ಆಂಧ್ರ ಪ್ರದೇಶದ (Andra pradesh) ತಿರುಮಲದ ತಿಮ್ಮಪ್ಪ ದೇವಾಲಯದ (Tirupati temple) ಮೇಲೆ ವಿಮಾನ ಹಾರಾಟ ನಡೆದಿದೆ. ಈ ರೀತಿ ದೇವಾಲಯದ ಮೇಲೆ ವಿಮಾನ ಹಾರಾಟವು ಆಗಮ ಶಾಸ್ತ್ರಕ್ಕೆ ವಿರುದ್ಧವಾಗಿದೆ. ಹೀಗಾಗಿ ಸಂಪ್ರದಾಯವನ್ನು ಉಲಂಘಿಸಿ ತಿಮ್ಮಪ್ಪ ದೇವಾಲಯದ ಮೇಲೆ ವಿಮಾನ ಹಾರಾಟ ಮಾಡಲಾಗಿದೆ ಎಂಬ ಆಕ್ರೋಶ ಕೇಳಿಬಂದಿದೆ.

ತಿರುಪತಿ ತಿಮ್ಮಪ್ಪನ ದೇವಾಲಯದ ಮೇಲೆ ವಿಮಾನ ಹಾರಾಟಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಕ್ಷಣವೇ ತಿರುಮಲವನ್ನು ವಿಮಾನ ಹಾರಾಟ ನಿಷೇಧಿತ ಪ್ರದೇಶ ಎಂದು ಘೋಷಿಸಲು ಆಗ್ರಹ ಕೇಳಿಬಂದಿದೆ. ಸದ್ಯ ಆಂಧ್ರದ ಟಿಡಿಪಿ ಪಕ್ಷದ ರಾಮ ಮೋಹನ್ ನಾಯ್ಡು ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವರಿದ್ದಾರೆ.

ಹೀಗಾಗಿ ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆಯಿಂದ ವಿಮಾನ ಹಾರಾಟ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲು ಭಕ್ತರು ಆಗ್ರಹಿಸಿದ್ದಾರೆ.ತಿಮ್ಮಪ್ಪನ ದೇವಾಲಯದ ಮೇಲೆ ವಿಮಾನ ಹಾರಾಟದಿಂದ ಭಕ್ತರ ಭಾವನೆಗೂ ಧಕ್ಕೆಯಾಗಿದೆ.ಇಷ್ಚು ದಿನ ಸಂಪ್ರದಾಯದಂತೆ ವಿಮಾನ ಹಾರಾಟಕ್ಕೆ ಅವಕಾಶ ಕೊಟ್ಟಿರಲಿಲ್ಲ.