ಮೈಸೂರು : ಮಾ.24: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ ಸದ್ಯಸತ್ವ ರದ್ದು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅಧಿಕಾರಕ್ಕೆ ಬಂದ ಮೇಲೆ ಜನರ ಹಕ್ಕುಗಳನ್ನು ಧಮನ ಮಾಡಲಾಗುತ್ತಿದೆ. ವಿಪಕ್ಷಗಳ ಹಕ್ಕನ್ನು ಮೊಟ್ಟಕುಗೊಳಿಸಲಾಗುತ್ತಿದೆ. ಅದಕ್ಕೆ ಸಾಕ್ಷಿ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ರದ್ದು ಮಾಡಿರುವುದು ಎಂದು ಶಾಸಕ ಡಾ.ಯತೀಂದ್ರ ಅವರು ಕೇಂದ್ರ ಮತ್ತು ರಾಜ್ಯಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ರು.

ರಾಷ್ಟ್ರೀಯ ಪಕ್ಷದ ವಿಪಕ್ಷ ನಾಯಕರಿಗೆ ಬಿಜೆಪಿ ಸರ್ಕಾರ ಬಂದ ನಂತರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ದೇಶಕ್ಕೆ ಒಳ್ಳೆಯದಾಗಲ್ಲ. ಆತುರಾತುರವಾಗಿ ಸದ್ಯಸತ್ವ ರದ್ದಾಗಿದೆ. ರಾಹುಲ್ ಗಾಂಧಿ ಸಂಸತ್ ನಲ್ಲಿ ಪ್ರಧಾನಿ ಮೋದಿ ಅವರಿಗೂ ಅದಾನಿ ಅವರಿಗೆ ಇರುವ ಸಂಬಂಧವನ್ನು ಜನರಿಗೆ ತಿಳಿಸುತ್ತಾರೆಂಬ ಭಯದಿಂದ ಈ ರೀತಿ ಮಾಡಿದ್ದಾರೆ, ಇದು ಹೇಡಿಗಳ ಸರ್ಕಾರ. ಕಾನೂನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಧಿಕಾರದಲ್ಲಿ ಪ್ರಧಾನಿ ಮೋದಿ ಇರುವುದಿರಿಂದ ಟೀಕೆ ಮಾಡಿದ್ದಾರೆ. ರಾಷ್ಟ್ರದ ಹಿತ ದೃಷ್ಟಿಯಿಂದ ಟೀಕೆ ಮಾಡಿದ್ದಾರೆ. ಪ್ರಜಾಪ್ರಭುತ್ವ ನಿಧಾನವಾಗಿ ಸರ್ವಾಧಿಕಾರಿ ಆಗುತ್ತಿದೆ..ಅದಾನಿ ಜೊತೆ ಸೇರಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಇದು ರಾಹುಲ್ ಗಾಂಧಿ ಮೂಲಕ ಜನರಿಗೆ ಗೊತ್ತಾಗುತ್ತದೆ ಅಂಥಾ ಈ ರೀತಿ ಮಾಡುತ್ತಿದ್ದು, ರಾಜಕೀಯವಾಗಿ ಈ ಬಗ್ಗೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದ್ರು.
ಸಿದ್ದರಾಮಯ್ಯ ಎರಡು ಕ್ಷೇತ್ರಗಳ ಸ್ಪರ್ಧೆ ವಿಚಾರ

ಸಿದ್ದರಾಮಯ್ಯ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ, ಮಾತನಾಡಿದ ಯತೀಂದ್ರ ತಂದೆಯವರ ನಿರ್ಧಾರಕ್ಕೆ ನಾನು ಬದ್ಧ. ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೇ ನಾವು ಅವರಿಗೆ ಸಪೋರ್ಟ್ ಮಾಡುತ್ತೇವೆ. ವರುಣಾ ಹಾಗೂ ಕೋಲಾರ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಕೆಲಸ ಮಾಡುತ್ತೇವೆ. ಕೋಲಾರಕ್ಕೆ ಹೋಗುವ ಮುನ್ನ ವರುಣದಿಂದ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದೆ. ಕೋಲಾರದ ನಾಯಕರು ಸ್ಪರ್ಧೆ ಮಾಡುವಂತೆ ಒತ್ತಡ ಹೇರಿದ್ರು. ಅಲ್ಲಿಯೂ ಸಹ ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಅಂಥಾ ಹೇಳಿದ್ರು. ಸದ್ಯಕ್ಕೆ ಹೈಕಮಾಂಡ್ ನವರು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದ್ದಾರೆ. ಕೋಲಾರದಲ್ಲಿ ಬ್ಯಾಕ್ ಅಪ್ ಗೋಸ್ಕರ ತಂದೆ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆ. ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿಯಲ್ಲಿ ವರುಣ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದ್ದಾರೆ..