸಂಘಟನೆಗಳಿಗೆ ನೆಲೆ ಒದಗಿಸಬಾರದು ಮತ್ತು ಭಾರತವೂ ಸೇರಿದಂತೆ ಯಾವುದೇ ರಾಷ್ಟ್ರದ ಆಂತರಿಕ ವಿಷಯಗಳಲ್ಲಿ ತಲೆಹಾಕುತ್ತಿರುವ ಯಾವುದೇ ಸಂಘಟನೆಗಳಿಗೆ ತಾಲಿಬಾನ್ ಬೆಂಬಲ ನೀಡಬಾರದು ಎಂಬುದನ್ನು ಮುಖ್ಯವಾಗಿ ಪ್ರಸ್ತಾಪಿಸಲಾಗಿತ್ತು.

ಆದರೆ, ಅತ್ತ ವಿಶ್ವಸಂಸ್ಥೆಯ ಅಧಿಕೃತ ಭಯೋತ್ಪಾದಕ ಸಂಘಟನೆ ಎಂಬ ಹಣೆಪಟ್ಟಿ ಕಳಚಿದ ಮೂರೇ ದಿನದಲ್ಲಿ ತಾಲಿಬಾನ್ ರಾಗ ಬದಲಾಗಿದೆ. ಅದರಲ್ಲೂ ಆಗಸ್ಟ್ 15ರಂದು ಆಫ್ಘನ್ ಪ್ರಜಾತಂತ್ರ ಸರ್ಕಾರದ ವಿರುದ್ಧ ಬಂಡಾಯ ಸಾರಿ ಅದನ್ನು ಉರುಳಿಸಿದ ಬಳಿಕ ಕೆಲವೇ ದಿನಗಳಲ್ಲಿ ತಾಲಿಬಾನ್ ಅತ್ಯುನ್ನತ ನಾಯಕರು, ಕಾಶ್ಮೀರ ಸಮಸ್ಯೆ ಭಾರತದ ಆಂತರಿಕ ವಿಚಾರ. ಅದನ್ನು ಪಾಕಿಸ್ತಾನ ಮತ್ತು ಭಾರತ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ತಾವು ಆ ವಿಚಾರದಲ್ಲಿ ತಲೆಹಾಕುವುದಿಲ್ಲ ಎಂದು ಹೇಳಿದ ಬಳಿಕವೂ, ಇದೀಗ ತಾಲಿಬಾನ್ ಕಾಶ್ಮೀರದ ವಿಷಯದಲ್ಲಿ ಯೂಟರ್ನ್ ಹೊಡೆದಿದೆ.

ತಾಲಿಬಾನ್‌ ವಿರುದ್ಧ ಅಫ್ಘನ್‌ ನಾಗರಿಕರ ಪ್ರತಿಭಟನೆ Afghanistan  Taliban

ಕಟ್ಟಾ ಭಯೋತ್ಪಾದಕ ಸಂಘಟನೆಯೊಂದು ಒಂದು ದೇಶದ ಸಂಪೂರ್ಣ ಅಧಿಕಾರ ಹಿಡಿದಿರುವುದು ಸಹಜವಾಗೇ ದಕ್ಷಿಣ ಏಷ್ಯಾದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈಗಾಗಲೇ ಆಫ್ಘನ್ ನೆಲದಲ್ಲಿ ಬೇರುಬಿಟ್ಟಿರುವ ಐಎಸ್ ಐಎಸ್, ಅಲ್ ಖೈದಾ ಸಂಘಟನೆಗಳೊಂದಿಗೆ, ಸ್ವತಃ ತಾಲಿಬಾನಿಗಳೊಂದಿಗೆ ಪಾಲುದಾರನಾಗಿರುವ ಹಕ್ಕನಿ ಗುಂಪಿನ ಕಾರಣಕ್ಕೂ ಈ ಆತಂಕ ಸಹಜವಾಗಿತ್ತು. ಹಾಗೇ ಸುನ್ನಿ ಮತ್ತು ವಹಾಬಿ ಗುಂಪುಗಳು ಕೂಡ ತಾಲಿಬಾನ್ ನಂಟಿನ ಮೂಲಕ ಆಘ್ಫಾನಿಸ್ತಾನವನ್ನು ತಮ್ಮ ಭಯೋತ್ಪಾದನಾ ಚಟುವಟಿಕೆಗಳ ಕಾರಸ್ಥಾನವಾಗಿಸಿಕೊಳ್ಳಬಹುದು ಎಂಬ ಆತಂಕವೂ ಇದೆ. ಜೊತೆ ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಪಾಕಿಸ್ತಾನದ ಐಎಸ್ ಐ ಬೆಂಬಲಿತ ಜೈಷ್ ಎ ಮೊಹಮ್ಮದ್, ಲಷ್ಕರ್ ಮುಂತಾದ ಭಯೋತ್ಪಾದನಾ ಗುಂಪುಗಳು ಕೂಡ ಆಫ್ಘನ್ ನೆಲದಲ್ಲಿ ತಳವೂರಿ, ಭಾರತದ ಮೇಲಿನ ದಾಳಿ ತೀವ್ರಗೊಳಿಸಬಹುದು ಎಂಬುದು ಭಾರತದ ಮುಖ್ಯ ಆತಂಕವಾಗಿತ್ತು.

ಇಂತಹ ಹಿನ್ನೆಲೆಯಲ್ಲಿಯೇ ತಾಲಿಬಾನ್ ವಿಷಯದಲ್ಲಿ ತತಕ್ಷಣಕ್ಕೇ ಯಾವುದೇ ನಿಲುವಿಗೆ ಬರುವುದು ಭಾರತದ ಪಾಲಿಗೆ ನುಂಗಲಾರದ ತುಪ್ಪದಂತಾಗಿತ್ತು. ಅಧಿಕೃತವಾಗಿ ತಾಲಿಬಾನನನ್ನು ಆಫ್ಘನ್ ಪ್ರಭುತ್ವ ಎಂದು ಒಪ್ಪಿಕೊಂಡು ಅದರೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದುವುದೇ ಅಥವಾ ಅದನ್ನು ಸಂಪೂರ್ಣ ಹೊರಗಿಟ್ಟು ಆ ದೇಶದಲ್ಲಿ ತಾನು ಮಾಡಿರುವ ಸಾವಿರಾರು ಕೋಟಿ ಹೂಡಿಕೆಯನ್ನು ನೀರಿನಲ್ಲಿ ಹೋಮ ಎಂದು ಕೈಬಿಡುವುದೇ ಎಂಬ ಗೊಂದಲದಲ್ಲಿತ್ತು. ಅಂತಹ ಬಿಕ್ಕಟ್ಟಿನ ಕಾರಣಕ್ಕೇ ಈ ವಿಷಯ ಮೋದಿ ಅವಧಿಯ ಏಳು ವರ್ಷಗಳಲ್ಲೇ ಅತಿ ಕಠಿಣ ರಾಜತಾಂತ್ರಿಕ ಸಮಸ್ಯೆಯಾಗಿ ಕಾಡಿತ್ತು. ಆರೇಳು ತಿಂಗಳುಗಳಿಂದಲೇ ತಾಲಿಬಾನ್ ಜೊತೆ ತೆರೆಮರೆಯ ಅನಧಿಕೃತ ಮಾತುಕತೆಗಳನ್ನು ಮೋದಿ ಸರ್ಕಾರ ನಡೆಸಿತ್ತು ಎಂಬ ವರದಿಗಳಿದ್ದರೂ, ಅಧಿಕೃತ ಮಾತುಕತೆಗಳು ನಡೆದಿರಲಿಲ್ಲ. ಕೊನೆಗೂ ಅಳೆದು ಸುರಿದು ಮಂಗಳವಾರ ಮೊದಲ ಬಾರಿಗೆ ದೋಹಾದಲ್ಲಿ ಅಧಿಕೃತ ಮಾತುಕತೆ ನಡೆಸಲಾಗಿತ್ತು.

ತಾಲಿಬಾನ್‌  ಆಕ್ರಮಣದಲ್ಲಿ ಅಫ್ಘಾನಿಸ್ಥಾನ : ಮನಕಲಕುವ ದೃಶ್ಯಗಳು Afghanistan Taliban Attack

ಆದರೆ, ಆ ಮಾತುಕತೆಗಳ ಬೆನ್ನಲ್ಲೇ ಇದೀಗ ತಾಲಿಬಾನ್ ಕಾಶ್ಮೀರದ ಮುಸ್ಲಿಮರ ಪರ ದನಿ ಎತ್ತುವುದಾಗಿ ಹೇಳಿದ್ದು, ಆ ಹೇಳಿಕೆಯ ವ್ಯಾಪ್ತಿ ಮತ್ತು ವಿಸ್ತಾರ ಎಷ್ಟು? ಅದು ಕಾಶ್ಮೀರದ ಮುಸ್ಲಿಮರ ಮಾನವ ಹಕ್ಕುಗಳ ವಿಷಯಕ್ಕೆ ಮಾತ್ರ ಸೀಮಿತವೇ ? ಅಥವಾ ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವ ಮಟ್ಟಿಗೆ, ಅಥವಾ ಪಾಕಿಸ್ತಾನದ ವಾದಗಳಿಗೆ ಬೆಂಬಲ ನೀಡುವ ಮಟ್ಟಿಗೆ ವಿಸ್ತರಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಸದ್ಯಕ್ಕಂತೂ ಅದು ಭಾರತದ ಆಂತರಿಕ ವಿಷಯ ಎಂಬ ಹೇಳಿಕೆಯ ಕೆಲವೇ ದಿನಗಳಲ್ಲೇ, ಕಾಶ್ಮೀರದ ವಿಷಯದಲ್ಲಿ ದನಿ ಎತ್ತುವುದಾಗಿ ಹೇಳಿಕೆ ಹೊರಬಿದ್ದಿದೆ.

ತಾಲಿಬಾನ್ ಭಾರತದ ವಿಷಯದಲ್ಲಿ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಆತಂಕವಿತ್ತೋ, ಅದೇ ದಿಕ್ಕಿನಲ್ಲಿ ತಾಲಿಬಾನ್ ಸಾಗುತ್ತಿರುವ ಸೂಚನೆಯಂತೂ ಈ ಹೇಳಿಕೆಯಿಂದಾಗಿ ಸಿಕ್ಕಂತಾಗಿದೆ. ಹಾಗಾಗಿ ಇದೀಗ ಭಾರತ, ತಾಲಿಬಾನ್ ನ ಈ ಹೊಸ ವರಸೆಗೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ತಾಲಿಬಾನ್‌  ಆಕ್ರಮಣದಲ್ಲಿ ಅಫ್ಘಾನಿಸ್ಥಾನ : ಮನಕಲಕುವ ದೃಶ್ಯಗಳು Afghanistan Taliban Attack
Tags: ಅಲ್ ಖೈದಾಆಫ್ಘಾನಿಸ್ತಾನಐಎಸ್ ಐಎಸ್ಕಾಶ್ಮೀರ ಸಮಸ್ಯೆತಾಲಿಬಾನ್ದೋಹಾನರೇಂದ್ರ ಮೋದಿಭದ್ರತಾ ಮಂಡಳಿಭಾರತವಿಶ್ವಸಂಸ್ಥೆಹಕ್ಕನಿ ಗುಂಪು
Previous Post

ಆಗಸ್ಟ್ ತಿಂಗಳೊಂದರಲ್ಲೇ 15 ಲಕ್ಷಕ್ಕೂ ಹೆಚ್ಚು ಜನ ನಿರುದ್ಯೋಗಿಗಳು: ರಾಹುಲ್ ಗಾಂಧಿ ಆಕ್ರೋಶ

Next Post

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್; ಇರಾನ್ ಮಾದರಿ ಅಧ್ಯಕ್ಷೀಯ ಆಡಳಿತ ಜಾರಿಗೆ ಚಿಂತನೆ

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್; ಇರಾನ್ ಮಾದರಿ ಅಧ್ಯಕ್ಷೀಯ ಆಡಳಿತ ಜಾರಿಗೆ ಚಿಂತನೆ

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್; ಇರಾನ್ ಮಾದರಿ ಅಧ್ಯಕ್ಷೀಯ ಆಡಳಿತ ಜಾರಿಗೆ ಚಿಂತನೆ

Please login to join discussion

Recent News

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?
Top Story

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

by ಪ್ರತಿಧ್ವನಿ
December 14, 2025
ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್
Top Story

ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 14, 2025
ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ
Top Story

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

by ಪ್ರತಿಧ್ವನಿ
December 14, 2025
ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ
Top Story

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

by ಪ್ರತಿಧ್ವನಿ
December 14, 2025
Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!
Top Story

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

by ಪ್ರತಿಧ್ವನಿ
December 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

December 14, 2025
ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

December 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada