ಕರೋನಾ ವೈರಸ್ನ ಎರಡನೇ ಅಲೆ ಭಾರತಾದ್ಯಂತ ಹಾನಿ ಉಂಟುಮಾಡಿದೆ. ಕರೋನಾ ಪ್ರಕರಣಗಳು ಪ್ರತಿದಿನ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ. ಈಗ ತಜ್ಞರು ಈ ಎರಡನೇ ಅಲೆ ಎಷ್ಟು ತಿಂಗಳುಗಳ ಕಾಲ ಮುಂದುವರಿಯುತ್ತದೆ ಮತ್ತು ಪ್ರಕರಣಗಳ ಸಂಖ್ಯೆ ಗರಿಷ್ಠ ಎಷ್ಟಿರಬಹುದು ಎಂದು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ವಿಜ್ಞಾನಿಗಳು ಗಣಿತ ಲೆಕ್ಕಾಚಾರದ ಆಧಾರದ ಮೇಲೆ ಅಂದಾಜು ಮಾಡಿದ್ದು, ಕರೋನಾದ ಎರಡನೇ ಅಲೆ ಮೇ 11 ರಿಂದ 15 ರ ನಡುವೆ ಗರಿಷ್ಠ ಮಟ್ಟವನ್ನು ತಲುಪಬಹುದು ಮತ್ತು ನಂತರ ಒಟ್ಟು ಸಕ್ರಿಯ ಪ್ರಕರಣಗಳು ಸುಮಾರು 30 ರಿಂದ 35 ಲಕ್ಷಗಳು ಬರಬಹುದು ಎಂದು ಅಂದಾಜಿಸಿದ್ದಾರೆ.
![](https://pratidhvani.com/wp-content/uploads/2021/04/Support-QR-1-1024x1024.jpg)
ಸುಮಾರು ಎರಡು-ಮೂರು ವಾರಗಳವರೆಗೆ ದಾಖಲೆಯ ಪ್ರಕರಣಗಳು ದಾಖಲಾಗುವುದು ಸ್ಪಷ್ಟವಾಗಿದೆ. ಎರಡನೇ ಅಲೆಯು ಮೊದಲ ಅಲೆಗಿಂತ ಮೂರು ಪಟ್ಟು ಹೆಚ್ಚು ಮಾರಕವಾಗಿರುತ್ತದೆ. ಮೊದಲ ಅಲೆಯಲ್ಲಿ 2020ರ ಸೆಪ್ಟೆಂಬರ್ 19 ರಂದು ಗರಿಷ್ಠ ಮಟ್ಟ ಮುಟ್ಟಿತ್ತು. ಆಗ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇದ್ದವು. ಮೊದಲ ಅಲೆಗಿನ್ನ ಮೂರು ಪಟ್ಟು ಹೆಚ್ಚು ಮಾರಕ ಎಂದರೆ 30 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಎರಡನೇ ಅಲೆಯಲ್ಲಿ ದಾಖಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
![](https://pratidhvani.com/wp-content/uploads/2021/04/covid-covid-1024x683.jpg)
ಅಂದಾಜಿನ ಪ್ರಕಾರ, ದೆಹಲಿ, ರಾಜಸ್ಥಾನ, ಹರಿಯಾಣ, ತೆಲಂಗಾಣದಲ್ಲಿ ದಾಖಲೆಯ ಪ್ರಕರಣಗಳು ಏಪ್ರಿಲ್ 25-30ರೊಳಗೆ ಬರಬಹುದು. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ಮೇ 1-6 ವೇಳೆಗೆ ಗರಿಷ್ಠ ಪ್ರಕರಣಗಳು ಸಂಭವಿಸಬಹುದು, ತಮಿಳುನಾಡು ಮತ್ತು ಆಂಧ್ರಪ್ರದೇಶವು ಮೇ 6-10ರ ವೇಳೆಗೆ ಗರಿಷ್ಠ ಪ್ರಕರಣಗಳು ಹೊಂದುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಂಕಿಅಂಶಗಳನ್ನು ದಿನನಿತ್ಯ ಬರುತ್ತಿರುವ ಪ್ರಕರಣ ಮತ್ತು ಕರೋನ ಟೆಸ್ಟ್ ಮತ್ತು ಡೆತ್ ಎನ್ಟಿಮೇಟ್ ಆಧಾರದ ಮೇಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
![](https://pratidhvani.com/wp-content/uploads/2021/04/covid-pti1-1619152761.jpg)
ಮಹಾರಾಷ್ಟ್ರ ಮತ್ತು ಛತ್ತೀಸ್ಗಡ್ ರಾಜ್ಯಗಳು ಈಗಾಗಲೇ ಗರಿಷ್ಠ ಹಂತವನ್ನು ತಲುಪಿದೆ ಎಂದು ಅಂದಾಜಿಸಲಾಗಿದೆ. ಅದೇ ಸಮಯದಲ್ಲಿ, ಏಪ್ರಿಲ್ 25 ರ ಹೊತ್ತಿಗೆ ಬಿಹಾರದಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗುತ್ತವೇ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶ, ಗೋವಾ, ಗುಜರಾತ್ ಪ್ರಕರಣಗಳನ್ನೂ ವಿಶ್ಲೇಷಿಸಲಾಗುತ್ತಿದ್ದು ಅದರ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ, ಈ ಎಲ್ಲಾ ರಾಜ್ಯಗಳ ಗರಿಷ್ಠ ಅಂದಾಜುಗಳನ್ನು ತಲುಪಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಕರೋನ ಹೆಚ್ಚಾಗುತ್ತಿರುವ ಕುರಿತು ಕೆಲಸ ಮಾಡುತ್ತಿರುವ ಕಾನ್ಪುರದ ಐಐಟಿ ಮನೀಂದ್ರ ಅಗರ್ವಾಲ್ ಪ್ರಕಾರ, ಪ್ರಕರಣಗ ಗರಿಷ್ಠ ಮಟ್ಟವನ್ನು ನಾವು ಎರಡು ರೀತಿಯ ಅರ್ಥಮಾಡಿಕೊಳ್ಳಬೇಕು ಒಂದು ದೈನಂದಿನ ಪ್ರಕರಣಗಳ ಸಂಖ್ಯೆ ಮತ್ತು ಇನ್ನೊಂದು ಸಕ್ರಿಯ ಪ್ರಕರಣ ಸಂಖ್ಯೆ ಎಂದು ತಿಳಿಸಿದ್ದಾರೆ.
ಗರಿಷ್ಠ ಮಟ್ಟ ತಲುಪುತ್ತದೆ ಎಂದು ಮೊದಲೇ ಅಂದಾಜಿಸಲಾಗಿತ್ತು.
ದೇಶದಲ್ಲಿ ಏಪ್ರಿಲ್ 15 ರಿಂದ 20ರ ನಡುವೆ ಸಕ್ರಿಯ ಪ್ರಕರಣಗಳು ಗರಿಷ್ಠ ಮಟ್ಟ ತಲುಪುತ್ತದೆ ಎಂದು ಏಪ್ರಿಲ್ 1ರಂದೆ ಅಂದಾಜಿಸಲಾಗಿತ್ತು ಮತ್ತು ಒಟ್ಟು ಸಕ್ರಿಯ ಪ್ರಕರಣ ಸುಮಾರು 1 ಮಿಲಿಯನ್ ಆಗಿರಬಹುದು ಎಂದು ತಿಳಿಸಿದ್ದರು.
ಈ ಕರೋನ ಎರಡನೇ ಅಲೆ ತುಂಬಾ ಅಪಾಯಕಾರಿಯಾಗಿದ್ದು ರಾಜ್ಯಗಳು ಸಕ್ರಿಯ ಹೊಸ ಡೇಟಾವನ್ನು ಬಿಡುಗಡೆ ಮಾಡುತ್ತಲೇ ಇರುವುದರಿಂದ ನಾವು ಗರಿಷ್ಠ ಮತ್ತು ಕನಿಷ್ಟ ಮಟ್ಟವನ್ನು ಅಂದಾಜಿಸಲು ಕಷ್ಟವಾಗುತ್ತಿದೆ ಎಂದು ಮನೀಂದ್ರ ಅಗರ್ವಾಲ್ ತಿಳಿಸಿದ್ದಾರೆ.
![](https://pratidhvani.com/wp-content/uploads/2021/03/tpfi.jpg)
ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯ ದೇಶದಲ್ಲಿ, ವಿಭಿನ್ನ ರೀತಿಯ ಡೇಟಾಗಳನ್ನು ಹೊರಬರುತ್ ಆದ್ದರಿಂದ ವಿಜ್ಞಾನಿಗಳು ಸಹ ತಮ್ಮ ಮಿತಿಗಳನ್ನು ಹೊಂದಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಆದರೆ ಲಭ್ಯವಿರುವ ಡೇಟಾದ ಆಧಾರದ ಮೇಲೆ ನಾವು ನಮ್ಮ ಸಲಹೆಗಳನ್ನು ಮುಂದುವರಿಸುತ್ತೇವೆ. ಈ ಅಂದಾಜಿನ ಡೇಟಾದಿಂದಲೇ ನೀತಿ ತಯಾರಕರು ತಮ್ಮ ಸಿದ್ಧತೆಗಳನ್ನು ಮಾಡಲು ಡೇಟಾವನ್ನು ಪಡೆಯುತ್ತಾರೆ ಎಂದು ತಿಳಿಸಿದ್ದಾರೆ