ನವದೆಹಲಿ : ಕುಸ್ತಿಪಟುಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (DELHI) ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ನಿನ್ನೆ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಟನೆ ನಡೆಸುತ್ತಿದ್ದ ಕುಸ್ತಿಪಟುಗಳನ್ನ ದೆಹಲಿ ಪೊಲೀಸರು ಬಂಧಿಸಿ, ಅವರ ವಿರುದ್ಧ ಎಫ್ ಐಆರ್ (FIR) ದಾಖಲಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat ) ಮತ್ತು ಸಂಗೀತಾ ಫೋಗಟ್ (Sangeeta Phogat) ಅವರು ಪೊಲೀಸ್ ವಾಹನದಲ್ಲಿ (POLICE) ನಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಕುಸ್ತಿಪಟುಗಳ ತಿರುಚಿದ ಫೋಟೋಕ್ಕೆ ಬಾಲಿವುಡ್ ನಟಿ ಉರ್ಫಿ ಜಾವೇದ್ (Actress Urfi Javed) ಕಿಡಿಕಾರಿದ್ದು, ಜನರು ತಮ್ಮ ಸುಳ್ಳುಗಳನ್ನು ಸಾಬೀತುಪಡಿಸಲು ಏಕೆ ಈ ರೀತಿಯ ಫೋಟೋ ಹಾಕುತ್ತಾರೋ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಈ ಕುರಿತು ಸಾಕ್ಷಿ ಮಲ್ಲಿಕ್ ಪ್ರತಿಕ್ರಿಯೆ ನೀಡಿದ್ದಾರೆ, ಹೀಗೆ ಮಾಡಲು ನಿಮಗೆ ನಾಚಿಕೆ ಆಗ್ವಲ್ಲಾ ಎಂದಿದ್ದಾರೆ. ವಿಚಲಿತರಾದ ಯುವತಿಯರ ಮುಖಕ್ಕೆ ನಗುತ್ತಿರುವ ಫೋಟೋವನ್ನು ಅಂಟಿಸಲಾಗಿದೆ. ಅವರಿಗೆ ಹೃದಯನೇ ಇಲ್ಲ ಅನಿಸುತ್ತದೆ. ನಮ್ಮ ಅಪಖ್ಯಾತಿಗೆ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಸಾಕ್ಷಿ ಮಲ್ಲಿಕ್ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಕುಸ್ತಿ ಅಸೋಸಿಯೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ರಾಷ್ಟ್ರ ರಾಜಧಾನಿ ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ ದೆಹಲಿ ಪೊಲೀಸರು(Delhi Police) ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಭಾರತದ ಅಗ್ರ ಕುಸ್ತಿಪಟುಗಳು ಸೇರಿದಂತೆ 700ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದರು.